Advertisement
ಆ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ.ದಿನದಿಂದ ದಿನಕ್ಕೆ ಬೆಂಗಳೂರು ಬೆಳೆದಂತೆ ಉತ್ತರ ಮತ್ತು ದಕ್ಷಿಣ ಎಂದು ಇಬ್ಭಾಗವಾಯಿತು. ಬಿಜೆಪಿ ಪ್ರವರ್ಧಮಾನದಲ್ಲಿ ಇಲ್ಲದ ದಿನಗಳವು. ಇವೆರಡೂ ಕ್ಷೇತ್ರಗಳು ಕ್ರಮವಾಗಿ ಕಾಂಗ್ರೆಸ್ ಮತ್ತು ಜನತಾ ಪರಿವಾರಕ್ಕೆ ಸಮವಾಗಿ ಪಾಲಾದವು.
Related Articles
Advertisement
2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಅವರ ಕೈಹಿಡಿಯಿತು. ತಮ್ಮ ಅಧಿಕಾರಾವಧಿಯಲ್ಲಿ ಗಳಿಸಿದ್ದ ವರ್ಚಸ್ಸು, ಅವರ ಹೆಸರಿನಲ್ಲಿ ಬಂದ ಸಿನಿಮಾ, ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿರುವುದು ಎಲ್ಲವೂ ಇದಕ್ಕೆ ಕಾರಣವಾಗಿತ್ತು. ತದನಂತರ ಅದೇ ಸಾಂಗ್ಲಿಯಾನ ವಿಪ್ ಉಲ್ಲಂ ಸಿ ಅಡ್ಡ ಮತದಾನದ ಮೂಲಕ ಬಿಜೆಪಿಗೇ ಕೈಕೊಟ್ಟರು!
ನಂತರ “ಆಪರೇಷನ್ ಕಮಲ’ದ ಮೂಲಕ ಪಕ್ಷಕ್ಕೆ ಸೇರ್ಪಡೆಯಾದ ಡಿ.ಬಿ.ಚಂದ್ರೇಗೌಡ ಅವರನ್ನು ಬಿಜೆಪಿ ಉತ್ತರದಿಂದ ಕಣಕ್ಕಿಳಿಸಿತು. ಒಕ್ಕಲಿಗರೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ತಂತ್ರ ಫಲಿಸಿತು. ಇದಾದ ಮೇಲೆ ಮತ್ತೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ವಿ.ಸದಾನಂದಗೌಡ 2014ರಲ್ಲಿ ನರೇಂದ್ರ ಮೋದಿ ಅಲೆಯೊಂದಿಗೆ ಗೆದ್ದರು.
ಬದಲಾದ ಚಿತ್ರಣ: ಆದರೆ, ಈಗ ಕ್ಷೇತ್ರದ ಚಿತ್ರಣ ಬದಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಸಚಿವ ಕೃಷ್ಣ ಬೈರೇಗೌಡ ಇದೇ ಲೋಕಸಭಾ ಕ್ಷೇತ್ರದಲ್ಲಿ ಬರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ. ಒಬ್ಬ ಒಕ್ಕಲಿಗ ನಾಯಕನನ್ನು ಪ್ರತಿಷ್ಠಾಪಿಸುವ ಲೆಕ್ಕಾಚಾರವೂ ಇದರ ಹಿಂದಿದೆ ಎನ್ನಲಾಗಿದೆ.
ಈ ಮಧ್ಯೆ ಇಬ್ಬರು ಒಕ್ಕಲಿಗ ಸಮುದಾಯದ ನಾಯಕರೇ ಇಲ್ಲಿ ಮುಖಾಮುಖೀ ಆಗಿದ್ದಾರೆ. ಒಂದು ವೇಳೆ ಕೃಷ್ಣ ಬೈರೇಗೌಡ ಗೆದ್ದರೆ, ಒಂದು ಸಚಿವ ಸ್ಥಾನ ತೆರವಾಗಲಿದೆ. ಆ ಸ್ಥಾನವನ್ನು ಇದೇ ಕ್ಷೇತ್ರದಲ್ಲಿನ ಒಬ್ಬ ಶಾಸಕರಿಗೆ ಕೊಡುವ ಭರವಸೆ ದೊರಕಿದೆ. ಇದರಿಂದ ಉಳಿದ ಕಾಂಗ್ರೆಸ್ ಶಾಸಕರೂ ಅವರನ್ನು ಗೆಲ್ಲಿಸುವ ಹುರುಪಿನಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಗೆದ್ದರೆ, ತೆರವಾದ ಶಾಸಕ ಸ್ಥಾನಕ್ಕೆ ಮತ್ತೂಂದು ಉಪ ಚುನಾವಣೆ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿಯೂ ಅಲ್ಲಿನ ಮತದಾರರು ಯೋಚಿಸುತ್ತಿದ್ದಾರೆ.
ಸದಾನಂದಗೌಡ ಪ್ರಣಾಳಿಕೆಯಲ್ಲಿ ಹೇಳಿದ್ದೇನು?: ಉತ್ತರ ಕ್ಷೇತ್ರಕ್ಕಾಗಿಯೇ ಡಿ.ವಿ.ಸದಾನಂದಗೌಡ ಅವರು ಪ್ರತ್ಯೇಕ ಪ್ರಣಾಳಿಕೆ ರೂಪಿಸಿರಲಿಲ್ಲ. ಪಕ್ಷದ ಪ್ರಣಾಳಿಕೆಯಲ್ಲಿ ಬೆಂಗಳೂರಿಗೆ ಮೆಟ್ರೋ, ಉಪನಗರ ರೈಲು ಯೋಜನೆ ಅನುಷ್ಠಾನ ಪ್ರಮುಖವಾಗಿ ಪ್ರಸ್ತಾಪಿಸಲಾಗಿತ್ತು. ಇನ್ನು ಈ ಭಾಗದ ಪ್ರಮುಖ ಸಮಸ್ಯೆಯಾಗಿರುವ ಸಂಚಾರದಟ್ಟಣೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೆಬ್ಬಾಳ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ಬಾಕಿ ಇದೆ.
ಸ್ಪರ್ಧಿಸಿದ್ದ ಘಟಾನುಘಟಿಗಳು: ಇಲ್ಲಿಂದ ಜಾಫರ್ ಷರೀಫ್, ಜಾರ್ಜ್ ಫರ್ನಾಂಡಿಸ್, ಡಿ.ಬಿ.ಚಂದ್ರೇಗೌಡ, ಎಚ್.ಟಿ. ಸಾಂಗ್ಲಿಯಾನ ಸ್ಪರ್ಧಿಸಿದ್ದರು.
ಒಟ್ಟು ವಿಧಾನಸಭಾ ಕ್ಷೇತ್ರಗಳು-8-95,251 ಯುವ ಮತದಾರರು (18ರಿಂದ 21 ವರ್ಷ)
– 2,656 ಕ್ಷೇತ್ರದಲ್ಲಿನ ಮತಗಟ್ಟೆಗಳು
-80 ಪಿಂಕ್ ಬೂತ್‌ಗಳು
-2,656 ಬಳಸಲಿರುವ ಇವಿಎಂಗಳು (ಶೇ. 20 ಹೆಚ್ಚುವರಿ)
-13,280 ಚುನಾವಣಾ ಸಿಬ್ಬಂದಿ ನಿಯೋಜನೆ * ವಿಜಯಕುಮಾರ್ ಚಂದರಗಿ