Advertisement

ಅಸ್ಸಾಂ: ಮೋಸ್ಟ್ ವಾಂಟೆಡ್ , ಜಾನುವಾರು ಕಳ್ಳಸಾಗಾಣಿಕೆದಾರನ ಎನ್‌ಕೌಂಟರ್‌

10:05 PM Jul 20, 2022 | Team Udayavani |

ಧುಬ್ರಿ (ಅಸ್ಸಾಂ): ಜಿಹಾದಿ ಅಂಶಗಳೊಂದಿಗೆ ಸಂಪರ್ಕ ಹೊಂದಿರುವ ಮತ್ತು ಜಾನುವಾರು ಕಳ್ಳಸಾಗಣೆಯಲ್ಲಿ ತೊಡಗಿದ್ದ ದುಷ್ಕರ್ಮಿಯನ್ನು ಪಶ್ಚಿಮ ಬಂಗಾಳದ  ಗಡಿಯ ಬಳಿ ಬುಧವಾರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಸ್ಸಾಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆಡಮ್ ಅಲಿ ಮತ್ತು ಆತನ ಸಹಚರರ ಚಲನವಲನದ ಬಗ್ಗೆ ಸುಳಿವು ನೀಡಿದ ನಂತರ ಧುಬ್ರಿ ಜಿಲ್ಲೆಯ ಪೊಲೀಸ್ ತಂಡವು ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿ ಮಧ್ಯರಾತ್ರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಜಿತ್ ಗೌರವ್ ಹೇಳಿದ್ದಾರೆ.

ಆ್ಯಡಮ್ ಅಲಿ ಮತ್ತು ಅವರ ಪಾಲುದಾರರು ಶಸ್ತ್ರಾಸ್ತ್ರ ಒಪ್ಪಂದಕ್ಕಾಗಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ಅದರಂತೆ ನಮ್ಮ ತಂಡ ಕಾರ್ಯಾಚರಣೆಗೆ ಹೊರಟಿತ್ತು. ಕಾರ್ಯಾಚರಣೆಯಲ್ಲಿ ಅಲಿಯನ್ನು ಬಂಧಿಸಲಾಯಿತು ಆದರೆ ತಂಡದ ಇತರ ಸದಸ್ಯರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಎಸ್ಪಿ ಹೇಳಿದರು.

ರೂಪ್ಸಿ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬೆನ್ನಟ್ಟಿದರು ಮತ್ತು ನಂತರದ ಗುಂಡಿನ ಕಾಳಗದಲ್ಲಿ ಅಲಿ ಮತ್ತು ಇಬ್ಬರು ಪೊಲೀಸರಿಗೆ ಬುಲೆಟ್ ಗಾಯಗಳಾಗಿವೆ. ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅಲಿ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು. ಇಬ್ಬರು ಪೊಲೀಸ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಉಳಿದ ಅಪರಾಧಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.

Advertisement

ಮನಿ ಲಾಂಡರಿಂಗ್ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದುವುದು ಸೇರಿದಂತೆ ಹಲವಾರು ಇತರ ಪ್ರಕರಣಗಳಲ್ಲಿ ಅಲಿ ಕೂಡ ಬೇಕಾಗಿದ್ದ.

ಇದರೊಂದಿಗೆ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವು ಮೇ 2021 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಕಸ್ಟಡಿಯಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವಾಗ ಅಥವಾ ಸಿಬ್ಬಂದಿಯ ಮೇಲೆ ದಾಳಿ ನಡೆಸುತ್ತಿರುವಾಗ ಪೊಲೀಸ್ ಗುಂಡಿಗೆ ಕನಿಷ್ಠ 55 ಜನರು ಸಾವನ್ನಪ್ಪಿದ್ದಾರೆ ಮತ್ತು 140 ಜನರು ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next