Advertisement
ಬಾದರ್ಲಿ ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಮಾತನಾಡಿ, ಕಳೆದ ಹದಿನೈದು ದಿನಗಳಿಂದ ಜೋಳಕ್ಕೆ ನೀರು ಪೂರೈಸುವಂತೆ, ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಕೇಳಲಾಗುತ್ತಿದೆ. ಆದರೂ, ಯಾರೊಬ್ಬರೂ ಸ್ಪಂದಿಸಿಲ್ಲ. ಕಡಿಮೆ ವೋಲ್ಟೇಜ್ ವಿದ್ಯುತ್ ನೀಡುತ್ತಿರುವುದರಿಂದ ಪಂಪ್‌ಸೆಟ್‌ಗಳು ಕೆಲಸ ಮಾಡುತ್ತಿಲ್ಲ. ಹೀಗೆ ನಿರ್ಲಕ್ಷ್ಯ ತೋರಿದರೆ, ನಾಲ್ಕೈದು ದಿನಗಳಲ್ಲಿ ಬೆಳೆ ಒಣಗುತ್ತವೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Related Articles
Advertisement
ಈ ವೇಳೆ ಎಇಇ ದಾವಲಸಾಬ್, ಸ್ಥಳಕ್ಕೆ ಭೇಟಿ ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಹುಸಿ ಭರವಸೆ ನೀಡದಂತೆ ಈ ವೇಳೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಮಂಜುನಾಥ ಭೋಗಾವತಿ ಮನವಿ ಸ್ವೀಕರಿಸಿ, ಜಮೀನುಗಳಿಗೆ ನೀರು ಒದಗಿಸುವಂತೆ ಎಇಇ ಈರಣ್ಣ ಅವರಿಗೆ ಸೂಚನೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡರಾದ ಬಸನಗೌಡ ಗೋಮರ್ಸಿ, ಶರಣಪ್ಪ ಮಳ್ಳಿ, ನಾಗಪ್ಪ ಗೋಮರ್ಸಿ, ಬಾಬಾ ಖಾದ್ರಿ, ಮರೇಗೌಡ, ಪಂಪನಗೌಡ, ಬೂದಿಹಾಳ ವಿಎಸ್‌ಎಸ್‌ಎನ್ ಅಧ್ಯಕ್ಷ ಮಲ್ಲಯ್ಯ ಮಾಡಸಿರವಾರ ಸೇರಿದಂತೆ ಗೋಮರ್ಸಿ, ಮಾಡಸಿರವಾರ ಸೇರಿದಂತೆ ಇತರೆ ಹಳ್ಳಿಯ ರೈತರು ಇದ್ದರು.
ರೈತ ಮಹಿಳೆಯರಿಂದಲೂ ಆಕ್ರೋಶ
ಜೋಳಕ್ಕೆ ನೀರು ಪೂರೈಸುವಂತೆ ಒತ್ತಾಯಿಸಿದ ಪ್ರತಿಭಟನೆಯಲ್ಲಿ ರೈತ ಮಹಿಳೆಯರು ಪಾಲ್ಗೊಂಡಿದ್ದರು. ಅಧಿಕಾರಿಗಳು ಉತ್ತರ ನೀಡಿದಾಗ ತೃಪ್ತರಾಗದ ಮಹಿಳೆಯರು, ನಾಳೆಯಿಂದಲೇ 54ನೇ ಉಪಾಕಾಲುವೆಯ ಕೊನೆಭಾಗಕ್ಕೆ ನೀರು ಕೊಡಬೇಕೆಂದು ಒತ್ತಾಯಿಸಿದರು. ತಹಶೀಲ್ದಾರ್ ಮನವಿ ಸ್ವೀಕರಿಸಿದ ಬಳಿಕ ಮಹಿಳಾ ಪಿಎಸ್‌ಐರನ್ನು ನೋಡಿದ ರೈತ ಮಹಿಳೆಯರು, ತಮ್ಮ ಸಂಕಷ್ಟ ಹೇಳಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.