Advertisement
ಈ ಮೂಲಕ ಅವರು ಇಸ್ರೇಲ್‌ಗೆ ಅಣುಬಾಂಬ್ ಬೆದರಿಕೆ ಒಡ್ಡಿದ್ದಾರೆ. ಡಮಾಸ್ಕಸ್‌ನಲ್ಲಿ ಇರಾನ್ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಲಾಯಿತು. ಇದು ನಮ್ಮ ಅಸ್ತಿತ್ವಕ್ಕೆ ಒಡ್ಡಲಾಗುತ್ತಿರುವ ಸವಾಲಾಗಿದೆ. ಹೀಗಾಗಿ ಅಣುಬಾಂಬ್ ತಯಾರಿಕೆಗೆ ನಿರ್ಬಂಧವಿದ್ದರೂ ನಾವು ಅದರತ್ತ ಚಿಂತಿಸಬೇಕಾಗುತ್ತದೆ ಎಂದು ಕರ್ರಾಜಿ ಹೇಳಿದ್ದಾರೆ.
ಗಾಜಾ ಪಟ್ಟಿಯ ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್ ರವಿವಾರ ರಾಫಾ ನಗರದೊಳಗೆ ನುಗ್ಗಿದೆ. ಈ ದಾಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ನಾಗರಿಕ ರಿಗೆ ಇರುವ ಕೊನೆಯ ಆಶ್ರಯ ತಾಣ ಈ ನಗರವಾಗಿದೆ ಎಂದು ಹೇಳಿದ್ದಾರೆ. ಆದರೆ ಇದು ಹಮಾಸ್ ಉಗ್ರರ ಭದ್ರಕೋಟೆ ಯಾಗಿದೆ ಎಂದು ಇಸ್ರೇಲ್ ಹೇಳಿದೆ. ಯುದ್ಧ ಆರಂಭವಾದಾಗಿ ನಿಂದ ಸುಮಾರು 3 ಲಕ್ಷ ಜನ ಸ್ಥಳಾಂತರವಾಗಿದ್ದಾರೆ.