Advertisement

ನೀರಿಗಾಗಿ ತಪ್ಪದ ಅಲೆದಾಟ

05:00 PM Jul 23, 2019 | Suhan S |

ಮಸ್ಕಿ: ತಾಲೂಕಿನ ಗುಡದೂರು ಗ್ರಾಪಂ ವ್ಯಾಪ್ತಿಯ ಹಸಮಕಲ್ ಗ್ರಾಮದ ಹೊರವಲಯದಲ್ಲಿನ ಕುಡಿಯುವ ನೀರಿನ ಕೆರೆ ಬರಿದಾಗಿದೆ. ಕುಡಿಯುವ ನೀರಿಗೆ ಕೆರೆ ನೀರನ್ನೇ ಅವಲಂಬಿಸಿದ ಗ್ರಾಮಗಳ ಗ್ರಾಮಸ್ಥರು ನೀರಿಗಾಗಿ ಅಲೆದಾಡುವಂತಾಗಿದೆ.

Advertisement

ಹಸಮಕಲ್ ಗ್ರಾಮದ ಬಳಿಯ ಕೆರೆ 15 ದಿನಗಳ ಹಿಂದೆಯೇ ಖಾಲಿ ಆಗಿದೆ. ಗುಡದೂರು, ಹಸಮಕಲ್, ರಂಗಾಪುರ, ಪಾಂಡುರಂಗ ಕ್ಯಾಂಪ್‌, ಮುದ್ದಾಪುರ ಗ್ರಾಮಸ್ಥರು ಈ ಕೆರೆ ನೀರನ್ನೇ ಅವಲಂಬಿಸಿದ್ದರು. ಈಗ ಕೆರೆ ಖಾಲಿ ಆಗಿದ್ದರಿಂದ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುವಂತಾಗಿದೆ.

ಒಂದೇ ಶಾಲಾ ಬೋರ್‌ವೆಲ್ ಆಸರೆ: ರಂಗಾಪುರು ಗ್ರಾಮದ ಹತ್ತಿರದ ತುಂಗಭದ್ರಾ ಎಡದಂಡೆ ನಾಲೆ ಪಕ್ಕದಲ್ಲಿರುವ ಶಾಲಾ ಬೋರ್‌ವೆಲ್ ಒಂದೇ ಗತಿಯಂತಾಗಿದೆ. ಸಂಜೆಯಾದರೆ ಸಾಕು ಗ್ರಾಮಸ್ಥರು ನೂರಾರು ಖಾಲಿಗಳನ್ನು ಶಾಲಾ ಬೋರ್‌ವೆಲ್ ಬಳಿ ಸರದಿಯಲ್ಲಿ ಇರಿಸಿ ನೀರಿಗಾಗಿ ಕಾಯುವಂತಾಗಿದೆ.

ಒಮ್ಮೆಯೂ ಕೆರೆ ಭರ್ತಿ ಮಾಡಿಲ್ಲ. ಬೇಸಿಗೆ ಆರಂಭಕ್ಕೂ ಮುನ್ನ ನಾಲೆಗೆ ನೀರು ಸ್ಥಗಿತಗೊಳ್ಳುವ ಸಮಯದಲ್ಲೂ ಕುಡಿಯುವ ನೀರಿನ ಕೆರೆ ಭರ್ತಿ ಮಾಡಿರಲಿಲ್ಲ. ನಂತರ ಬೇಸಿಗೆ ಆರಂಭವಾದ ನಂತರ ಕುಡಿಯುವ ನೀರಿಗಾಗಿ ನಾಲೆಗೆ ನೀರು ಹರಿಸಿದಾಗಲೂ ಈ ಕೆರೆ ಭರ್ತಿ ಮಾಡಿಲ್ಲ. ಹೀಗಾಗಿ ಈಗ ಕೆರೆ ಸಂಪೂರ್ಣ ಬರಿದಾಗಿದೆ. ನಾಲೆ ಪಕ್ಕದಲ್ಲೇ ಕೆರೆ ನಿರ್ಮಿಸಿದರೂ ಕೆರೆಗೆ ನೀರು ತುಂಬಿಸಲು ಪಿಡಿಒ ನಿರ್ಲಕ್ಷಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಬಾವಿ ನೀರು ಖಾಸಗಿಗೆ ಬಳಕೆ: ಕುಡಿಯುವ ನೀರಿನ ಕೆರೆ ಸಂಪೂರ್ಣ ಖಾಲಿ ಆಗಿರುವುದು ಪಿಡಿಒ ಗಮನಕ್ಕಿದೆ. ಕೆರೆಯ ಪಕ್ಕದಲ್ಲಿರುವ ಕೊಳವೆಬಾವಿ ನೀರನ್ನು ವ್ಯಕ್ತಿಯೊಬ್ಬರು ಕೃಷಿ ಚಟುವಟಿಕೆಗೆ ಬಳಸುತ್ತಿದ್ದೂ ಗುಡದೂರು ಗ್ರಾಪಂ ಪಿಡಿಒ ಮೌನ ವಹಿಸಿರುವುದು ಅನುಮಾನಕ್ಕೆಡೆ ಮಾಡಿದೆ.

Advertisement

ಕ್ರಮಕ್ಕೆ ಹಿಂದೇಟು: ಗುಡದೂರು ಗ್ರಾಪಂ ವ್ಯಾಪ್ತಿಯ ನಾಲ್ಕೈದು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಆದರೆ ಕೊಳವೆಬಾವಿ ನೀರನ್ನು ಖಾಸಗಿ ವ್ಯಕ್ತಿಯೊಬ್ಬರು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಿರುವುದನ್ನು ತಡೆದು ಗ್ರಾಮಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲು ಗ್ರಾಪಂ ಪಿಡಿಒ ಹಿಂದೇಟು ಹಾಕುತ್ತಿದ್ದಾರೆ ಎಂದು ರಂಗಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next