ಎನ್ನುವುದು ಮೂರ್ಖತನವಾದೀತು.
Advertisement
ಜೀವನದಲ್ಲಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುತ್ತದೆ. ಒಂದರಿಂದ ಒಂದು ಆಕರ್ಷಿಸಲ್ಪಡುತ್ತದೆ. ಮನುಷ್ಯ ಮಾತ್ರವೇ ಅಲ್ಲದೆ ಪ್ರಕೃತಿಯೂ ಸಹ ಹಾಗೆಯೇ. ಅಲ್ಲಿರುವ ಎಲ್ಲವೂ ಒಂದರಿಂದ ಒಂದು ಆಕರ್ಷಿಸಲ್ಪಡುತ್ತದೆ.
Related Articles
Advertisement
ಪ್ರೀತಿಯಲ್ಲಿ ಮೆಚ್ಚುಗೆಯೆಂಬ ಹುಚ್ಚಾಟಪ್ರೇಮಿಗಳು ತಮ್ಮ ಪ್ರೀತಿಯನ್ನು ಪಡೆದುಕೊಳ್ಳುವ ಸಲುವಾಗಿ ಅನೇಕ ಬಗೆಯಲ್ಲಿ ಪ್ರಯತ್ನಿಸುತ್ತಾರೆ. ಕೆಲವರು ರಕ್ತದಲ್ಲಿ ಕಾಗದ ಬರೆಯುತ್ತಾರೆ. ಇನ್ನೂ ಕೆಲವರು ತಮ್ಮ ಕೈ ಮೇಲೆ ಪ್ರಿಯತಮೆಯ ಹೆಸರು ಬರೆದುಕೊಳ್ಳುತ್ತಾರೆ. ಪ್ರೇಮಿಯ ಜೊತೆ ಜಗಳವಾದರೆ ಬ್ಲೇಡಿನಿಂದ ಕೊಯ್ದುಕೊಳ್ಳುತ್ತಾರೆ. ಲವ್ ಫೇಲ್ಯೂರ್ ಆದರೆ ವಿಷ ತೆಗೆದುಕೊಳ್ಳುತ್ತಾರೆ. ಇನ್ನು ಏನೇನೋ ಮಾಡುತ್ತಾರೆ. ಇನ್ನು ಕೆಲವರು ಪ್ರತಿದಿನ ರಾತ್ರಿ ಅತಿಯಾಗಿ ಕುಡಿದು, ತಮ್ಮ ಪ್ರಿಯತಮೆಗೆ ಫೋನ್ ಮಾಡಿ ನೀನು ನನ್ನ ಪ್ರೀತಿಯನ್ನು ಒಪ್ಕೋಳ್ಳಲ್ಲ ಅಂದ್ರೆ ನಾನು ಹೀಗೆ ಕುಡಿದು ಸತ್ತು ಹೋಗ್ತಿàನಿ ಐ ಲವ್ ಯೂ ಸೋ ಮಚ್… ಎಂದೆಲ್ಲಾ ಅವಳನ್ನು ಎಮೋಷನಲ್ಲಾಗಿ ಬ್ಲ್ಯಾಕ್‌ವೆುàಲ್ ಮಾಡುತ್ತಾರೆ. ಅವಳನ್ನು ಮೆಚ್ಚಿಸಲು ನೋಡುತ್ತಾರೆ. ಇನ್ನು ಕೆಲವು ಹುಡುಗರು ಪ್ರಿಯತಮೆಯನ್ನು ಮೆಚ್ಚಿಸಲು ಹಾಡು ಕಲಿತು ಅವಳ ಮುಂದೆ ಹಾಡುತ್ತಾರೆ. ಕೆಲವರು ಅವಳ ಜತೆಯಲ್ಲಿ ನರ್ತಿಸಬೇಕು ಎಂದು ನೃತ್ಯ ಕಲಿಯುತ್ತಾರೆ. ಜಿಮ್‌ಗೆ ಹೋಗಿ ದೇಹದಂಡನೆ ಮಾಡಿಕೊಳ್ಳುತ್ತಾರೆ. ಹೇರ್ ಸ್ಟೈಲ್ ಬದಲಿಸಿಕೊಳ್ಳುತ್ತಾರೆ. ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಪ್ರಾರಂಭಿಸುತ್ತಾರೆ. ಹಬ್ಬಗಳಲ್ಲಿ, ವಿಶೇಷ ದಿನಗಳಲ್ಲಿ ತನ್ನ ಪ್ರಿಯೆಗೆ ಏನಾದರೂ ಉಡುಗೊರೆ ನೀಡಿ ಅವಳನ್ನು ಮೆಚ್ಚಿಸಲು ನೊಡು ತ್ತಾರೆ. ಹೀಗೆ ಒಬ್ಬ ಪ್ರೇಮಿ ತನ್ನ ಪ್ರಿಯತಮೆಯನ್ನು ಮೆಚ್ಚಿಸಲಿಕ್ಕೆ ನಾನಾ ವಿಧದಲ್ಲಿ ಪ್ರಯತ್ನಿಸುತ್ತಾನೆ. ಅದಕ್ಕಾಗಿ ಏನನ್ನು ಮಾಡಲೂ ತಯಾರಿರುತ್ತಾನೆ. ಎಲ್ಲರನ್ನೂ ದೂರಮಾಡಿ ತನ್ನ ತಂದೆ ತಾಯಿ ಬಂಧು ಬಾಂಧವರೊಂದಿಗೆ, ಸ್ನೇಹಿತರೊಂದಿಗೆ ಜಗಳವಾಡಿಯಾ ದರೂ ಸರಿಯೇ, ಅವಳನ್ನು ಮೆಚ್ಚಿಸಬೇಕೆನ್ನುವುದು ಅವನ ಮನದ ಇರಾದೆಯಾಗಿರುತ್ತದೆ. ಇದಕ್ಕಾಗಿ ಅವನು ತನ್ನದೆನ್ನುವ ಊರು, ಮನೆ ಮಾರುಗಳನ್ನು ತ್ಯಜಿಸಲು ಸಿದ್ಧನಿರುತ್ತಾನೆ. ತನ್ನ ಪ್ರೀತಿ ಜಗತ್ತಿನ ಎಲ್ಲಾ ಪ್ರೇಮಿಗಳ ಪ್ರೀತಿಗಿಂತಲೂ ದೊಡ್ಡದು. ಅದನ್ನು ಹೇಗೆ ನಿನಗೆ ತೋರಿಸಲಿ ಎಂದು ಚಡಪಡಿಸುತ್ತಾನೆ. ಪ್ರೇಮಿ ಅದು ಯಾವ ರೀತಿಯಲ್ಲಿ ತನ್ನ ಪ್ರಿಯೆಯನ್ನು ಮೆಚ್ಚಿಸಲು ತೊಡಗುವನೆನ್ನುವುದಕ್ಕೆ ಒಂದು ಕಥೆ ನೆನಪಾಗುತ್ತದೆ. ಒಂದು ಹೆಣ್ಣು ಪಾರಿವಾಳವು ಹೂ ತೋಟದಲ್ಲಿದ್ದ ಬಿಳಿ ಗುಲಾಬಿಯನ್ನು ನೋಡಿ ಇಷ್ಟಪಟ್ಟು ಗಂಡು ಪಾರಿವಾಳಕ್ಕೆ ಹೇಳಿತು ನಿನ್ನ ಪ್ರೀತಿ ನಿಜವಾದದ್ದಾದರೆ, ಆ ಬಿಳಿ ಗುಲಾಬಿ ನಾಳೆ ಬೆಳಗಾಗುವುದರೊಳಗೆ ಕೆಂಪು ಗುಲಾಬಿಯಾಗಿರಬೇಕು. ಆಗ ಗಂಡು ಪಾರಿವಾಳ ರಾತ್ರಿ ಎಲ್ಲ ಯೋಚಿಸಿ, ಪ್ರಿಯೆಗೆ ತನ್ನ ಪ್ರೀತಿಯ ಆಳವನ್ನು ತೋರಿಸಲೇಬೇಕು ಎಂದು ದೇಹವನ್ನು ಚುಚ್ಚಿಕೊಂಡು ರಕ್ತವನ್ನು ಆ ಬಿಳಿ ಗುಲಾಬಿಯ ಮೇಲೆ ಸುರಿಸಿ ಅದನ್ನು ಕೆಂಪು ಗುಲಾಬಿ ಯನ್ನಾಗಿ ಮಾಡುತ್ತದೆ. ಬೆಳಗ್ಗೆ ಹೆಣ್ಣು ಪಾರಿವಾಳ ತೋಟಕ್ಕೆ ಬಂದು ನೋಡಿದಾಗ ಬಿಳಿಯ ಗುಲಾಬಿ ಕೆಂಪು ಗುಲಾಬಿ ಯಾಗಿರುತ್ತದೆ. ಪಾರಿವಾಳವು ತನ್ನ ಗೆಳೆಯನ ಪ್ರೀತಿಯನ್ನು ಮೆಚ್ಚಿ ಕುಣಿದಾಡುತ್ತದೆ. ಅದೇ ಸಮಯದಲ್ಲಿ ತನ್ನ ಕಾಲಿನ ಕೆಳಗೆ ಸತ್ತು ಬಿದ್ದಿದ್ದ ಗಂಡು ಪಾರಿವಾಳವನ್ನು ನೋಡಿ ಆಘಾತಗೊಂಡು ಒಂದು ಕೆಂಪು ಗುಲಾಬಿಯನ್ನು ಕೊಟ್ಟು ತನ್ನನ್ನು ಮೆಚ್ಚಿಸಲು ತನ್ನ ಪ್ರಾಣವನ್ನೇ ತೆತ್ತ ಪ್ರೇಮಿಯನ್ನು ಕಂಡು ತಾನೂ ಅಲ್ಲೇ ಪ್ರಾಣ ಬಿಡುತ್ತದೆ. ಇದೇ ಕಾರಣಕ್ಕೆ ಪಾರಿವಾಳಗಳನ್ನು ಲವ್ ಬರ್ಡ್ಸ್ ಎನ್ನುವುದು. ಕೆಂಪು ಗುಲಾಬಿಯನ್ನು ನಾವು ಬಹಳವಾಗಿ ಪ್ರೀತಿಸಿದವರಿಗೆ ಕೊಡುವುದೂ ಇದೇ ನಂಬಿಕೆಯಿಂದಾಗಿ. ಇಂಪ್ರಸ್ ಮಾಡಲು ನಾನಾ ದಾರಿ
ಕೆಲಸದ ವಿಚಾರಕ್ಕೆ ಬಂದರೆ ಅಲ್ಲಿ ಸುಮ್ಮ ಸುಮ್ಮನೆ ಇನ್ನೊಬ್ಬರನ್ನು ಮೆಚ್ಚಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಒಂದು ಗಟ್ಟಿ ವ್ಯಕ್ತಿತ್ವ ಇರಬೇಕು. ಹಾಗೆಯೇ ನಮ್ಮಲ್ಲಿ ಒಂದು ವಿಶೇಷ ವಿಚಾರವಿರಬೇಕು. ಅದೇನೂ ಇಲ್ಲದೆ ಕೇವಲ ಬಾಯಿ ಮಾತಿನಲ್ಲಿ
ಮೆಚ್ಚಿಸಲು ನೋಡಿದರೆ ಅದರಿಂದ ಕೆಲವೇ ದಿನಗಳಲ್ಲಿ ನಮಗೆ ಕೆಟ್ಟ ಹೆಸರು ಬರುತ್ತದೆ. ನಾವು ಯಾವುದಕ್ಕೂ ಲಾಯಕ್ಕಿಲ್ಲ ಎನ್ನುವುದನ್ನು ನಾವೇ ತೋರಿಸಿ ಕೊಟ್ಟಂತಾಗುತ್ತದೆ. ನಮ್ಮ ಜ್ಞಾನ ವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡಾಗ ಮಾತ್ರ ನಮ್ಮ ಪ್ರಯತ್ನಕ್ಕೆ ಒಂದು ಅರ್ಥವಿರುತ್ತದೆ. ಒಂದು ಸಂದರ್ಶನಕ್ಕೆ ಹೋದಾಗ ಅಲ್ಲಿ ಚೆನ್ನಾಗಿ ಮಾತನಾಡಿ ಸರಿಯಾದ ರೀತಿಯಲ್ಲಿ ವರ್ತಿಸಿ ಅವರನ್ನು ಮೆಚ್ಚಿಸಬೇಕಾಗುತ್ತದೆ. ನಮ್ಮ ಕೆಲಸದ ಮೂಲಕ ನಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸ ಬೇಕಾಗುತ್ತದೆ. ಮನೆಯಲ್ಲಿ ಒಳ್ಳೆಯ ಮಕ್ಕಳೆನಿಸಿಕೊಳ್ಳಲು ತಂದೆ ತಾಯಿಯನ್ನು, ಸಂಬಂಧಿಕರನ್ನು ಮೆಚ್ಚಿಸಬೇಕಾಗುತ್ತದೆ. ಕೆಲವು ಸಲ ನಾವು ನಾವಾಗಿ ದ್ದಲ್ಲಿ ನಮ್ಮ ವ್ಯಕ್ತಿತ್ವ ನಮ್ಮ ಮನೆಯವರಿಗೇ ಹಿಡಿಸಲಾರದು. ಅವರ ಮನಸ್ಸಿಗೆ ತಕ್ಕಂತೆ ನಾವು ಕೆಲಸ ಮಾಡಿ ಅವರನ್ನು ಮೆಚ್ಚಿಸಬೇಕು. ಕೆಲವರನ್ನು ಮೆಚ್ಚಿಸಲು ಬೇರೆ ಬೇರೆ ದಾರಿಗಳಿವೆ. ಉದಾಹರ ಣೆಗೆ, ಕೆಲವರಿಗೆ ದುಡ್ಡು ಕೊಟ್ಟು, ಕೆಲವರಿಗೆ ಸಮಯ ಕೊಟ್ಟು ಇನ್ನು ಕೆಲವರಿಗೆ ಪ್ರೀತಿ ಕೊಟ್ಟು ಮೆಚ್ಚಿಸಬೇಕಾಗುತ್ತದೆ. ಮತ್ತೂ ಕೆಲವರಿಗೆ ಅವರು ಹೇಳಿದುದಕ್ಕೆಲ್ಲಾ ಒಪ್ಪಿ ಹಾಂ… ಎಂದರೆ ಸಾಕು ಹೀಗೆ ಜೀವನ ಪರ್ಯಂತ ಎಲ್ಲರನ್ನೂ ಒಂದಲ್ಲ ಒಂದು ರೀತಿ ಮೆಚ್ಚಿಸಬೇಕಾಗುತ್ತದೆ. ಆದರೆ ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳಬೇಕು ಎನ್ನುವುದು ತಪ್ಪು. ಹಾಗೆಯೇ ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಭಾವಿಸುವುದೂ ಸರಿಯಲ್ಲ. ಜಗತ್ತಿನಲ್ಲಿ ಒಬ್ಬೊಬ್ಬರ ಮನಸ್ಸೂ ಒಂದೊಂದು ಬಗೆ. ಅವರೆಲ್ಲರ ಆಸಕ್ತಿಗಳು ಬೇರೆ ಬೇರೆಯಾಗಿರುವುದರಿಂದ ನಾವು ಎಲ್ಲರನ್ನೂ ಮೆಚ್ಚಿಸುತ್ತೇವೆ ಎನ್ನುವುದು ಮೂರ್ಖತನವಾದೀತು. ಪ್ರತಿಯೊಂದು ವಿಚಾರಕ್ಕೂ ಪರ ವಿರೋಧ ಅಭಿಪ್ರಾಯವಿರುವಂತೆ ಪ್ರತಿಯೊಬ್ಬರಲ್ಲಿಯೂ ಇನ್ನೊಬ್ಬರ ಮೇಲೆ ವಿಭಿನ್ನವಾದ ಅಭಿಪ್ರಾಯವಿರುತ್ತದೆ. ಹೀಗಾಗಿ ಎಲ್ಲರೂ ಎಲ್ಲರನ್ನೂ ಮೆಚ್ಚಿಕೊಳ್ಳುವುದಿಲ್ಲ. ಯಾರು ನಮ್ಮನ್ನು ಮೆಚ್ಚಿ ಕೊಳ್ಳುವರೋ ಇಲ್ಲವೋ ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿ ರಬೇಕು. ಏಕೆಂದರೆ ಬೇರೆಯವರಿಗೆ ನಮ್ಮ ಪ್ರೀತಿಯ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿರುವುದಿಲ್ಲ ಆದರೆ ನಮಗೆ, ನಮ್ಮ ಜೀವನಕ್ಕೆ ಅವರ ಪ್ರೀತಿ, ಸಹಕಾರ ಬೇಕಾಗಿರುತ್ತದೆ. – ರೂಪಾ ಅಯ್ಯರ್