Advertisement

ಆಹಾರಕ್ಕಾಗಿ ಅಲೆಮಾರಿ ಜನಾಂಗದ ಅಲೆದಾಟ

02:16 PM Mar 28, 2020 | Suhan S |

ಹರಪನಹಳ್ಳಿ: ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ವಾಸವಾಗಿರುವ ಅಲೆಮಾರಿ ಶಿಂದೋಳ್‌ ಸಮುದಾಯದ ಸುಮಾರು 35 ಕುಟುಂಬಗಳು ಆಹಾರಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.

Advertisement

ಕಳೆದ 30 ವರ್ಷಗಳಿಂದ ಹಲುವಾಗಲು ಗ್ರಾಮದ ಹೊರವಲಯದಲ್ಲಿ ಜೋಪಡಿ ಹಾಕಿಕೊಂಡು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿರುವ ಶಿಂದೋಳ್‌ ಸಮುದಾಯದವರು ಪ್ರತಿನಿತ್ಯದುರುಗಮ್ಮ, ಸುಂಕಲಮ್ಮ ಎಂಬ ದೇವರು ಹೊತ್ತು ಬರುವ ಪುಡಿಗಾಸಿನಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಕೋವಿಡ್ 19 ಅಟ್ಟಹಾಸ ಮೆರೆಯುತ್ತಿರುವುದರಿಂದ ಕಳೆದ ಒಂದು ವಾರದಿಂದ ಗ್ರಾಮದೊಳಗೆ ಇವರನ್ನು ಜನರು ಬಿಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಆಹಾರವಿಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ. ಜೋಪಡಿಗಳಿಂದ ಹೊರಬರುವಂತಿಲ್ಲ, ಗ್ರಾಮದಲ್ಲಿ ಕಾಲಿಡುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಹಾರ ಧಾನ್ಯ ಮತ್ತು ದಿನಬಳಕೆ ವಸ್ತುಗಳಿಲ್ಲದೇ ಹಸಿವಿನಿಂದ ನರಳುವಂತಾಗಿದೆ. ಚಿಕ್ಕ ಚಿಕ್ಕ ಮಕ್ಕಳು ಹಸಿವಿನಿಂದ ನರಳುವಂತಹ ಪರಿಸ್ಥಿತಿ ಎದುರಾಗಿದೆ.

ಹೀಗಾಗಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಅಂಗಲಾಚಿ ಬೇಡುತ್ತಿದ್ದಾರೆ. ಅಲೆಮಾರಿಗಳ ಕಷ್ಟ ಅರಿತು ಕೂಡಲೇ ತಾಲೂಕು ಆಡಳಿತ ಮತ್ತು ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ದಿನಬಳಕೆ ವಸ್ತುಗಳು ಮತ್ತು ಆಹಾರ ಧಾನ್ಯ ವಿತರಿಸಬೇಕು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ದಾವಣಗೆರೆ ಜಿಲ್ಲಾಧ್ಯಕ್ಷ ವಿ. ಸಣ್ಣಅಜ್ಜಯ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಅಲೆಮಾರಿಗಳು, ನಿರ್ಗತಿಕರು, ಭಿಕ್ಷುಕರು ಹಸಿವಿನಿಂದ ನರಳದಂತೆ ಅವರಿಗೆ ಆಹಾರ ಒದಗಿಸಲು ತಂಡ ರಚನೆ ಮಾಡಲಾಗಿದೆ. ತಂಡದಲ್ಲಿರುವಸಿಡಿಪಿಒ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೇವೆ. ವರದಿ ಬಂದ ನಂತರ ಆಹಾರ ಸಾಮಗ್ರಿ ಪೂರೈಕೆ ಮಾಡಲಾಗುವುದು.-ಡಾ| ನಾಗವೇಣಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next