Advertisement

ಆಧಾರ್‌ಗಾಗಿ ಪರದಾಟ: ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

05:18 PM Jul 24, 2019 | Team Udayavani |

ಮಾಗಡಿ: ಅಧಿಕಾರಕ್ಕಾಗಿ ಅಹೋರಾತ್ರಿಯಲ್ಲಿ ಸಚಿವರು, ಶಾಸಕರು ವಿಧಾನ ಸಭೆಯಲ್ಲಿ ಚರ್ಚೆಗಳು ನಡೆಸುತ್ತಿದ್ದಾರೆ. ಇತ್ತ ತಾಲೂಕಿನಲ್ಲಿ ಪೋಸ್ಟ್‌ ಆಫೀಸ್‌ ಮುಂದೆ ಸಾರ್ವಜನಿಕರು ಆಧಾರ್‌ ಮಾಡಿಸಲು ಅರ್ಜಿ ಫಾರಂಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ ಇದೆಂಥ ವಿಪರ್ಯಾಸ ಎಂದು ದಸಂಸ ಸಂಚಾಲಕ ದೊಡ್ಡಯ್ಯ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿ ಪಡಿತರಕ್ಕಾಗಿಯೋ ಅಥವಾ ಸಿನಿಮಾಕ್ಕಾಗಿಯೋ ಸರದಿಯಲ್ಲಿ ಸಾರ್ವಜನಿಕರು ನಿಂತಿಲ್ಲ, ಆಧಾರ್‌ ಕಾರ್ಡ್‌ನ ಅರ್ಜಿ ಫಾರಂಗಾಗಿ ನಿಂತಿದ್ದಾರೆ. ಪೋಸ್ಟ್‌ ಆಫೀಸ್‌ ಮುಂದೆ ಸಾರ್ವಜನಿಕರು ಆಧಾರ್‌ ಕಾರ್ಡ್‌ ಮಾಡಿಸಿಕೊಳ್ಳಲು ಕೇವಲ ಅರ್ಜಿಗಾಗಿ ಅಹೋರಾತ್ರಿ ಸರದಿಯಲ್ಲಿ ಬಂದು ನಿಲ್ಲುತ್ತಾರೆ ಎಂದರೆ ನಿಜಕ್ಕೂ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.

ಸಾರ್ವಜನಿಕರ ಪರದಾಟ: ಈಗ ಎಲ್ಲದಕ್ಕೂ ಆಧಾರ್‌ ಕೇಳುತ್ತಾರೆ. ಆಧಾರ್‌ ಇಲ್ಲದಿದ್ದರೆ ನಾವು ಬ್ಯಾಂಕ್‌ನಲ್ಲಿ ಇಟ್ಟಿರುವ ಹಣವನ್ನು ಪಡೆಯಲಾ ಗುವುದಿಲ್ಲ, ಪಡಿತರವೂ ಇಲ್ಲ, ಪೆನ್ಷನ್‌ ಸಹ ಪಡೆಯಲಾಗುವುದಿಲ್ಲ, ಬಹುಮುಖ್ಯವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲಾಗುತ್ತಿಲ್ಲ, ಆಸ್ಪತ್ತೆಯಲ್ಲಿ ಚಿಕಿತ್ಸೆಗೂ ಆಧಾರ್‌ ಕೇಳು ಪರಿಸ್ಥಿತಿಯಿದೆ. ಇಂಥ ಪರಿಸ್ಥಿತಿಯಲ್ಲಿ ಆಧಾರ್‌ ಕಾರ್ಡ್‌ ಮಾಡಿಸಲು ತಾಲೂಕಿನ ಸಾರ್ವಜನಿಕರು ಪರದಾಡುತ್ತಿದ್ದಾರೆ ಎಂದು ದೂರಿದರು.

ನಿಲ್ಲದ ಜನರ ಗೋಳು: ಇತ್ತ ನಮ್ಮ ರಾಜಕಾರಣಿಗಳು ಅಧಿಕಾರಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇನ್ನೂ ಕೆಲವು ರಾಜಕಾರಣಿಗಳು ರೆಸಾರ್ಟ್‌ ನಲ್ಲೇ ಕಾಲಕಳೆಯುತ್ತಿದ್ದಾರೆ. ಕ್ಷೇತ್ರಕ್ಕೆ ಕಾಲಿಟ್ಟಿಲ್ಲ, ಜನಸಾಮಾನ್ಯರ ಸಮಸ್ಯೆ ಸ್ಪಂದಿಸದ ರಾಜಕಾರಣಿಗಳಿಂದ ನಾವು ಏನೇನು ನಿರೀಕ್ಷಲಾಗುತ್ತಿಲ್ಲ. ಪಟ್ಟಣದಲ್ಲಿ ಕಳೆದ ಎರಡು ವರ್ಷಗಳಿಂದ ಆಧಾರ್‌ ಕೇಂದ್ರವೇ ಇರಲಿಲ್ಲ. ಈಗ ತಾಲೂಕು ಕಚೇರಿ, ಪುರಸಭೆ, ಪೋಸ್ಟ್‌ ಆಫೀಸಿನಲ್ಲಿ ಆಧಾರ್‌ ಕಾರ್ಡ್‌ ಮಾಡಲಾಗುತ್ತಿದೆ. ಇನ್ನೂ ಹತ್ತು ಕಡೆದ ಆಧಾರ್‌ ಕೇಂದ್ರ ಪ್ರಾರಂಭಿಸದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಇಲ್ಲದಿದ್ದರೆ ಈ ಗೋಳು ನಿರಂತರವಾಗಿರುತ್ತದೆ ಎಂದು ದೂರಿದರು.

ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು: ಕೇವಲ ನೂರು ಇನ್ನೂರು ರೂ.ಗೆ ಆಸೆಪಟ್ಟು ಮತ ಹಾಕುತ್ತಿದ್ದೇವೆ. ಅದು ಬದಲಾಗಬೇಕು. ನಮಗೆ ಎಂಥ ನಾಯಕ ಬೇಕೆಂದು ತೀರ್ಮಾನಿಸಿ ಆಯ್ಕೆ ಮಾಡಿಕೊಳ್ಳುವುದರಿಂದ ನಮಗೆ ಸಾಮಾಜಿಕ ನ್ಯಾಯ ಸಿಗುತ್ತದೆ. ಸರ್ಕಾರ ಸೌಲತ್ತುಗಳನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

Advertisement

ಈ ಬಗ್ಗೆ ಪೋಸ್ಟ್‌ ಮಾಸ್ಟರ್‌ ಧನಂಜಯ ಮಾತನಾಡಿ, ನಮ್ಮ ಪೋಸ್ಟ್‌ ಆಫೀಸ್‌ನಲ್ಲಿ ಕೇವಲ 4 ಮಂದಿ ಸಿಬ್ಬಂದಿ ಇರುವುದು. ತಾಲೂಕಿನಲ್ಲಿ 3 ಕಡೆ ಪೋಸ್ಟ್‌ ಆಫೀಸ್‌ ಇದೆ. ನಾವೆಲ್ಲರೂ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. ತಮ್ಮ ಸೇವೆಯಿಂದ ತಮ್ಮ ಇಲಾಖೆಯಿಂದ ಗ್ರಾಹಕರಿಗೆ ಸಮಸ್ಯೆಯಾಗಿಲ್ಲ, ಸಿಬ್ಬಂದಿ ಕೊರತೆ ಇರುವುದರಿಂದ ಆಧಾರ್‌ ಕಾರ್ಡ್‌ ಮಾಡಲಾಗುತ್ತಿಲ್ಲ, ಆದರೂ ಶಕ್ತಿ ಮೀರಿ ಆಧಾರ್‌ಕಾರ್ಡ್‌ ಮಾಡಿಕೊಡಲಾಗುತ್ತಿದೆ. ಇಲ್ಲಿಗೆ ಬರುವ ಸಾರ್ವಜನಿಕರನ್ನು ಗಮನಿಸಿದರೆ ಇನ್ನೂ ಹತ್ತು ಆಧಾರ್‌ ಕೇಂದ್ರ ತೆರೆಯಬೇಕಾಗುತ್ತದೆ. ಒಂದು ತಿಂಗಳಿಗೆ ಸದ್ಯಕ್ಕೆ ಪ್ರತಿದಿನ ಆಧಾರ್‌ ಮಾಡಿಕೊಡಲು 20 ಟೋಕನ್‌ ಕೊಡಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next