Advertisement

ಕುಡಿತದಿಂದ ಮುಕ್ತರನ್ನಾಗಿಸಲು ಪಣ

06:13 PM Mar 24, 2022 | Team Udayavani |

ಶಿರಹಟ್ಟಿ: ಸಮಾಜದಲ್ಲಿ ನಿತ್ಯ ಅದೆಷ್ಟೋ ಬಡ ಕುಟುಂಬಗಳು ಮನೆಯ ಯಜಮಾನ ಕುಡಿತದಿಂದ ಆರ್ಥಿಕ ಪರಿಸ್ಥಿತಿ ಎದುರಿಸಿ ಬೀದಿಗೆ ಬರುತ್ತಿರುವುದನ್ನು ಮನಗಂಡ ಇದನ್ನು ತಪ್ಪಿಸುವುದಕ್ಕಾಗಿ ಧರ್ಮಸ್ಥಳ ಸಂಸ್ಥೆಯಿಂದ ಮಧ್ಯವರ್ಜನ ಶಿಬಿರವನ್ನು ಕೈಗೊಳ್ಳುವ ಮೂಲಕ ಕುಡಿತದ ಚಟದಿಂದ ಮುಕ್ತರನ್ನಾಗಿಸುವುದೇ ಮುಖ್ಯಗುರಿಯಾಗಿದೆ ಎಂದು ಸಂಸ್ಥೆ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ ಹೇಳಿದರು.

Advertisement

ಅವರು ಪಟ್ಟಣದ ಶ್ರೀ ರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ಪಪಂ ಅಧ್ಯಕ್ಷೆ ಗಂಗಮ್ಮ ಆಲೂರ ಅಧ್ಯಕ್ಷತೆಯಲ್ಲಿ ನಡೆದ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬಡಕುಟುಂಬಗಳು ನೆಮ್ಮದಿ ಜೀವನ ನಡೆಸುವಂತಾಗಬೇಕು. ಸದೃಢ ಹಾಗೂ ಮರ್ಯಾ ದೆಯುತ ಜೀವನ ನಡೆಸುವಂತಾಗ ಬೇಕೆಂದು ಧರ್ಮಾಧಿಕಾರಿಗಳು ಶಿಬಿರವನ್ನು ಆರಂಭಿಸಿದ್ದಾರೆ. ಏ.24 ರಿಂದ ಮೇ1 ರವರೆಗೆ ಜರಗುವ ಮಧ್ಯವರ್ಜನ ಶಿಬಿರದ ಲಾಭವನ್ನು ಶಿರಹಟ್ಟಿ ತಾಲೂಕಿನ ಜನತೆ ಸದುಪಯೋಗಪಡಿಸಿಕೊಂಡು ಆರೋಗ್ಯಯುತ ಜೀವನ ನಡೆಸಲು ಮುಂದಾಗಬೇಕೆಂದು ಹೇಳಿದರು.

ಶಿಬಿರದ ವ್ಯವಸ್ಥಾಪಕ ಕಮೀಟಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಎ. ಬಳಿಗೇರ, ಗೌರವಾಧ್ಯಕ್ಷರಾಗಿ ವೈ.ಎಸ್‌. ಪಾಟೀಲ್‌, ಉಪಾಧ್ಯಕ್ಷರಾಗಿ ಬುಡನಶ್ಯಾ ಮಕಾನದಾರ, ಫಕ್ಕಿರೇಶ ರಟ್ಟಿಹಳ್ಳಿ, ಮಾಂತೇಶ ದಶಮನಿ, ಪ್ರಕಾಶ ಭೋರಶೆಟ್ಟರ, ಇಸಾಕ್‌ ಆದ್ರಳ್ಳಿ, ಮಂಜುನಾಥ ಗಂಟಿ, ಎಸ್‌.ಬಿ. ಹೊಸೂರ, ಗೌರವ ಸಲಹೆಗಾರರಾಗಿ ಬಸವರಾಜ ವಡವಿ, ಹೊನ್ನಪ್ಪ ಶಿರಹಟ್ಟಿ ಬಸವರಾಜ ಚಿಕ್ಕತೋಟದ, ಬಸವರಾಜ ಸಂಗಪ್ಪಶೆಟ್ಟರ, ಮುಖ್ಯ ಸಲಹೆಗಾರರಾಗಿ ಪಪಂ ಅಧ್ಯಕ್ಷ ಗಂಗವ್ವ ಆಲೂರ, ಕಾರ್ಯದರ್ಶಿಯಾಗಿ ದೇವಪ್ಪ ಕಲ್ಯಾಣಿ, ಸಹಕಾರ್ಯದರ್ಶಿಯಾಗಿ ರಾಮಣ್ಣ ಡಂಬಳ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಶಿವಣ್ಣ ಎಸ್‌, ಗಜೇಂದ್ರ ಎಸ್‌., ಸುರೇಶ ಗಡಾದ, ಜಯಶ್ರೀ ಗುಡಿಮನಿ, ಮಂಜುಳಾ ರಣತೂರ, ಹೇಮಾ ವರವಿ, ನಿರ್ಮಲಾ ಗೌಳಿ, ರೇಣುಕಾ ಹುಬ್ಬಳ್ಳಿ, ಮೀನಾಕ್ಷಿ ವಗ್ಗರ, ರಿಜ್ವಾನ ಇಟಗಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next