Advertisement

500 ರನ್‌ ಸವಾಲು ಹಾಕಿದ್ದ ವಾರ್ನರ್‌!

09:13 AM May 03, 2019 | keerthan |

ಹೈದರಾಬಾದ್‌: ಹನ್ನೆರಡನೇ ಐಪಿಎಲ್‌ನಲ್ಲಿ ಸನ್‌ರೈಸರ್ ತಂಡದ ಡೇವಿಡ್‌ ವಾರ್ನರ್‌ ಆಟ ಮುಗಿದಿದೆ. ಅವರೀಗ ವಿಶ್ವಕಪ್‌ ತಯಾರಿಗಾಗಿ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದಾರೆ. ಈ ಸಂದರ್ಭದಲ್ಲಿ ತಂಡದ ಮೆಂಟರ್‌ ವಿವಿಎಸ್‌ ಲಕ್ಷ್ಮಣ್‌, ಆಸೀಸ್‌ ಆಟಗಾರ ಹಾಕಿದ ಸವಾಲೊಂದನ್ನು ಪ್ರಸ್ತಾವಿಸಿದ್ದಾರೆ. ವಾರ್ನರ್‌ ಈ ಐಪಿಎಲ್‌ನಲ್ಲಿ 500 ರನ್‌ ಪೇರಿಸುವುದಾಗಿ ಸವಾಲು ಹಾಕಿದ್ದರಂತೆ!

Advertisement

ಸರಣಿಯ ನಡುವೆ ಹೈದರಾ ಬಾದ್‌ನಲ್ಲಿದ್ದಾಗ ಡೇವಿಡ್‌ ವಾರ್ನರ್‌ ತಂಡದ ಪ್ರಧಾನ ಕೋಚ್‌ ಟಾಮ್‌ ಮೂಡಿ ಅವರಿಗೆ ಸಂದೇಶವೊಂದನ್ನು ರವಾನಿಸಿ, ಈ ಐಪಿಎಲ್‌ನಲ್ಲಿ ತಾನು 500 ರನ್‌ ಗಳಿಸಲಿದ್ದೇನೆ ಎಂದಿದ್ದರಂತೆ. ಲಕ್ಷ್ಮಣ್‌ ಇದನ್ನು ತಮ್ಮ ಅಂಕಣವೊಂದರಲ್ಲಿ ಉಲ್ಲೇಖೀಸಿದ್ದಾರೆ. ವಾರ್ನರ್‌ 692 ರನ್ನುಗಳೊಂದಿಗೆ ಈ ಐಪಿಎಲ್‌ ಮುಗಿಸಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next