Advertisement

ಜನಸಾಮಾನ್ಯರ ಮೇಲಿನ ಯುದ್ಧ: ಖಾದರ್‌

01:35 AM Sep 11, 2019 | mahesh |

ಮಂಗಳೂರು: ಕೇಂದ್ರ ಸರಕಾರವು ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ ಉಲ್ಲಂಘನೆ ಪ್ರಕರಣಗಳಿಗೆ ಭಾರೀ ದಂಡ ಹಾಕುವ ಮೂಲಕ ಜನಸಾಮಾನ್ಯರ ಮೇಲೆ ಯುದ್ಧ ನಡೆಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

Advertisement

ಕೇವಲ ಪತ್ರಿಕೆ, ಚಾನೆಲ್‌ಗ‌ಳ ಮೂಲಕ ಹೇಳಿಕೆಗಳನ್ನು ನೀಡುವುದು ಪ್ರಧಾನಿ, ಗೃಹ ಸಚಿವರ ಕೆಲಸವಲ್ಲ. ಅಮೆರಿಕ, ದುಬೈನಲ್ಲಿನ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂ ಸುವ ಪ್ರಕರಣಗಳಿಗೆ ವಿಧಿಸಲಾಗುವ ದಂಡವನ್ನು ನೋಡಿ ಇಲ್ಲಿಯೂ ಕ್ರಮ ಕೈಗೊಂಡಿರಬಹುದು. ಆದರೆ ಅಮೆರಿಕದ 1 ಡಾಲರ್‌ ಮೌಲ್ಯ 72 ರೂ. ವಿದೇಶದ ಕ್ರಮವನ್ನು ಇಲ್ಲಿ ತೆಗೆದುಕೊಳ್ಳುವುದಾದರೆ ಸ್ವದೇಶಿ ಎಂಬ ಗುಣಗಾನ ಮಾಡುವುದೇಕೆ? ಹಾಗಿದ್ದರೆ ಬಾಯಲ್ಲಿ ಮಾತ್ರ ಸ್ವದೇಶಿ, ಕೃತಿಯಲ್ಲಿ ವಿದೇಶಿಯೇ? ಎಂದು ಪ್ರಶ್ನಿಸಿದರು.

ರಾಜ್ಯ ಸರಕಾರ ಈ ಕಾನೂನನ್ನು ಆರು ತಿಂಗಳು ಮುಂದೂಡಿ ನಿಯಮಗಳನ್ನು ಸರಿಪಡಿಸಿ, ಜನರಲ್ಲಿ ಜಾಗೃತಿ ಮೂಡಿಸಿ, ತೊಂದರೆಯನ್ನು ನಿವಾರಿಸಬೇಕು. ಇಲ್ಲವಾದಲ್ಲಿ ಈ ಕಾನೂನು ಸಾಮಾಜಿಕ ಸಮಸ್ಯೆಯಾಗಿ ದಂಡದ ಹಣ ಕಟ್ಟುವುದಕ್ಕಾಗಿ ಜನರನ್ನು ಅಪರಾಧ ಕೃತ್ಯಗಳಿಗೆ ಪ್ರೇರೇಪಿಸಲಿದೆ ಎಂದರು.

ಸೆಂಥಿಲ್‌ ಮಾತು ನಿಜವಾಗುತ್ತಿದೆ
ನಿರ್ಗಮಿತ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳು ಖಂಡನೀಯ. ಅವರ ಹೇಳಿಕೆಗಳಿಂದ ಸೆಂಥಿಲ್‌ ವ್ಯಕ್ತಪಡಿಸಿರುವ ಆತಂಕ ನಿಜವಾಗುತ್ತಿದೆ ಎಂದರು.

ಮಾಜಿ ಸಚಿವ ಡಿಕೆಶಿ ಅವರನ್ನು ಇಡಿ ಇಲಾಖೆ ವಶಕ್ಕೆ ಪಡೆದಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಅವರ ಬಂಧನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಅಸಂಬದ್ಧ ಹೇಳಿಕೆ ನೀಡಿದ್ದಾರೆ ಅವರು ತಮ್ಮ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಖಾದರ್‌ ಹೇಳಿದರು.

Advertisement

ಶಾಸಕ ಸುನಿಲ್‌ ಕುಮಾರ್‌ ಅವರು ನಿರ್ಗಮಿತ ಸೆಂಥಿಲ್‌ ಅವರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರು ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಹುಟ್ಟು ಸಾವಿನ ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ.

ಈಶ್ವರ ಉಳ್ಳಾಲ, ಎಂ.ಎಸ್‌. ಮುಹಮ್ಮದ್‌, ದಿನೇಶ್‌ ರೈ, ಪ್ರಕಾಶ್‌ ಶೆಟ್ಟಿ, ಜಬ್ಟಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next