Advertisement

ಮಾಸಾಶನ ಪಡೆಯಲು ತಪ್ಪದ ಅಲೆದಾಟ

01:10 PM Jul 26, 2019 | Suhan S |

ದೋಟಿಹಾಳ: ಕೇಂದ್ರ, ರಾಜ್ಯ ಸರಕಾರಗಳು ನೀಡುತ್ತಿರುವ ವೃದ್ಧರ, ವಿಧವೆಯರ, ಅಂಗವಿಕಲರ ಮಾಸಾಶನ ಪಡೆಯಲು

Advertisement

ತೆಗ್ಗಿಹಾಳ, ಕೆ.ಗೋನಾಳ, ಕೆ.ಬಸಾಪೂರ, ಕೆ.ಹೋಸರು ಗ್ರಾಮಗಳ ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ಸಾರಿಗೆ ವ್ಯವಸ್ಥೆ ಇರದೇ ಇರುವುದರಿಂದ ಬಳೂಟಗಿಯ ಅಂಚೆ ಕಚೇರಿಗೆ ಆರೇಳು ಕಿ.ಮೀ. ಕಾಲ್ನಡಿಗೆಯಲ್ಲೇ ಹೋಗಬೇಕಾದ ಸ್ಥಿತಿಯಿದೆ.

ಈ ಮೊದಲು ಈ ಗ್ರಾಮಗಳಿಗೆ ಪೋಸ್ಟ್‌ಮ್ಯಾನ್‌ ಅವರೇ ಹೋಗಿ ಫಲಾಭವಿಗಳಿಗೆ ಹಣ ನೀಡುತ್ತಿದರು. ಈಗ ಅಕೌಂಟ್ ತೆಗೆದ ಕಾರಣ ಫಲಾನುಭವಿಗಳು ಅಂಚೆ ಕಚೇರಿಗೆ ಬಂದು ಮಾಸಾಶನ ಒಯ್ಯಬೇಕಿದೆ.

ನಮ್ಮ ಪಾಡು ಕೇಳ್ಳೋರಿಲ್ಲ. ಕಳೆದ 7-8 ತಿಂಗಳಿಂದ ಮಾಸಾಶನಕ್ಕಾಗಿ 6-7 ಕಿಲೋಮೀಟರ್‌ ನಡೆದುಕೊಂಡು ಹೋಗಿ ಬರುವಂತಾಗಿದೆ. ವಯಸ್ಸಾದ ಮೇಲೂ ನಮಗೆ ನಡೆದುಕೊಂಡು ಹೋಗಿ ಬರುವುದು ಕಷ್ಟವಾಗಿದೆ ಎನ್ನುತ್ತಾರೆ ತೆಗ್ಗಿಹಾಳ ಗ್ರಾಮದ ಅಮರಮ್ಮ ಮೇಟಿ, ರುಕ್ಕಮ್ಮ ಲಿಂಗಸೂರು, ಹನುಮಕ್ಕ ಬೆಟಿಗೇರಿ ಮತ್ತು ಕೆಂಚಮ್ಮ ಮೇಟಿ ತೆಗ್ಗಿಹಾಳ, ಕೆ.ಗೋನ್ನಾಳ, ಕೆ.ಬಸಾಪೂರ ಮತ್ತು ಕೆ.ಹೋಸರು ಗ್ರಾಮಗಳ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಮಾಸಾಶನ ಪಡೆಯಲು 6-7 ಕಿ.ಮೀ. ಕಚ್ಚಾ ದಾರಿಯಲ್ಲಿ ನಡೆದುಕೊಂಡು ಹೋಗುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಸಂಬಂಧಪಟ್ಟ ತಹಸೀಲ್ದಾರ್‌ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸದಸ್ಯ ಕೆ.ಮಹೇಶ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next