Advertisement

ಚಂದ್ರಯಾನ ನೋಡಬೇಕೆ? ಇಷ್ಟು ಮಾಡಿ

09:05 AM Jul 19, 2019 | Team Udayavani |

ಮಣಿಪಾಲ: ಕಳೆದ ಸೋಮವಾರ ತಾಂತ್ರಿಕ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಚಂದ್ರಯಾನ ಜು. 22ರಂದು ಮಧ್ಯಾಹ್ನ 2.43ಕ್ಕೆ ನಡೆಯಲಿದೆ. ಆಂಧ್ರ ಪ್ರದೇಶದ ಶ್ರೀಹರಿ ಕೋಟಾದಿಂದ ಉಡ್ಡಾಯನವಾಗಲಿದೆ.

Advertisement

ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಉತ್ಸಕರಾಗಿರುವವರಿಗೆ ಇಸ್ರೋ ಅವಕಾಶವನ್ನು ಕಲ್ಪಿಸಿದೆ. ಉಡ್ಡಾಯನ ಕೇಂದ್ರ ಸಮೀಪ ನಿರ್ಮಿಸಿರುವ ವೀಕ್ಷರ ನೂತನ ಗ್ಯಾಲರಿಯಲ್ಲಿ ಕುಳಿತು ಕ್ಷಣಕ್ಕೆ ಸಾಕ್ಷಿಯಾಗಬಹುದಾಗಿದೆ. ಆದರೆ ಗ್ಯಾಲರಿಯಲ್ಲಿ ನೀವು ಆಸನ ಪಡೆಯಬೇಕಾದರೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಜುಲೈ 19ರಂದು ಸಂಜೆ 6 ಗಂಟೆ ಬಳಿಕ ತಮ್ಮ ಭಾಗವಹಿಸುವಿಕೆಗೆ ಬುಕ್‌ ಮಾಡಬಹುದಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್‌ ಮೂಲಕ ಮಾಹಿತಿ ನೀಡಿರುವ ಇಸ್ರೋ ಆಸಕ್ತರು shar.gov.in/VSCREGISTRATION/index.jsp ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ನೋಂದಣಿ ಮಾಡಬಹುದು ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next