Advertisement

ಮುಂಗಾರು ಅಧಿವೇಶನ :  ಕೋವಿಡ್ ಬಗ್ಗೆ ಹೆಚ್ಚಿನ ಚರ್ಚೆಗೆ ಆದ್ಯತೆ : ಪ್ರಧಾನಿ ಮೋದಿ

12:14 PM Jul 19, 2021 | Team Udayavani |

ನವ ದೆಹಲಿ : ಮುಂಗಾರು ಅಧಿವೇಶನದಲ್ಲಿ ಕೋವಿಡ್ ಸಾಂಕ್ರಾಮಿಕದ ಬಗ್ಗೆ ಹೆಚ್ಚು ಚರ್ಚೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಆದ್ಯತೆ ನಿಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಧಿವೇಶನ ಆರಂಭಕ್ಕೂ ಮುನ್ನ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ, ಲಸಿಕೆ ಸದೃಢ ಬಾಹು(ಆರ್ಮ್)ವನ್ನು ನೀಡುತ್ತದೆ.  ಯಾರು ಲಸಿಕೆಯನ್ನು ತೆಗೆದುಕೊಳ್ಳುತ್ತಾರೋ ಅವರು ಬಾಹುಬಲಿ ಆಗುತ್ತಾರೆ. ಈಗಾಗಲೇ ದೇಶದಾದ್ಯಂತ 40 ಕೋಟಿಗೂ ಅಧಿಕ ಮಂದಿ ಈಗ ಲಸಿಕೆಯನ್ನು ಪಡೆದುಕೊಂಡು ಕೋವಿಡ್ ಸೋಂಕಿನಿಂದ ಬಾಹುಬಲಿಯಾಗಿದ್ದಾರೆ ಎಂದಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸಂದರ್ಭ ಇಡಿ ದೇಶದ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರದೆ ಹಾಗೂ ವಿಶ್ವದ ನಾಗರಿಕ ವ್ಯವಸ್ಥೆಯನ್ನೇ ಅಡಿಮೇಲಾಗಿಸಿದೆ. ಹಾಗಾಗಿ ಮುಂಗಾರು ಅಧಿವೇಶದಲ್ಲಿ ಕೋವಿಡ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಚರ್ಚೆ ಮಾಡಲು ಹೆಚ್ಚು ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ವಿದ್ಯಾಕಾಶಿ ಧಾರವಾಡದಲ್ಲಿ SSLC ಪರೀಕ್ಷೆ : ವಿದ್ಯಾರ್ಥಿಗಳಿಗೆ ಚಾಕೊಲೇಟ್ ‌ಸ್ವಾಗತ

ಈ ಬಗ್ಗೆ ಆರೋಗ್ಯಕರ ಚರ್ಚೆ ಸಂಸತ್ ಅಧಿವೇಶನದಲ್ಲಿ ಮಾಡುವುದರಿಂದ ವಿರೋಧ ಪಕ್ಷ ಹಾಗೂ ಎಲ್ಲಾ ಸಂಸದರ ಸಲಹೆ ಸೂಚನೆಗಳ ಕ್ರೋಢಿಕರಣ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಕೋವಿಡ್ ಸೋಂಕನ್ನು ಎದುರಿಸುವಲ್ಲಿ ಎಡವಿದ ಎಲ್ಲಾ ವಿಚಾರಗಳನ್ನು ಸರಿಪಡಿಸಿಕೊಳ್ಳಬಹುದು. ನಾವೆಲ್ಲರೂ ಕೋವಿಡ್ ವಿರುದ್ಧ ಒಗ್ಗಟ್ಟಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

Advertisement

ಕೋವಿಡ್ ಪರಿಸ್ಥಿತಿಯಲ್ಲಿನ ಸಂಪೂರರ್ಣ ಮಾಹಿತಿಯನ್ನು ಒಳಗೊಂಡ ವರದಿಯನ್ನು ಎಲ್ಲಾ ಇಲಾಖೆಯ ಸಚಿವರುಗಳಿಗೆ ಸೂಚಿಸಿದ್ದೇನೆ. ಸಂಸತ್ತಿನಲ್ಲಿಯೂ ಹಾಗೂ ಸಂಸತ್ತಿನ ಹೊರಭಾಗದಲ್ಲಿಯೂ ಕೋವಿಡ್ ವಿಚಾರವಾಗಿಯೇ ಚರ್ಚೆ ಮಾಡಲು ಪಕ್ಷ ಬಯಸುತ್ತದೆ. ಎಲ್ಲಾ ಪಕ್ಷಗಳ ನಾಯಕರ ಪ್ರಶ್ನೆಗಳನ್ನು ಸ್ವಾಗತಿಸುತ್ತದೆ. ಆರೋಗ್ಯಕರ ಚರ್ಚೆಗೆ ಮುಂಗಾರು ಅಧಿವೇಶನ ಸಾಕ್ಷಿಯಾಗಬೇಕು ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಭುತ್ವ, ಜನರ ನಂಬಿಕೆಯನ್ನು ಬಲಪಡಿಸಿ ಮತ್ತು ಅಭಿವೃದ್ಧಿಯ ವೇಗವನ್ನು ಸುಧಾರಿಸುವತ್ತ ಅಧಿವೇಶನ ನಡಯಬೇಕು  ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು, ಇಂದಿನಿಂದ ಆರಂಭಗೊಂಡ ಸಂಸತ್ ಮುಂಗಾರು ಅಧಿವೇಶನ ಆಗಸ್ಟ್ 13ರ ತನಕ ನಡೆಯಲಿದೆ.

ಇದನ್ನೂ ಓದಿ : ಆಡಿಯೋ ಯಾರು ವೈರಲ್ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು : ಈಶ್ವರಪ್ಪ

Advertisement

Udayavani is now on Telegram. Click here to join our channel and stay updated with the latest news.

Next