Advertisement

ದಾಖಲಾತಿಗಾಗಿ ನಿತ್ಯ ಕಚೇರಿಗೆ ಅಲೆದಾಟ

09:32 PM Jul 09, 2019 | Lakshmi GovindaRaj |

ಕೊಳ್ಳೇಗಾಲ: ತಾಲೂಕು ಕಚೇರಿಯಲ್ಲಿ ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಮತ್ತು ರೈತರು ಪಹಣಿ ಮತ್ತು ಇನ್ನಿತರ ಪ್ರಮಾಣ ಪತ್ರ ಪಡೆಯುವ ಸಲುವಾಗಿ ತಮ್ಮ ದೈನಂದಿನ ಕೂಲಿ ಕೆಲಸವನ್ನು ಬಿಟ್ಟು ಅಲೆದಾಡುವಂತೆ ಆಗಿದೆ.

Advertisement

ಪಡ ಶಾಲೆ: ಸರ್ಕಾರದ ಎಲ್ಲಾ ಇಲಾಖೆಯ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ದೊರಕಿಸಿಕೊಡುವ ನಿಟ್ಟಿನಲ್ಲಿ ತಾಲೂಕು ಕಚೇರಿಯ ಆವರಣದಲ್ಲಿ ಪಡಶಾಲೆಯೊಂದನ್ನು ತೆರೆಯಲಾಗಿದ್ದು, ಪಡಶಾಲೆಯಲ್ಲಿ ವಿವಿಧ ದಾಖಲಾತಿಗಳನ್ನು ಪಡೆದುಕೊಳ್ಳಲು ಆಗಮಿಸುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳಿಗೆ ಸಮಸ್ಯೆ: ಪಡಶಾಲೆಯಲ್ಲಿ ವಿವಿಧ ದಾಖಲಾತಿಗಳನ್ನು ಪಡೆಯಲು ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ಕಳೆದ ತಿಂಗಳ ಪಡೆದುಕೊಳ್ಳುವ ಸಲುವಾಗಿ ಆಗಮಿಸಿದ ವೇಳೆ ಪಡಶಾಲೆಯ ಮೇಲ್ಛಾವಣಿ ಕಲಾರ್‌ ಶೀಟ್‌ನಿಂದ ಕೂಡಿದ್ದ ಹಿನ್ನೆಲೆಯಲ್ಲಿ ಬೇಸಿಗೆ ಬಿಸಿಲಿನಿಂದ ಕಾದ ಶೀಟ್‌ನಿಂದಾಗಿ ಜನರು ಬೆವರು ಸುರಿಸಿಕೊಂಡು ಶಕೆಯಿಂದ ಬಳಲುವ ಸ್ಥಿತಿ ಏರ್ಪಟ್ಟಿರುವುದನ್ನು ಕಂಡ ಶಾಸಕ ಎನ್‌.ಮಹೇಶ್‌ ಪಡಶಾಲೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸೂಕ್ತ ಸೌಕರ್ಯ ಕಲ್ಪಿಸಿಕೊಡುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದರೂ ಸಹ ಜನರ ಸಮಸ್ಯೆ, ಸಮಸ್ಯೆಯಾಗಿಯೇ ತಾಂಡವಾಡುತ್ತಿದೆ.

ಆಧಾರ್‌ ನೋಂದಣಿ: ಸಾರ್ವಜನಿಕರು ಆಧಾರ್‌ ಕಾರ್ಡ್‌ ಪಡೆದುಕೊಳ್ಳಲು ತಾಲೂಕು ಕಚೇರಿಯಲ್ಲಿ ಸಾಲು ಸಾಲುಗಟ್ಟಿ ಕಾದು ಕುಳುತ್ತಿದ್ದರು ಮತ್ತು ಸರ್ಕಾರ ಕಾರ್ಡ್‌ನ್ನು ಕಡ್ಡಾಯಗೊಳಿಸಿದಾಗ ಸಾರ್ವಜನಿಕರು ಇಡೀ ರಾತ್ರಿ ತಾಲೂಕು ಕಚೇರಿಯಲ್ಲಿ ಸಾಲು ಸಾಲಾಗಿ ಮಲಗಿ ಆಧಾರ್‌ ಕಾರ್ಡ್‌ ಪಡೆದುಕೊಂಡರು. ಕೆಲವು ಕಾರ್ಡ್‌ಗಳಲ್ಲಿ ದೋಷ ಉಂಟಾದ ಬಳಿಕ ಆಧಾರ್‌ ಕಾರ್ಡ್‌ಗಳನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿಕೊಡುವಂತೆ ಸರ್ಕಾರ ಸೂಚನೆ ನೀಡಿತ್ತು. ಸರ್ಕಾರ ಎಲ್ಲೇ ಆಧಾರ್‌ ಕಾರ್ಡ್‌ ಸೂಚನೆ ನೀಡಲು ಎಲ್ಲೆಡೆ ಸಮರ್ಪಕವಾಗಿ ದೊರೆಯದೆ ದಿನನಿತ್ಯ ಕಾರ್ಡಿಗಾಗಿ ಅಲೆದಾಡವೋ, ಅಲೆದಾಟ ಮಾಡುವಂತಾಗಿದೆ.

ಕೂಲಿ ಕಾರ್ಮಿಕರು: ತಾಲೂಕು ಕೇಂದ್ರವು ಹಳ್ಳಿಗಳ ಕೇಂದ್ರವಾಗಿದ್ದು, ಗ್ರಾಮಸ್ಥರು ವ್ಯವಸಾಯ ಮತ್ತು ಕೂಲಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಕೂಲಿಗೆ ಹೋದರೆ ಹಣ ಲಭ್ಯ, ಕೂಲಿಗೆ ಹೋಗದಿದ್ದರೆ ಹಣ ಸಿಗದೆ ಊಟಕ್ಕಾಗಿ ಸಾಲ, ಸೂಲ ಮಾಡುವಂತಹ ಸ್ಥಿತಿಯಲ್ಲಿ ಜನರು ಜೀವನ ಮಾಡುತ್ತಿದ್ದಾರೆ. ಇದರ ನಡುವೆ ಆಧಾರ್‌ ಕಾರ್ಡ್‌ಗಾಗಿ ಮತ್ತು ರೈತರು ಪಹಣಿಗಾಗಿ ತಮ್ಮ ದೈನಂದಿನ ಕೂಲಿ ಕೆಲಸ ಮತ್ತು ಜಮೀನಿನ ಕೆಲಸವನ್ನು ಬಿಟ್ಟು ಸದಾ ತಾಲೂಕು ಕಚೇರಿಗೆ ಅಲೆದಾಡುವಂತೆ ನಿರ್ಮಾಣವಾಗಿದೆ.

Advertisement

ಶಾಲಾ ವಿದ್ಯಾರ್ಥಿಗಳು: ಬೇಸಿಗೆ ರಜೆ ಕಳೆಯುತ್ತಿದ್ದಂತೆ ಜೂನ್‌ ತಿಂಗಳು ಬಂದಿತ್ತೆಂದರೆ ವಿದ್ಯಾರ್ಥಿಗಳು ವಿವಿಧ ಶಾಲಾ ಕಾಲೇಜುಗಳಿಗೆ ಸೇರುವ ತಿಂಗಳು ಆಗಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿಗಾಗಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಪಡಶಾಲೆಗೆ ಆಗಮಿಸುತ್ತಾರೆ. ಪಡಶಾಲೆಯಲ್ಲಿ ಗಣಕಯಂತ್ರ ಒಂದು ಯಂತ್ರ ಮಾತ್ರ ಕೆಲಸ ನಿರ್ವಹಿಸುವುದರಿಂದ ಸಾಲು ಸಾಲು ಗಟ್ಟಲೆ ನಿಂತು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಕಾದು ಕುಳಿತುಕೊಳ್ಳುವಂತಹ ಸ್ಥಿತಿ ಏರ್ಪಟ್ಟಿದೆ.

ಅಲೆದಾಟಕ್ಕೆ ಕೊನೆ ಎಂದು: ತಾಲೂಕು ಆಡಳಿತ ಕೂಡಲೇ ಈಗಿರುವ ಒಂದು ಗಣಕ ಯಂತ್ರಗಳ ಬದಲಾಗಿ ಮತ್ತಷ್ಟು ಗಣಕ ಯಂತ್ರಗಳನ್ನು ನಿಯೋಜನೆ ಮಾಡಿ ವಿವಿಧ ದಾಖಲಾತಿಗಾಗಿ ಬರುವ ಸಾರ್ವಜನಿಕರಿಗೆ ಮತ್ತು ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಎದುರಾಗಿರುವ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಾಗಿದ್ದು, ಕೂಡಲೇ ಹೆಚ್ಚು ಗಣಕ ಯಂತ್ರಗಳನ್ನು ಅಳವಡಿಸಿ ಅಲೆದಾಟಕ್ಕೆ ಕೊನೆ ಹೇಳಬೇಕಾಗಿದ್ದು, ತಾಲೂಕು ಆಡಳಿತ ಯಾವ ರೀತಿ ಕ್ರಮಕೈಗೊಳ್ಳಲಾಗಿದೆ ಕಾದು ನೊಡಬೇಕಾಗಿದೆ.

ಸಾರ್ವಜನಿಕರಿಗೆ ಮತ್ತು ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿವಿಧ ದಾಖಲಾತಿಗಳನ್ನು ನೀಡಲು ಕಷ್ಟಕರವಾಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳ ಗಮನ ಸೆಳೆದು ಈಗಿರುವ ಒಂದು ಗಣಕ ಯಂತ್ರದ ಬದಲಾಗಿ ಮತ್ತಷ್ಟು ಗಣಕ ಯಂತ್ರಗಳನ್ನು ಅಳವಡಿಸಿ ಎಲ್ಲಾ ದಾಖಲಾತಿಗಳು ಶೀಘ್ರದಲ್ಲಿ ದಕ್ಕುವಂತೆ ಮಾಡಲಾಗುವುದು.
-ಕೆ.ಕುನಾಲ್‌, ತಹಶೀಲ್ದಾರ್‌

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next