Advertisement

2023ರ ವಿಶ್ವಕಪ್‌ ಆಡುವ ಯೋಜನೆಯಲ್ಲಿ ವಾರ್ನರ್‌

01:25 AM May 14, 2020 | Sriram |

ಮೆಲ್ಬರ್ನ್: ಎಲ್ಲ ಮಾದರಿಗಳ ಕ್ರಿಕೆಟಿಗೆ ಸಲ್ಲುವ ಬಿಗ್‌ ಹಿಟ್ಟಿಂಗ್‌ ಆರಂಭಿಕನೆಂದರೆ ಆಸ್ಟ್ರೇಲಿಯದ ಡೇವಿಡ್‌ ವಾರ್ನರ್‌. ಈ ಲಾಕ್‌ಡೌನ್‌ ಕಾಲದಲ್ಲಿ ಅವರು ಬಯಕೆಯೊಂದನ್ನು ವ್ಯಕ್ತಪಡಿಸಿದ್ದಾರೆ. 2023ರಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡಬೇಕು ಎಂದಿದ್ದಾರೆ.‌

Advertisement

“ಕಾಲ ಉರುಳಿತ್ತಿದೆ. ಕಾಲುಗಳು ಸೋಲುತ್ತಿವೆ. ಸದ್ಯದ ಮಟ್ಟಿಗೆ ನಾನು ಫಿಟ್‌ ಆಗಿದ್ದೇನೆ. ರನ್ನಿಂಗ್‌ ಬಿಟ್ವೀನ್‌ ದಿ ವಿಕೆಟ್‌ ಪರಾÌಗಿಲ್ಲ. ಏನೇ ಆದರೂ ನಾನೊಂದು ಗುರಿ ಇರಿಸಿಕೊಂಡಿದ್ದೇನೆ. ಅದು 2023ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡುವುದು…’ ಎಂದು ಕ್ರಿಕೆಟ್‌ ವೆಬ್‌ಸೈಟ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸದ್ಯ ಡೇವಿಡ್‌ ವಾರ್ನರ್‌ ವಯಸ್ಸು 33 ವರ್ಷ. ಟಿ20 ಕ್ರಿಕೆಟಿನಲ್ಲಿ ಈಗಲೂ ಮಿಂಚು ಹರಿಸುತ್ತಿದ್ದಾರೆ. 2021ರಲ್ಲಿ ಆಸೀಸ್‌ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಬಳಿಕ ಚುಟುಕು ಕ್ರಿಕೆಟಿನಿಂದ ದೂರ ಸರಿದು ಯುವ ಆಟಗಾರರಿಗೆ ಅವಕಾಶ ಕಲ್ಪಿಸುವುದು ವಾರ್ನರ್‌ ಅವರ ಯೋಜನೆ. ಆಗ ಏಕದಿನ ಕ್ರಿಕೆಟಿಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದರಿಂದ 2023ರ ವಿಶ್ವಕಪ್‌ ತನಕ ಆಡಬಹುದೆಂಬ ಲೆಕ್ಕಾಚಾರ ಈ ಕಾಂಗರೂ ನಾಡಿನ ಎಡಗೈ ಆಟಗಾರನದ್ದು. ಆಗ ಅವರಿಗೆ 36 ವರ್ಷವಾಗಿರುತ್ತದೆ. ವಿಶ್ವಕಪ್‌ ಮಟ್ಟಿಗೆ ವಯಸ್ಸನ್ನು ಮೀರಿ ನಿಲ್ಲಬಹುದು ಎನ್ನುತ್ತಾರೆ ಡೇವಿಡ್‌ ವಾರ್ನರ್‌.

Advertisement

Udayavani is now on Telegram. Click here to join our channel and stay updated with the latest news.

Next