ಹೊಸದಿಲ್ಲಿ: ಬಿಪಿನ್ ರಾವತ್ ಅವರು ಕೊನೆಯದಾಗಿ ಮಂಗಳವಾರ (ಡಿ.7) ಹೊಸದಿಲ್ಲಿಯಲ್ಲಿ ಬಿಐಎಂಎಸ್‌ಟಿಇಸಿ ರಾಷ್ಟ್ರಗಳ ಪ್ಯಾನೆಕ್ಸ್ 21ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ಮತ್ತು ಅದರ ಹೊಸ ರೂಪಾಂತರಿ ಒಮಿಕ್ರಾನ್ ಬಗ್ಗೆ ಮಾತನಾಡಿದ್ದ ಅವರು, ಈ ಜೈವಿಕ ಯುದ್ಧ ಬಗ್ಗೆ ನಾವು ಹೆಚ್ಚು ಎಚ್ಚರಿಕೆಯಿಂದಿರಬೇಕು ಎಂದಿದ್ದರು.
ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಲ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ರಾಷ್ಟ್ರ ಗಳ ಒಕ್ಕೂಟ ಸಭೆಯಲ್ಲಿ ಮಾತನಾಡಿದ್ದ ಅವರು, “ಮುಂದಿನ ದಿನಗಳಲ್ಲಿ ಜೈವಿಕ ಯುದ್ಧ ಇನ್ನಷ್ಟು ವಿಕಸನಗೊಳ್ಳವ ಸಾಧ್ಯತೆಯಿದೆ. ನಾವು ಅದರ ಬಗ್ಗೆ ಹೆಚ್ಚು ಎಚ್ಚರವಾಗಿರಬೇಕು’ ಎಂದಿದ್ದರು.
ಇದನ್ನೂ ಓದಿ:ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿಗೆ ಆದ್ಯತೆ ನೀಡಿ; ಸಿಎಂ
“ಇತ್ತೀಚಿನ ದಿನಗಳಲ್ಲಿ ಈ ಜೈವಿಕ ಯುದ್ಧ ಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ಇದೊಂದು ರೀತಿಯಲ್ಲಿ ಹೊಸ ಯುದ್ಧ ಶೈಲಿಯೆನ್ನ ಬಹುದು. ಈ ರೀತಿಯ ಯುದ್ಧದಿಂದ ನಮ್ಮನ್ನು ನಾವು ಕಾಪಾಡಿ ಕೊಳ್ಳು ವುದಕ್ಕೆ ನಾವೆಲ್ಲರೂ ಒಟ್ಟಾಗಿ ಇನ್ನಷ್ಟು ಶಕ್ತಿಯುತವಾಗಿ ಹೋರಾಡಬೇಕಾಗುತ್ತದೆ. ಒಂದು ವೇಳೆ ಈ ವೈರಸ್ ಮತ್ತೆ ಬೇರೆ ರೂಪ ಪಡೆದುಕೊಂಡು ದಾಳಿ ನಡೆಸಿದರೂ ಅದರ ವಿರುದ್ಧ ಹೋರಾಡುವುದಕ್ಕೆ ನಾವು ಸಿದ್ಧರಿರಬೇಕು. ನಾವೆಲ್ಲರೂ ಒಟ್ಟಾಗಿ ಕೈ ಜೋಡಿಸಿದರೆ ಅದು ಸಾಧ್ಯ’ ಎಂದು ಬಿಪಿನ್ ಹೇಳಿದ್ದರು. ಈ ಕಾರ್ಯಕ್ರಮದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಕೂಡ ಭಾಗವಹಿಸಿದ್ದರು.