Advertisement

Waqf: ಮಾಣಿಪ್ಪಾಡಿ ಆರೋಪಕ್ಕೆ ಜೆಪಿಸಿ ಬಹಿಷ್ಕರಿಸಿದ ವಿಪಕ್ಷಗಳು

12:04 AM Oct 15, 2024 | Team Udayavani |

ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚೆ ನಡೆಸಲು ಕರೆಯಲಾಗಿದ್ದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಿಂದ ವಿಪಕ್ಷ ನಾಯಕರು ಹೊರನಡೆದಿದ್ದಾರೆ. ಈ ಸಮಿತಿ ಕಾನೂನು ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಭೆ ಬಹಿಷ್ಕರಿಸಿದ್ದಾರೆ.

Advertisement

ಅಲ್ಲದೆ ಈ ಸಮಿತಿಯ ಮುಖ್ಯಸ್ಥರನ್ನು ವಜಾ ಮಾಡಬೇಕು ಎಂದು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಜಂಟಿ ಸಂಸ ದೀಯ ಸಮಿತಿ ಪಕ್ಷಪಾತದಿಂದ ನಡೆದುಕೊಳ್ಳುತ್ತಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ ಮಂಡಿಸಿದ ವಿವರದಲ್ಲಿ ಕಾಯ್ದೆಗೆ ಸಂಬಂಧಿಸಿ ಯಾವುದೇ ಮಾಹಿತಿ ಇರಲಿಲ್ಲ. ಬದಲಾಗಿ ಕರ್ನಾಟಕ ಸರಕಾರ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೂಷಿಸ ಲಾಗಿದೆ ಎಂದು ವಿಪಕ್ಷ ನಾಯಕರು ಹೇಳಿ ದ್ದಾರೆ. “ನಾವು ಈ ಸಮಿತಿ ಸಭೆಯನ್ನು ಬಹಿಷ್ಕರಿ ಸುತ್ತಿದ್ದೇವೆ. ಯಾಕೆಂದರೆ ಇಲ್ಲಿ ಯಾವುದೇ ನಿಯಮ ಪಾಲನೆಯಾಗುತ್ತಿಲ್ಲ’ ಎಂದು ಶಿವಸೇನೆ ಹೇಳಿದೆ.

ವಿಪಕ್ಷಗಳು ಹೊರನಡೆದರೂ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿಯ ಸಂಸದೆ ಜಗದಾಂಬಿಕಾ ಪಾಲ್‌ ಸಭೆಯನ್ನು ಮುಂದುವರಿಸಿದರು. ಅ. 8ರಂದು ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಭಾರೀ ಚರ್ಚೆ ನಡೆದ ಹಿನ್ನೆಲೆಯಲ್ಲಿ ಇದನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು. ಈ ಸಮಿತಿ ಚರ್ಚೆ ನಡೆಸಿ ಮುಂಬರುವ ಸಂಸತ್ತ ಅಧಿವೇಶನಕ್ಕೂ ಮುನ್ನ ಈ ವರದಿಯನ್ನು ಸಲ್ಲಿಕೆ ಮಾಡಲಿದೆ.

ಯಾರೆಲ್ಲ ಹೊರನಡೆದರು?
ಕಾಂಗ್ರೆಸ್‌ನ ಗೌರವ್‌ ಗೊಗೋಯ್‌, ಇಮ್ರಾನ್‌ ಮಸೂದ್‌, ಡಿಎಂಕೆಯ ಎ. ರಾಜಾ, ಶಿವಸೇನೆ (ಯುಬಿಟಿ)ಯ ಪ್ರಮೋದ್‌ ಸಾವಂತ್‌, ಎಐಎಂಐಎಂನ ಅಸಾದುದ್ದೀನ್‌ ಒವೈಸಿ, ಸಮಾಜವಾದಿ ಪಕ್ಷದ ಮೊಹಿಬ್ಬುಲ್ಲಾ, ಆಪ್‌ನ ಸಂಜಯ್‌ ಸಿಂಗ್‌ ಸಮಿತಿ ಸಭೆಯಿಂದ ಹೊರನಡೆದರು.

ಸ್ಪೀಕರ್‌ಗೆ ಪತ್ರ
ಬಳಿಕ ಪ್ರತ್ಯೇಕ ಸಭೆ ನಡೆಸಿದ ವಿಪಕ್ಷಗಳ ನಾಯಕರು ಜೆಪಿಸಿ ಮುಖ್ಯಸ್ಥರನ್ನು ಮಾಡ ಬೇಕು ಎಂದು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next