Advertisement
ಇದಲ್ಲದೆ ಐರೋಪ್ಯ ಮತ್ತು ಮಧ್ಯಪ್ರಾಚ್ಯ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲಂಥ ಕ್ರೂಸರ್‌ಗಳು ಮತ್ತು ಡೆಸ್ಟ್ರಾಯರ್‌ಗಳನ್ನೂ ಕಳುಹಿಸುವ ಬಗ್ಗೆ ರಕ್ಷಣ ಸಚಿವ ಲಾಯ್ಡ ಆಸ್ಟಿನ್ ಆದೇಶಿಸಿದ್ದಾರೆ. ಹಮಾಸ್ ಮತ್ತು ಹೆಜ್ಬುಲ್ಲಾ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಇತ್ತೀಚೆಗೆ ನಡೆಸಿರುವ ದಾಳಿಯು ಮಧ್ಯ ಪ್ರಾಚ್ಯದಲ್ಲಿ ಸಂಘರ್ಷವನ್ನು ಹೆಚ್ಚಿಸಿದ್ದು, ಇಸ್ರೇಲ್ ಮೇಲೆ ಪ್ರತೀಕಾರಕ್ಕೆ ಇರಾನ್ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮಗಳನ್ನು ಕೈಗೊಂಡಿದೆ.
ಇಸ್ರೇಲ್‌ನಲ್ಲಿರುವ ಎಲ್ಲ ಭಾರತೀಯರೂ ಜಾಗರೂಕರಾಗಿರಬೇಕು. ಅನಗತ್ಯವಾಗಿ ಎಲ್ಲಿಗೂ ಪ್ರಯಾಣ ಬೆಳೆಸಬಾರದು. ಸ್ಥಳೀಯ ಸುರಕ್ಷತ ನಿಯಮಗಳನ್ನು ಪಾಲಿಸ ಬೇಕು ಎಂದು ಟೆಲ್ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ಜತೆಗೆ ನಾವು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದೇವೆ. ನಮ್ಮ ಎಲ್ಲ ನಾಗರಿಕರ ಸುರಕ್ಷತೆಗೆ ಬದ್ಧವಾಗಿದ್ದೇವೆ ಎಂದೂ ಹೇಳಿದೆ.