Advertisement

ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಧರಣಿ

10:40 AM May 28, 2019 | Suhan S |

ಮಾಗಡಿ: ಹದಿನೈದು ದಿನಗಳೊಳಗೆ ಮಾಗಡಿ-ಕುಣಿಗಲ್-ಹುಲಿಯೂರುದುರ್ಗದ ರಸ್ತೆ ಗುಂಡಿ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲೋಕೋಪ ಯೋಗಿ ಇಲಾಖೆ ಎಇಇ ರಾಮಣ್ಣ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಸ್ತೆ ತಡೆ ಪ್ರತಿಭಟನೆ ಧರಣಿ ಕೈಬಿಟ್ಟಿರುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್‌ ತಿಳಿಸಿದರು.

Advertisement

ರಸ್ತೆಯಲ್ಲಿ ಅಡುಗೆ ತಯಾರಿಸಿ ಧರಣಿ: ಪಟ್ಟಣದ ಸೋಮೇಶ್ವರಸ್ವಾಮಿ ವೃತ್ತದಲ್ಲಿ ರಸ್ತೆಯಲ್ಲಿ, ಒಲೆ ಹಚ್ಚಿ ಅಡುಗೆ ಮಾಡುವ ಮೂಲಕ ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್‌ ನೇತೃತ್ವದಲ್ಲಿ ಬೃಹತ್‌ ರಸ್ತೆ ತಡೆ ಪ್ರತಿಭಟನೆ ಧರಣಿ ನಡೆಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದರು.

ರಸ್ತೆ ಗುಂಡಿ ಮುಚ್ಚಲು ಆಗ್ರಹ: ಇಲ್ಲಿನ ಸೋಮೇಶ್ವರ ಸ್ವಾಮಿ ವೃತ್ತದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್‌ ಮಾತ ನಾಡಿ, ಮಾಗಡಿ- ಕುಣಿಗಲ್- ಹುಲಿಯೂರುದುರ್ಗ ಮಾರ್ಗ ದ ರಸ್ತೆ ಗುಂಡಿಗಳಿಂದಾಗಿ ನಿತ್ಯವೂ ಅಪಘಾತಗಳು ಸಂಭವಿಸು ತ್ತಿದ್ದವು. ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಳ್ಳಬೇಕೆಂದರು.

ಚರಂಡಿ ನೀರು ಕೆರೆ ಸೇರದಂತೆ ಮಾಡಿ: ಪಟ್ಟಣದ ಒಳಚರಂಡಿ ನೀರು ಭರ್ಗಾವತಿ ಕೆರೆ ಸೇರುತ್ತಿದ್ದು, ಕೆರೆಯ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಇದರಿಂದ ನಾಗರಿಕರು ರೋಗರುಜಿನಗಳಿಂದ ನರಳುವಂತಾಗಿದೆ. ಭರ್ಗಾವತಿ ಕೆರೆಗೆ ಪಟ್ಟಣದ ಒಳಚರಂಡಿ ಕಲುಷಿತ ನೀರು ಕೆರೆಗೆ ನೀರು ಸೇರುತ್ತಿರುವುದನ್ನು ತಡೆದು, ಕೆರೆ ದುರಸ್ತಿಗೊಳಿಸುವ ಮೂಲಕ ಕೆರೆ ಸ್ವಚ್ಛಗೊಳಿಸಬೇಕು ಎಂದರು.

ಇದೇ ವೇಳೆ ರೈತ ಚಿಕ್ಕಚೆನ್ನ‌ಯ್ಯ, ಕಳೆದ ನಾಲ್ಕುವರ್ಷಗಳಿಂದ ರಸ್ತೆ ಬದಿ ಜಂಗಲ್ ಕತ್ತರಿಸಿಲ್ಲ, ಇದರಿಂದ ರೈತರು ರಾತ್ರಿ ವೇಳೆ ತಮ್ಮ ಗ್ರಾಮಗಳಿಗೆ ಹೋಗಲಾಗುತ್ತಿಲ್ಲ, ತಮ್ಮ ಹೊಲಗದ್ದೆ ಬಳಿ ಹಸಿರು ಬಳ್ಳಿಗಳು ಬೆಳೆದು ನಿಂತಿವೆ ಎಂದು ಆರೋಪಿಸಿ ಪಿಡ್ಲೂಡಿ ಎಂಜಿನಿಯರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಧುಗೌಡ, ಟೌನ್‌ ಅಧ್ಯಕ್ಷ ರಂಗಸ್ವಾಮಯ್ಯ, ಶಿವಕುಮಾರ್‌, ರಂಗಪ್ಪ, ಗಿರೀಶ್‌,ರಾಜಣ್ಣ, ಶಶಿಧರ್‌,ಚೆನ್ನಪ್ಪ, ವೆಂಕಟೇಶ್‌, ಮೂರ್ತಿ, ನರಸಿಂಹಮೂರ್ತಿ, ಪ್ರಕಾಶ್‌, ಕೆಂಚಪ್ಪ, ಶ್ರೀನಿವಾಸ್‌, ಗಿರೀಶ್‌ ರಮೇಶ್‌, ಆನಂದ್‌, ಚಿಕ್ಕಣ್ಣ, ಶಂಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next