Advertisement
ಬಡತನ ಮತ್ತು ಆರೋಗ್ಯ ವ್ಯವಸ್ಥೆ ತಾಂಡವ15 ವರ್ಷಗಳ ಕಾಲ ನಡೆದಿದ್ದ ಲೆಬನಾನ್‌ನಲ್ಲಿನ ನಾಗರಿಕ ಸಂಘರ್ಷಗಳು 1990ರಲ್ಲಿ ಕೊನೆಗೊಂಡಿತ್ತು. ಆ 15 ವರ್ಷಗಳಲ್ಲಿ ಕಾಣದ ಕಹಿ ದಿನಗಳನ್ನು ಈ ಕೋವಿಡ್ 19 ಪರಿಸ್ಥಿತಿ ಸೃಷ್ಟಿಸಿದೆ.ಯುದ್ಧ ಮತ್ತು ಬಳಿಕ ನಡೆದ ಭ್ರಷ್ಟಾಚಾರಗಳಿದ ದೇಶದ ಆರ್ಥಿಕತೆ ತತ್ತರಿಸಿತ್ತು. ಕ್ರಮೇಣ ರಾಷ್ಟ್ರ ಈ ಸಂಕಷ್ಟಗಳಿಂದ ಪಾರಾಗುತ್ತಿದೆ ಎನ್ನುತ್ತಿದ್ದಾಗಲೇ ಕೋವಿಡ್ ಬಡಿದಿದೆ. ಬಡತನ ಮತ್ತು ಆರೋಗ್ಯ ವ್ಯವಸ್ಥೆ ಆ ಪ್ರದೇಶಗಳಲ್ಲಿ ತಾಂಡವವಾಡುತ್ತಿದೆ.
ಭ್ರಷ್ಟಾಚಾರ, ಮತ್ತು ನಾಗರಿಕ ಯುದ್ಧಗಳು ಲೆಬನಾನ್‌ನ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳಿದೆ. ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಉಳಿದ ಕಾರ್ಮಿಕರ ವೇತನಗಳು ಅರ್ಧದಷ್ಟು ಕಡಿತಗೊಳಿಸಲಾಗಿದೆ. ಬ್ಯಾಂಕುಗಳೂ ಯುಎಸ್ ಡಾಲರ್‌ಗಳನ್ನು ನೀಡುತ್ತಿಲ್ಲ.
Related Articles
ಒಂದೆಡೆ ಕೋವಿಡ್ ಜೀವಗಳನ್ನು ಹಿಂಡುತ್ತಿದ್ದರೆ, ಅತ್ತ ರಾಜಕೀಯ ಜೋರಾಗಿದೆ. ಕಡು ಬಡವರಿಗೆ ಸಹಾಯ ಮಾಡಲು ವಿಶ್ವ-ಬ್ಯಾಂಕ್ ಅಂಗಸಂಸ್ಥೆ ಯೋಜನೆಯೊಂದನ್ನು ರೂಪಿಸಿತ್ತು. ಇದರನ್ವಯ ಸುಮಾರು 1.50 ಲಕ್ಷ ಕುಟುಂಬಗಳು ತಮ್ಮ ಹೆಸರುಗಳನ್ನು ರಾಷ್ಟ್ರೀಯ ಬಡತನ ಗುರಿ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳಲಾಗಿತ್ತು. ಅವರಿಗೆ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ನಗದು ಪಾವತಿಸಲಾಗುತ್ತಿತ್ತು. ಆದರೆ ಈಗ ಅದು ದುರ್ಬಳಕೆಯಾಗುತ್ತಿದೆ.
Advertisement
ಪ್ರಧಾನ ಮಂತ್ರಿ ಹಸನ್ ಡಯಾಬ್ ಅವರು ಗುರುವಾರ ರಾಜಕೀಯ ಮತ್ತು ಚುನಾವಣೆಗಾಗಿ ಇವರನ್ನು ಬಳಸುವ ಸೂಚನೆ ನೀಡಿದೆ. ಅರ್ಹ ಬಡವರಿಗೆ ಅಗತ್ಯಗಳನ್ನು ನೀಗಿಸಲು ಧನ ಸಹಾಯ ಮಾಡುವ ಬದಲು, ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ಈ ಯೋಜನೆಗೆ ಸೇರಿಸಿಕೊಂಡಿದೆ. ಇದರ ಪರಿಣಾಮವಾಗಿ 1 ಲಕ್ಷ ಕುಟುಂಬಗಳು ನಗದು ಪಾವತಿಗಳಿಂದ ಹೊರಬಿದ್ದಿವೆ ಎನ್ನಲಾಗುತ್ತಿದೆ.
ತಿನ್ನಲು ಆಹಾರ ಇಲ್ಲ, ಕುಡಿಯಲು ನೀರಿಲ್ಲಈಗ ಜನರಿಗೆ ಕೋವಿಡ್ ಸೋಂಕಿನ ಭಯ ಒಂದೆಡೆಯಾದರೆ, ಅತ್ತ ಸರಕಾರ ನೀಡುತ್ತಿದ್ದ ಪ್ರೋತ್ಸಾಹಕ ಮೊತ್ತದಿಂದಲೂ ವಂಚಿತರಾಗಬೇಕಾದ ವಿಷಮ ಪರಿಸ್ಥಿತಿ. ತಿನ್ನಲು ಆಹಾರ ಇಲ್ಲ, ಕುಡಿಯಲು ನೀರಿಲ್ಲ. ಕೆಲಸ ಮಾಡಲು ಉತ್ಸಾಹವಿದ್ದರೂ ಉದ್ಯೋಗವಿಲ್ಲ. ಒಟ್ಟಿನಲ್ಲಿ ಲೆಬೆನಾನ್ ನ ಪರಿಸ್ಥಿತಿ ಯುದ್ಧದ ಕರಿನೆರಳಿನಿಂದ ಹೊರಬಂದಂತಿಲ್ಲ.