ಜಮ್ಮು: ಜಮ್ಮು-ಕಾಶ್ಮೀರದ ಪೂಂಛ… ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೇನೆ ಮಂಗಳವಾರ ಕದನ ವಿರಾಮ ಉಲ್ಲಂ ಸಿದ್ದು, ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಗಾಯಗೊಂಡಿದ್ದ ಯೋಧನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿ ಸದೇ ಅವರು ಅಸುನೀಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಸೋಮವಾರವೂ ಪಾಕ್ ನಡೆಸಿದ ದಾಳಿಗೆ ಯೋಧರೊಬ್ಬರು ಗಾಯಗೊಂ ಡಿ ದ್ದರು. ಆದರೆ, ಭಾರತವೇ ಕದನ ವಿರಾಮ ಉಲ್ಲಂ ಸುತ್ತಿದೆ ಎಂದು ಪಾಕ್ ಮಂಗಳವಾರ ಭಾರತದ ಡೆಪ್ಯುಟಿ ಹೈಕಮಿ ಷನರ್ ಅನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿದೆ.
ಗಡಿಯಲ್ಲಿ ಬೇಲಿ: ಏತನ್ಮಧ್ಯೆ, ಭಾರತ-ಪಾಕ್ ಗಡಿಯಲ್ಲಿ ಸೆನ್ಸರ್ ಇರುವಂಥ ವರ್ಚುವಲ್ ಬೇಲಿ ಅಳವಡಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಗೆ ಹೇಳಿದ್ದಾರೆ. ಇದೇ ವೇಳೆ, 2014ರಿಂದೀಚೆಗೆ ಒಟ್ಟು 310 ಮಂದಿ ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಶ್ ಭಾಮ್ರೆ ರಾಜ್ಯಸಭೆಗೆ ತಿಳಿಸಿದ್ದಾರೆ. ಯೋಧರ ಮೇಲಿನ ಒತ್ತಡ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವು ದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಉಗ್ರರ ಅಡಗುತಾಣ ಪತ್ತೆ: ಈ ನಡುವೆ, ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆ ಯಲ್ಲಿ ಭದ್ರತಾ ಪಡೆಗಳು ಉಗ್ರರ ಅಡಗುತಾ ಣವನ್ನು ಪತ್ತೆ ಹಚ್ಚಿವೆ. ಯುವಕ ರನ್ನು ಉಗ್ರ ಸಂಘಟನೆಗೆ ಸೇರಲು ಉತ್ತೇ ಜಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ಪಿ ವಿಚಾರಣೆ: ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದಲ್ಲಿ ಪ್ರತ್ಯೇಕತಾ ವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಪುತ್ರರು ಮತ್ತು ಜಮ್ಮು-ಕಾಶ್ಮೀರದ ಡಿವೈಎಸ್ಪಿ ಫಹೀಂ ಅಲಿ ಅವರನ್ನು ಎನ್‌ಐಎ ಮಂಗಳವಾರ ವಿಚಾರಣೆ ನಡೆಸಿದೆ. ಫಹೀಂ ಅಲಿ ಅವರೇ ಪ್ರತ್ಯೇಕತಾವಾದಿ ನಾಯಕ ಮಿರ್ವೇಜ್ ಉಮರ್ ಫಾರೂಕ್ ಅವರ ಭದ್ರತೆಯನ್ನು ನೋಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ.