ಮಂಗಳೂರು: ವಿವಿಧ 9 ಪ್ರರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು ವರ್ಷದಿಂದ ತಲೆಮರೆಸಿಕೊಂಡಿದ್ದ ಸಂತೋಷ್ ಅಲಿಯಾಸ್ ಸಂತು (36) ಎಂಬವನನ್ನು ಕೊಣಾಜೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಟ್ವಾಳದ ಮುಗ್ಧಾಲ್‌ಗುಡ್ಡೆ ಮನೆ ನಿವಾಸಿಯಾದ ಈತ ಮಂಗಳೂರು ನಗರ, ದ.ಕ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಒಂದು ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ ಹೊಂದಿದ್ದ.
ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್. ನಾಯಕ ಅವರ ನಿರ್ದೇಶನದಂತೆ ಕೊಣಾಜೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಕೀರ್ತಿಕುಮಾರ್, ಪೊಲೀಸ್ ಉಪ ನಿರೀಕ್ಷಕರಾದ ಅಶೋಕ್, ಸಿಬಂದಿಗಳಾದ ಎಚ್.ಸಿ. ಶೈಲೇಂದ್ರ, ಶಿವಕುಮಾರ್, ಪುರೊಷೋತ್ತಮ್ ಅವರ ತಂಡ ಆರೋಪಿಯನ್ನು ದಸ್ತಗಿರಿ ಮಾಡಿದೆ.