Advertisement

ಅಮೃತ್‌ಪಾಲ್‌ ವಿರುದ್ಧ ವಾಂಟೆಡ್‌ ಪೋಸ್ಟರ್‌

11:48 PM Apr 13, 2023 | Team Udayavani |

ಚಂಡೀಗಢ: ತಲೆಮರೆಸಿಕೊಂಡಿರುವ ಖಲಿ­ಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತ್‌ಪಾಲ್‌ ಸಿಂಗ್‌ ವಿರುದ್ಧ “ಬೇಕಾಗಿದ್ದಾನೆ’ (ವಾಂಟೆಡ್‌) ಎಂಬ ಪೋಸ್ಟರ್‌ಗಳನ್ನು ಪಂಜಾಬ್‌ನ ಗುರುದಾಸಪುರ ಜಿಲ್ಲೆಯಲ್ಲಿ ಹಾಕಲಾಗಿದೆ.

Advertisement

ಅನೇಕ ಪ್ರಕರಣಗಳಲ್ಲಿ ಅಮೃತ್‌ಪಾಲ್‌ ಬೇಕಾಗಿದ್ದಾನೆ, ಸುಳಿವು ನೀಡಿ ಎಂದು ಪೋಸ್ಟರ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ. “ಅಮೃತ್‌ಪಾಲ್‌ ಬಗ್ಗೆ ಯಾರಿಗಾದರೂ ಯಾವುದೇ ಮಾಹಿತಿ ಇದ್ದರೂ ಕೆಳಗಿನ ಮೊಬೈಲ್‌ಗೆ ಕರೆ ನೀಡಿ ಮಾಹಿತಿ ಹಂಚಿಕೊಳ್ಳಬಹುದು. ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗು­ವುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯ­ವಾಗಿ ಇಡಲಾಗುವುದು’ ಎಂದು ಪೋಸ್ಟರ್‌ನಲ್ಲಿ ಹಾಕಲಾಗಿದೆ.

ಪಾಪಲ್‌ಪ್ರೀತ್‌ ಸಿಂಗ್‌ ಬಂಧನ: ಇನ್ನೊಂದೆಡೆ, ಅಮೃತ್‌ಪಾಲ್‌ ಸಿಂಗ್‌ ಸಹಚರ ಪಾಪಲ್‌ಪ್ರೀತ್‌ ಸಿಂಗ್‌ನನ್ನು ಹೋಶಿಯಾರ್‌ಪುರ್‌ನಲ್ಲಿ ಪಂಜಾಬ್‌ ಪೊಲೀಸರು ಏ.10­ರಂದು ಬಂದಿಸಿದ್ದಾರೆ. ಈ ಮಾಹಿತಿಯನ್ನು ಗುರುವಾರ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next