ಬ್ಯಾಂಕಾಕ್: ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ದಿಢೀರ್ ನಿಧನದ ತನಿಖೆಯನ್ನು ಥಾಯ್ಲೆಂಡ್ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಶೇನ್ ವಾರ್ನ್ ತಂಗಿದ್ದ ಕೋಣೆಯಲ್ಲಿ ಮತ್ತು ಬಾತ್ ಟವೆಲ್ ಗಳ ಮೇಲೆ “ರಕ್ತದ ಕಲೆಗಳನ್ನು” ತನಿಖಾಧಿಕಾರಿಗಳು ಕಂಡುಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ.
52 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಶುಕ್ರವಾರ ಸಾವನ್ನಪ್ಪಿದರು. ಅವರಿಗೆ ಹೃದಯಾಘಾತವಾಗಿತ್ತು ಎಂದು ಶಂಕಿಸಲಾಗಿದೆ.
ತನಿಖಾಧಿಕಾರಿಗಳು ವಾರ್ನ್ ತಂಗಿದ್ದ ಕೋಣೆಯಲ್ಲಿ ನೆಲ ಮತ್ತು ಸ್ನಾನದ ಟವೆಲ್ ಗಳ ಮೇಲೆ ರಕ್ತದ ಕಲೆಯನ್ನು ಪತ್ತೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಅಧಿಕಾರಿಗಳು ಥಾಯ್ಲೆಂಡ್‌ಗೆ ಆಗಮಿಸಿದ್ದು, ಅವರ ಮೃತದೇಹವನ್ನು ಸ್ವದೇಶಕ್ಕೆ ತರಲು ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಬ್ಯಾಟಿಂಗ್ ನಂತರ ಬೌಲಿಂಗ್ ನಲ್ಲೂ ಜಡೇಜಾ ಮಿಂಚು; 400 ರನ್ ಹಿನ್ನಡೆ ಅನುಭವಿಸಿದ ಲಂಕಾ!
ವಾರ್ನ್ ಅವರಿಗೆ ಆಸ್ಟ್ರೇಲಿಯಾವನ್ನು ತೊರೆಯುವ ಮೊದಲು ಎದೆನೋವು ಕಾಣಿಸಿಕೊಂಡಿತ್ತು.ಹೃದ್ರೋಗ ಮತ್ತು ಆಸ್ತಮಾದ ಇತಿಹಾಸವನ್ನು ವಾರ್ನ್ ಹೊಂದಿದ್ದರು ಎಂದು ತಿಳಿಯಲಾಗಿದೆ. ವಿಲ್ಲಾವನ್ನು ಶೋಧಿಸುವಾಗ ವಾರ್ನ್ ನ ಕೋಣೆಯ ನೆಲದ ಮೇಲೆ ಮತ್ತು ಸ್ನಾನದ ಟವೆಲ್‌ಗಳ ಮೇಲೆ ತನಿಖಾಧಿಕಾರಿಗಳು ರಕ್ತದ ಕಲೆಗಳನ್ನು ಕಂಡುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.