Advertisement

ಬಾಲಕಿ ಇದ್ದ ವಾರ್ಡ್‌ ಕಂಟೈನ್ಮೆಂಟ್‌ ಝೋನ್‌

04:35 AM May 23, 2020 | Lakshmi GovindaRaj |

ಪಾಂಡವಪುರ: ತಾಲೂಕಿನ ಚಿನಕುರಳಿಯಲ್ಲಿ ರಾಣೆಬೆನ್ನೂರು ಮೂಲದ ಬಾಲಕಿಗೆ ಕೋವಿಡ್‌ 19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಕೆ ತಂದೆ-ತಾಯಿಯೊಂದಿಗೆ ವಾಸವಿದ್ದ ವಾರ್ಡ್‌ನ್ನು ಕಂಟೈನ್ಮೆಂಟ್‌ ಝೋನ್‌ ಎಂದು  ಘೋಷಿಸಿರುವು ದಾಗಿ ಶಾಸಕ ಪುಟ್ಟರಾಜು ಹೇಳಿದರು. ಪಟ್ಟಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಶಾಸಕರು, ಬಾಲಕಿಯ ತಂದೆ ಕಳೆದ ಐದಾರು ವರ್ಷಗಳಿಂದ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು, ಇಲ್ಲಿಯೇ ವಾಸವಾಗಿದ್ದರು.

Advertisement

ಅವರು ಮೂಲತಃ ರಾಣಿಬೆನ್ನೂರಿನವರಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಈತ ಕುಟುಂಬ ಸಮೇತ ಯುಗಾದಿ ಹಬ್ಬಕ್ಕೆಂದು ರಾಣಿಬೆನ್ನೂರಿಗೆ ತೆರಳಿದ್ದರು. ಲಾಕ್‌ಡೌನ್‌ ಆದ ಬಳಿಕ  ಎಲ್ಲರು 2 ತಿಂಗಳು ತಮ್ಮೂರಿನಲ್ಲಿಯೇ ವಾಸವಿದ್ದರು. ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‌ಡೌನ್‌ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಸ್ವಂತ ಕಾರಿನಲ್ಲಿಯೇ ಹೆಂಡತಿ, ಮಕ್ಕಳ ಸಮೇತ ಚಿನಕುರಳಿಗೆ ವಾಪಸಾಗಿದ್ದರು ಎಂದರು.

ವಿಷಯ ತಿಳಿದು ತಕ್ಷಣವೇ ಎಲ್ಲರನ್ನು ಅವರ ಸಂಬಂಧಿಕರ ಮನೆಯಲ್ಲಿ ಅಧಿಕಾರಿಗಳು ಹೋಂ ಕ್ವಾರೆಂಟೈನ್‌ ಮಾಡಿದ್ದರು. ಬಳಿಕ 4 ಮಂದಿಯನ್ನು ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಿದ್ದು, ಹೆಣ್ಣುಮಗುವಿಗೆ ಕೋವಿಡ್‌ 19 ದೃಢಪಟ್ಟಿದೆ.  ಮಗುವಿನ ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ, ತಾಯಿ ಮತ್ತೂಂದು ಮಗುವಿಗೆ ನೆಗಟಿವ್‌ ಬಂದಿದೆ. ಹಾಗಾಗಿ ಈ ಮಗುವಿಗೆ ಕೋವಿಡ್‌ 19 ಹೇಗೆ ಬಂತು ಎನ್ನುವುದರ ಬಗ್ಗೆ ನಮಗೂ ಅನುಮಾನವಿದ್ದು, ಮತ್ತೂಮ್ಮೆ ಮಗುವನ್ನು ಪರೀಕ್ಷೆಗೆ  ಒಳಪಡಿಸುವಂತೆ  ಒತ್ತಾಯಿಸಿದ್ದೇನೆ ಎಂದರು.

ಮುಂಬೈನಿಂದ ಬರುತ್ತಿರುವವರಿಂದಲೂ ಕೋವಿಡ್‌ 19 ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯ ಜನರು ಮಂಜಾಗ್ರತೆ ವಹಿಸುವುದು ಅಗತ್ಯ. ಕೋವಿಡ್‌ 19 ಕಡಿಮೆಯಾಗುವವರೆಗೂ ಸರ್ಕಾರ  ಲಾಕ್‌ಡೌನ್‌ ಮುಂದುವರಿಸಿದ್ದರೆ ಇಷ್ಟು ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಹೇಳಿದರು. ತಹಶೀಲ್ದಾರ್‌ ಪ್ರಮೋದ್‌ ಎಲ್‌ .ಪಾಟೀಲ್‌, ಉಪವಿಭಾಗಾಧಿಕಾರಿ ಶೈಲಜಾ, ಡಿವೈಎಸ್‌ಪಿ ಅರುಣ್‌ ನಾಗೇಗೌಡ, ತಾಪಂ ಇಒ ಮಹೇಶ್‌, ಸಿಪಿಐ  ರವೀಂದ್ರ, ಟಿಎಚ್‌ಒ ಡಾ. ಅರವಿಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next