Advertisement
ಶಿಗ್ಗಾವಿ ತಾಲೂಕಿನ ತಡಸ್ ಗ್ರಾಮದಲ್ಲಿ ಬಿಜೆಪಿ ಪ್ರಚಾರದಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಮುನ್ನೂರು ಸ್ಥಾನ ಕೊಟ್ಟಿದ್ದರೆ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದಂತೆ ವಕ್ಫ್ ಕಾಯಿದೆ ತಿದ್ದುಪಡಿ ಮಾಡಲು ಅನುಕೂಲವಾಗುತ್ತಿತ್ತು. ಸಿಎಂ ಸಿದ್ದರಾಮಯ್ಯ ಜಮೀರ್‌ಗೆ ಎಲ್ಲ ವಕ್ಫ್ ಆಸ್ತಿ ಸಮೀಕ್ಷೆ ಮಾಡಲು ಹೇಳಿದ್ದರಿಂದ ಜಮೀರ್ ಮುಸ್ಲಿಮರಿಗೆ ಘೋರಿ ತೋರಿಸಿ ವಕ್ಫ್ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳುತ್ತಿದ್ದಾರೆ. ಅದಕ್ಕಾಗಿ ಈಗಲೇ ಎಲ್ಲ ಆಸ್ತಿಯನ್ನು ವಕ್ಫ್ ಆಸ್ತಿ ಮಾಡುತ್ತಿದ್ದಾರೆ ಎಂದರು.
ಶಿರಸಿಯ ಇಳಸೂರಿನಲ್ಲಿ ದಟ್ಟಾರಣ್ಯದ ಭೂಮಿಯೂ ವಕ್ಫ್ ಎಂದು ನಮೂದಾಗಿರುವುದಕ್ಕೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಯತ್ನಾಳ್ ಅರಣ್ಯ ಭೂಮಿ ವಕ್ಫ್ ಆಗಿರುವುದು ನಿಜಕ್ಕೂ ಹಾಸ್ಯಾಸ್ಪದ. ಅರಣ್ಯ ಸಂಪತ್ತು ಸರ್ಕಾರಕ್ಕೆ ಸೇರಿದ ಸ್ವತ್ತು. ಇದು ನಮ್ಮದು ಎಂದು ಹೇಳುವುದು ಮೂರ್ಖತನದ ಪರಮಾವಧಿ. ರೈತರಾಯಿತು, ಸರ್ಕಾರಿ ಕಚೇರಿ ಆಯಿತು, ಸ್ಮಾರಕಗಳ ಮೇಲೆ ಕಣ್ಣಿಟ್ಟಾಯಿತು, ಶ್ಮಶಾನಗಳು ನಮ್ಮದೆಂದರು, ರಸ್ತೆ ವಕ್ಫ್ ಸೇರಿದ್ದು ಅಂದರು, ಶಾಲಾ ಕಾಲೇಜುಗಳು ವಕ್ಫ್ ಭೂಮಿ, ವಿಧಾನ ಸೌಧ ನಮ್ಮದು, ಪೊಲೀಸ್ ಕಚೇರಿ ನಮ್ಮದು ಎಂದರು ಈಗ ಅರಣ್ಯವೇ ಇವರದ್ದಂತೆ…ಇವರ ಅಜ್ಞಾನವನ್ನು ಅವರ ದೇವರೇ ತಿದ್ದಬೇಕು.