Advertisement

ಘಟಪ್ರಭಾ ಪ್ರವಾಹ ; ನಡುಗಡ್ಡೆಯಲ್ಲಿ ಸಿಲುಕಿದ ಯೋಧರು 

12:54 PM Aug 15, 2019 | Team Udayavani |

ಇನ್ನಿಬ್ಬರು ಯೋಧರ ರಕ್ಷಣೆಗೆ ಎನ್‌ಡಿಆರ್‌ಎಫ್ ತಂಡ

Advertisement

ಬಾಗಲಕೋಟೆ : ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆ ವೇಳೆ ಕೆಟ್ಟು ಹೋಗ ಬೋಟ್ ಅನ್ನು ಬಿಟ್ಟು ಬಂದಿದ್ದ ಭಾರತೀಯ ಯೋಧರು, ಮಂಗಳವಾರ ಬೋಟ್ ತರಲು ಹೋದಾಗ, ತಾವಿದ್ದ ಬೋಟ್ ಕೂಡ ಕೆಟ್ಟಿದ್ದರಿಂದ ಘಟಪ್ರಭಾ ನದಿ ನಡುಗಡ್ಡೆಯಲ್ಲಿ ಸಿಲುಕಿ ಸಂಕಷ್ಟ ಎದುರಿಸಿದ್ದಾರೆ.

ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಮನೆಯ ಮಾಳಿಗೆ ಮೇಲೆ ಆಶ್ರಯ ಪಡೆದಿದ್ದ ಮುಧೋಳದ ಸದಾನಂದ ಬಾಗೋಡಿ ಸಹಿತ 13 ಜನರ ರಕ್ಷಣೆಗಾಗಿ ಆ. 9ರಂದು ಭಾರತೀಯ ಯೋಧರು ಬೋಟ್ ಮೂಲಕ ಹೋಗಿದ್ದರು. ಆ ವೇಳೆ ಬೋಟ್ ಕೆಟ್ಟಿದ್ದರಿಂದ ಅದನ್ನು ಅಲ್ಲಿಯೇ ಬಿಟ್ಟು, ಬೇರೊಂದು ಬೋಟ್ ತರಿಸಿ, ಜನರನ್ನು ರಕ್ಷಣೆ ಮಾಡಿದ್ದರು.

ಆದರೆ, ಆ.9ರಂದು ರೂಗಿ ಬಳಿ ನೀರಿನಲ್ಲಿ ಗಿಡಕ್ಕೆ ಕಟ್ಟಿ ಬಂದಿದ್ದ ಬೋಟ್ ಅನ್ನು ತರಲು ಯೋಧರು, ಮಂಗಳವಾರ ಮಧ್ಯಾಹ್ನ ಮತ್ತೊಂದು ಬೋಟ್ ಮೂಲಕ ಹೋಗಿದ್ದರು. ಆದರೆ, ಆ ಬೋಟ್ ಕೂಡ ಕೆಟ್ಟು ಹೋಗಿದೆ. ಅಲ್ಲದೇ ಘಟಪ್ರಭಾ ನದಿಯಲ್ಲಿ ಹೆಚ್ಚು ಸೆಳೆಯು ಉಂಟಾಗಿದ್ದರಿಂದ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದರು. ಕೂಡಲೇ ಎನ್‌ಡಿಆರ್‌ಎಫ್ ತಂಡದವರು ಇನ್ನೊಂದು ಬೋಟ್ ಮೂಲಕ ಹೋಗಿ, ನಾಲ್ವರು ಸೈನಿಕರು ಕರೆ ತಂದಿದ್ದಾರೆ.

Advertisement

ಇನ್ನಿಬ್ಬರು ಸೈನಿಕರಾದ ವಿವೇಕ ಮತ್ತು ಬಾಲಕೃಷ್ಣ ಎಂಬುವರು, ಗಿಡದ ಸಹಾಯದೊಂದಿಗೆ ನಡುಗಡ್ಡೆಯಲ್ಲಿದ್ದು, ಅವರ ರಕ್ಷಣೆಗಾಗಿ ಜಮಖಂಡಿಯಿಂದ ಎನ್‌ಡಿಆರ್‌ಎಫ್‌ನ ಮತ್ತೊಂದು ಬೋಟ್ ತರಿಸಲಾಯಿತು. ರಾತ್ರಿ 8ರ ವರೆಗೂ ಆ ಇಬ್ಬರು ಸೈನಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಕಾರ್ಯಾಚರಣೆ ನಡೆದಿದೆ. ಹೊಸ ಬೋಟ್ ಮೂಲಕ ಅವರನ್ನು ಹೊರ ತರಲಾಗುತ್ತಿದೆ ಎಂದು ಮುಧೋಳ ತಹಶಿಲ್ದಾರ ಸಂಜಯ ಇಂಗಳೆ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next