Advertisement

ಹಸಿ ಸುಳ್ಳು ಕೇಳಬೇಕೇ? ಮೋದಿ, ಕೆಸಿಆರ್‌ ಭಾಷಣ ಆಲಿಸಿ: ರಾಹುಲ್‌ ಸಲಹೆ

07:15 PM Oct 20, 2018 | udayavani editorial |

ಹೈದರಾಬಾದ್‌ : “ನೀವು ಹಸಿ ಸುಳ್ಳನ್ನು ಕೇಳಲು ಬಯಸುವಿರಾ ? ಹಾಗಿದ್ದರೆ ನೀವು ಅವಶ್ಯವಾಗಿ ನರೇಂದ್ರ ಮೋದಿ ಮತ್ತು ಕೆ ಸಿ ಚಂದ್ರಶೇಖರ ರಾವ್‌ ಅವರ ಭಾಷಣಗಳನ್ನು ಆಲಿಸಲೇಬೇಕು’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. 

Advertisement

ತೆಲಂಗಾಣ ವಿಧಾನಸಭೆ ಚುನಾವಣೆ ಘೋಷಣೆಗೊಂಡ ಬಳಿಕ ಇದೇ ಬಳಿಕ ಈ ನೂತನ ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತನ್ನ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲಂಗಾಣ ಸಿಎಂ ಕೆಸಿಆರ್‌ ಬಗ್ಗೆ ನೇರ ವಾಕ್‌ ದಾಳಿ ನಡೆಸಿದರು. 

“ನೀವು, ತೆಲಂಗಾಣದ ಜನರು ಕಾಂಗ್ರೆಸ್‌ ಮೇಲೆ ಭರವಸೆ ಇಡಬೇಕು; ನಾನೆಂದೂ ನಿಮಗೆ ಸುಳ್ಳು ಭರವಸೆಗಳನ್ನು ನೀಡಿಲ್ಲ; ಕೇವಲ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರವೇ ತೆಲಂಗಾಣದ ಜನರ ಆಶೋತ್ತರಗಳನ್ನು ಈಡೇರಿಸುವ ಸಾಮರ್ಥ್ಯ ಇದೆ ” ಎಂದು ರಾಹುಲ್‌ ಹೇಳಿದರು. ‘ರಾಜ್ಯದ ಆಳುವ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ’ ಎಂದು ಆರೋಪಿಸಿದರು. 

ಆದಿಲಾಬಾದ್‌ ಜಿಲ್ಲೆಯ ಭೈನ್ಸಾ ಪಟ್ಟಣದಲ್ಲಿ ಸಾರ್ವಜನಿಕ ಚುನಾವಣಾ ಭಾಷಣ ಮಾಡುತ್ತಿದ್ದ ರಾಹುಲ್‌, ” ರಾಜ್ಯದ ಮುಖ್ಯಮಂತ್ರಿ ಕೆಸಿರಾವ್‌ ಅವರು ಐದು ಅತ್ಯಮೂಲ್ಯ ವರ್ಷಗಳ ಆಳ್ವಿಕೆ ಅವಧಿಯನ್ನು ವ್ಯರ್ಥಗೊಳಿಸಿದ್ದಾರೆ. ನೂತನ ರಾಜ್ಯವಾಗಿರುವ ತೆಲಂಗಾಣದ ಜನರ ಕನಸುಗಳನ್ನು ನುಚ್ಚುನೂರು ಮಾಡಿದ್ದಾರೆ. ಸರಕಾರದ ಎಲ್ಲ ಲಾಭಗಳನ್ನು ಕೆಸಿಆರ್‌ ಕುಟುಂಬವೊಂದೇ ಹೊಡೆದುಕೊಂಡಿದೆ. ಕೆಸಿಆರ್‌ ಅವರ ಬಂಗಲೆಯನ್ನು ಕಟ್ಟಲು 3,000 ಕೋಟಿ ರೂ. ಒದಗಿಸಲಾಗಿದೆ. ಆದರೆ ಭರವಸೆ ಕೊಟ್ಟಂತೆ ನಿಜಾಮಾಬಾದ್‌ ನಲ್ಲಿನ ಸಕ್ಕರೆ ಕಾರ್ಖಾನೆಯ ಪುನಃಶ್ಚೇತನಕ್ಕೆ ಸರಕಾರದ ಬಳಿ ದುಡ್ಡಿಲ್ಲ ಎನ್ನಲಾಗುತ್ತಿದೆ ‘ ಎಂದು ರಾಹುಲ್‌ ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next