Advertisement

ಹೆಣ್ಣು ಅಕ್ಕಮಹಾದೇವಿಯಂತೆ ವಿಚಾರವಂತಳಾಗಲಿ

01:00 AM Mar 15, 2019 | Team Udayavani |

ಸೋಮವಾರಪೇಟೆ: ಹೆಣ್ಣು ಅಬಲೆ ಯಲ್ಲ. ಮಹಾಮಾತೆ ಅಕ್ಕಮಹಾದೇವಿಯಂತೆ ವಿಚಾÃ ‌ವಂತಳಾಗಬೇಕು ಎಂದು ಸೋಮವಾÃ ‌ಪೇಟೆ ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್‌ ಅವರು ಅಭಿಪ್ರಾಯಪಟ್ಟರು.

Advertisement

ಸೋಮವಾರಪೇಟೆ ತಾಲೂಕು ಶಿರಂಗಾಲದ ಗ್ರಾಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ವೇದಿಕೆ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಚನ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.    ಸ್ತ್ರೀ ಅಸ್ಮಿತೆ ಎಂಬ ಚಿಂತನೆಯೇ ಮಹಿಳೆಯರಲ್ಲಿ ಪುಳಕ ಮೂಡಿಸುವಂತಹದ್ದು, ಮಹಿಳೆ ಸ್ವಾಭಿಮಾನದಿಂದ ಬದುಕುವ ದಾರಿ ಅಕ್ಕಮಹಾದೇವಿ ವಚನಗಳಲ್ಲಿ ಕಾಣಬಹುದು. ಅನುಭವ ಮಂಟಪದಲ್ಲಿ ಆಕೆ ಸರ್ವ ಶರಣರಿಗೆ ನೀಡಿದ ದಿಟ್ಟ ಉತ್ತರ ಎಲ್ಲಾ ಧರ್ಮಗಳೂ ಸ್ವೀಕರಿಸುವ ಮೌಲ್ಯ ಹೊಂದಿದೆ. ವಚನಗಳು, ವಚನಕಾರರು ಹಾಗೂ ಶರಣರ ತತ್ವಗಳು ಯಾವುದೇ ರೀತಿಯ ಮೌಡ್ಯಗಳನ್ನು ಹೇಳದೆ ಸರ್ವರ ಬಾಳಿಗೆ ಬೆಳಕನ್ನು ನೀಡುತ್ತದೆ ಎಂದರು. ಚಿ.ನಾ. ಸೋಮೇಶ್‌ ಮಾತನಾಡಿ, ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪ ಇಂದಿನ ಪ್ರಜಾಪ್ರಭುತ್ವದ ಸಂಸತ್‌ ವ್ಯವಸ್ಥೆಗೆ ಭುನಾದಿಯಾಗಿದೆ. ಶರಣರು ನಡೆದ ಜೀವನದ ಹಾದಿ, ತೋರಿದ ಭಕ್ತಿ ಮಾರ್ಗ ಶತಮಾನಗಳು ಕಳೆದರೂ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬಹುದಾದ ರೀತಿಯಲ್ಲಿದೆ ಎಂದರು    ಸೋಮವಾರಪೇಟೆ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಜಲಾ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಬಸವಾಪಟ್ಟಣ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್‌ ನಿವೃತ್ತ ಪ್ರಾಂಶುಪಾಲ ಎೆಚ್‌.ವಿ. ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌. ಮಹೇಶ್‌, ವಿರಾಜಪೇಟೆ ತಾಲೂಕು ಅಧ್ಯಕ್ಷ ಎಸ್‌.ಎಸ್‌. ಸುರೇಶ್‌, ಸೋಮವಾರಪೇಟೆ ತಾಲ್ಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನಾ ಧರ್ಮೇಂದ್ರ, ಗ್ರಾಮದ ನಿವೃತ್ತ ಶಿಕ್ಷಕ ಕಾಳೀಂಗಪ್ಪ, ಪ್ರಮುಖರಾದ ಗುಡುಗಳಲೆಯ ಜಿ.ಎಂ. ಕಾಂತರಾಜು, ನಿರ್ಮಲಾ ಶಿವಲಿಂಗ, ಸೌಭಾಗ್ಯ ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿರಂಗಾಲ ಗ್ರಾ. ಪಂ ಪೌರ ಕಾರ್ಮಿಕರಾದ ಮರಿಯಮ್ಮ, ಜಿ. ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಸೋಮವಾರಪೇಟೆ ಪ.ಪಂ ಸದಸ್ಯರಾದ ನಳೀನಿ ಗಣೇಶ್‌, ಶೀಲಾ ಡಿಸೋಜಾ, ಸೋಮವಾರಪೇಟೆ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷೆ ಜಲಾ ಕಾಳಪ್ಪ, ಸೋವåವಾರಪೇಟೆ ಅಕ್ಕನಬಳಗದ ಅಧ್ಯಕ್ಷೆ ಜಲಜಾ ಶೇಖರ್‌ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next