ಎಂದಾದರೂ ರಾಜ ಭೋಜನ ಮಾಡಿದ್ದೀರಾ? ಈಗ ಆ ಸುವರ್ಣಾವಕಾಶ ಒದಗಿಬಂದಿದೆ. ಅಂದಹಾಗೆ, ಇದು ಅರಮನೆಯಲ್ಲಿ ಏರ್ಪಡಿಸಿರುವ ಭೋಜನಕೂಟವೇನಲ್ಲ. ಫ್ರೀಡಂ ಪಾರ್ಕ್ನಲ್ಲಿ ಶ್ರೀ ಸಾಯಿಬಾಬಾ ಇಂಟರ್ನ್ಯಾಶನಲ್ ಫೌಂಡೇಶನ್ ಏರ್ಪಡಿಸುತ್ತಿರುವ “ರಾಜ ಭೋಜನ’ವಿದು. ಹೆಸರಿಗೆ ತಕ್ಕಂತೆ ಅದ್ಧೂರಿ ಭೋಜನ ಇದಾಗಲಿದೆ. ಒಂದೇ ಬಾಳೆಲೆಯ ಮೇಲೆ 99 ಬಗೆಯ ಸಸ್ಯಾಹಾರಿ ಖಾದ್ಯ ವಿಶೇಷಗಳು ಆಹಾರಪ್ರಿಯರನ್ನು ಸೆಳೆಯಲಿವೆ. ಜ್ಯೂಸ್, ಸ್ವೀಟ್, ಚಾಟ್ಸ್, ಉತ್ತರ ಮತ್ತು ದಕ್ಷಿಣ ಭಾರತದ ವೈವಿಧ್ಯ ರೆಸಿಪಿಗಳು ಈ ಭೋಜನದ ಹೈಲೈಟ್.
ಯಾವಾಗ?: ಸೆ.16- 17, ಮಧ್ಯಾಹ್ನ 12- ಸಂಜೆ 4
ಎಲ್ಲಿ?: ಫ್ರೀಡಂ ಪಾರ್ಕ್
ದರ: 249 ರೂ. ಮೇಲ್ಪಟ್ಟು