Advertisement

ಕರುಳ ಕುಡಿ ಉಳಿಸಿಕೊಳ್ಳಲು ಅಲೆದಾಟ

12:32 PM Nov 24, 2018 | |

ತಾಳಿಕೋಟೆ: ಕಡು ಬಡತನದಲ್ಲಿ ಕೂಲಿ ನಾಲಿ ಮಾಡಿಕೊಂಡು ಸುಖ ಸಂತೋಷದೊಂದಿಗೆ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ದೇವರು ನೀಡಿದ ಕರುಳು ಕುಡಿಗೆ ಬಂದಿರುವ ಜೀವದ ಆಪತ್ತನ್ನು ತಪ್ಪಿಸಿಕೊಳ್ಳಲು ತಂದೆ ತಾಯಿ ಆರ್ಥಿಕ ನೆರವಿಗಾಗಿ ಅಲೆದಾಡುತ್ತಿರುವುದು ನೋಡಿದ ಜನರಿಗೆ ಕರಳು ಕಿವುಚುವಂತೆ ಮಾಡಿದೆ. 

Advertisement

ತಾಳಿಕೋಟೆ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ವಾಸಿಸುತ್ತಿರುವ ರೇಣುಕಾ ಪರಮಾನಂದ ಕಲ್ಲೂರ ಎಂಬ ದಂಪತಿಗೆ 7 ವರ್ಷದ ಸುದರ್ಶನ ಎಂಬ ಪುತ್ರನಿದ್ದಾನೆ. ಆತನಿಗೆ ವಾಸಿಯಾಗದ ಕಾಯಿಲೇ ವೈದ್ಯರೇ ಹೇಳಿರುವಂತೆ 2 ವರ್ಷದ ಹಿಂದೆಯೇ ಲಿವರ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಆದರೆ ಈ ಕುಟುಂಬ ಆರ್ಥಿಕವಾಗಿ ಬಡತನದಲ್ಲಿದ್ದು ಸ್ಥಳೀಯ ವೈದ್ಯರಿಂದಲೇ ಚಿಕಿತ್ಸೆ ಮೇಲೆ ಸಲಹೆಗಳನ್ನು ಪಡೆದುಕೊಳ್ಳುತ್ತ ಸಾಗಿ ಬಂದಿತ್ತು.

ಆದರೆ ಇತ್ತೀಚಿಗೆ ಈ ಸುದರ್ಶನಿಗೆ ಕಾಣಿಸಿಕೊಳ್ಳುತ್ತಿರುವ ಹೊಟ್ಟೆ ಮತ್ತು ಕಾಲು ಬಾವು ಉಲ್ಬಣಗೊಳ್ಳುತ್ತ ಸಾಗಿದ್ದರಿಂದ ಬೆಂಗಳೂರಿನ ಸಿಎಂಐ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ದಾಖಲಿಸಲಾಗಿದೆ. ಆದರೆ ವೈದ್ಯರು ಮಗುವಿನ ಲಿವರ್‌ನಲ್ಲಿ ದೋಷ ಹೆಚ್ಚಿಗೆ ಆಗಿರುವುದರಿಂದ ಮಗು ಬದುಕುಳಿಯಬೇಕಾದರೆ ಲೀವರ್‌ ಬದಲಾವಣೆ ಒಂದೇ ದಾರಿಯಾಗಿದೆ ಎಂದು ಹೇಳಿದ್ದರಿಂದ ಈ ಕುಟುಂಬ ದಿಕ್ಕು ತೋಚದಂತಾಗಿ ಕಣ್ಣೀರಿನಲ್ಲಿ ಮುಳುಗಿ ಸಂಕಟ ಪಡುತ್ತಿದೆ.

ಸುದರ್ಶನನ ಲಿವರ್‌ ಬದಲಾವಣೆಗೆ ಕರುಳ ಕುಡಿಯನ್ನು ಬದುಕಿಸಿಕೊಳ್ಳಲು ಸ್ವತಃ ತಾಯಿಯೇ ತನ್ನ ಜೀವವನ್ನು ಒತ್ತೆಯಿಟ್ಟು ಲಿವರ್‌ ದಾನ ಮಾಡಲು ಮುಂದಾಗಿದ್ದು ಬದಲಾವಣೆಗೆ ಸುಮಾರು 15 ಲಕ್ಷ ರೂ.ವರೆಗೆ ಖರ್ಚು ತಗುಲುವುದೆಂದು ಆಸ್ಪತ್ರೆ ಮುಖ್ಯಸ್ಥರು ತಿಳಿಸಿರುವುದರಿಂದ ಆರ್ಥಿಕ ನೆರವು ಬಯಸಿ ವಿವಿಧ ಶಿಕ್ಷಣ ಸಂಸ್ಥೆಗಳನ್ನೊಳಗೊಂಡಂತೆ ರಾಜಕೀಯ ಮುಖಂಡರ ಬಳಿ
ಅಲೆದಾಡುತ್ತಿರುವುದು ನೋಡುಗರಿಗೆ ಕರಳು ಚುರ್‌ ಎನ್ನುವಂತೆ ಮಾಡಿದೆ.

ಸುದರ್ಶನನ ತಂದೆ ತಾಳಿಕೋಟೆಯ ಸೊಸೈಟಿಯೊಂದರಲ್ಲಿ ಪಿಗ್ಮಿ ಕೆಲಸ ನಿರ್ವಹಿಸುತ್ತಿದ್ದು ಬರುವ ಹಣದಲ್ಲಿಯೇ ಕುಟುಂಬ ಜೀವನ ನಿರ್ವಹಣೆಯ ಕಷ್ಟ ಸಾಧ್ಯವಾಗಿರುವ ಸಂದರ್ಭದಲ್ಲಿಯೇ ಹುಟ್ಟಿರುವ ಕರಳು ಕುಡಿ ಬದುಕಿಸಿಕೊಳ್ಳಲು ಆರ್ಥಿಕ ನೆರವನ್ನು ಕುಟುಂಬ ಬಯಸಿದೆ. ಆರ್ಥಿಕ ನೆರವು ನೀಡುವವರು ಪರಮಾನಂದ ಕಲ್ಲೂರ, ಆಶ್ರಯ ಬಡಾವಣೆ, ತಾಳಿಕೋಟೆ ಮೋ.ನಂ. 9972012394,
9743267689 ಸಂಪರ್ಕಿಸಬಹುದಾಗಿದೆ. 

Advertisement

ಅಲ್ಲದೇ ಕರ್ನಾಟಕ ಬ್ಯಾಂಕ್‌ ಅಕೌಂಟ್‌ ನಂ.7512500101116501(ಐಎಫ್‌ಎಸ್‌ಸಿ ಕೋಡ್‌ ಕೆಎಆರ್‌ಬಿ 0000751) ನೀಡಲು ಕುಟುಂಬ ಮನವಿ ಮಾಡಿದೆ.

ಮಾನವೀಯತೆ ಮೆರೆದ ಬಾರಕೇರ ದಂಪತಿ
ಮುದ್ದೇಬಿಹಾಳ:
ಲೀವರ್‌ ವೈಫಲ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ 7 ವರ್ಷದ ಬಾಲಕನಿಗೆ ಅಂಬಿಗರ ಚೌಡಯ್ಯ ಸಮಾಜದವರು ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಘಟನೆ ಇಲ್ಲಿನ ಹುಡ್ಕೊ ಹತ್ತಿರ ಇರುವ ಶಿರವಾಳ ಲೇಔಟ್‌ನಲ್ಲಿ ನಡೆದಿದೆ.

ತಾಳಿಕೋಟೆ ಪಟ್ಟಣದ ನಿವಾಸಿಗಳಾಗಿದ್ದು ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಪರಮಾನಂದ ಮತ್ತು ರೇಣುಕಾ ಕೊಲ್ಲೂರ ದಂಪತಿಗೆ ಸುದರ್ಶನ ಹೆಸರಿನ 7 ವರ್ಷದ ಒಬ್ಬನೇ ಮಗ ಇದ್ದಾನೆ. ಈತ ಕಳೆದ ಕೆಲ ತಿಂಗಳಿಂದ ಹೊಟ್ಟೆ ಉಬ್ಬುವಿಕೆ, ಮುಖ ಸೇರಿದಂತೆ ಎಲ್ಲೆಂದರಲ್ಲಿ ಬಾವು ಬರುವುದು ಆಗುತ್ತಿತ್ತು. ಎಲ್ಲೆಡೆ ತೋರಿಸಿದರೂ ಗುಣ ಕಾಣದಾದಾಗ ಬೆಂಗಳೂರಿನ ಸಿಎಂಐ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರಿಶೀಲಿಸಿದ ತಜ್ಞರು ಈತನಿಗೆ ಲೀವರ್‌ ಫೆಲ್ಯೂರ್‌ ಆಗಿದ್ದು ಲೀವರ್‌ ಟ್ರಾನ್ಸಪ್ಲಾಂಟೇಶನ್‌ ಮಾಡಬೇಕು. ಇದಕ್ಕೆ ರು.15-20 ಲಕ್ಷ ಖರ್ಚು ಬರುತ್ತದೆ ಎಂದು ತಿಳಿಸಿದ್ದಾರೆ. ಬಡತನದಲ್ಲಿ ನಿತ್ಯವೂ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡುತ್ತಿರುವ ಕುಟುಂಬಕ್ಕೆ ಇದು ಬರಸಿಡಿಲಿನಂತೆರಗಿದೆ. ತಮಗೆ ಬಂದ ಸಂಕಷ್ಟವನ್ನು ಕಂಡ ಕಂಡವರ ಎದುರು ತೋಡಿಕೊಂಡು ಮಗನನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. 

ಕೊಲ್ಲೂರು ಕುಟುಂಬದ ಸಂಕಷ್ಟ ಅರಿತ ಇಲ್ಲಿನ ಕೆಬಿಜೆಎನ್ನೆಲ್‌ ಎಂಜಿನೀಯರ್‌ ಆಗಿರುವ ಬಿ.ಎಚ್‌. ಬಾರಕೇರ ಮತ್ತು ಅವರ ಪತ್ನಿ ಘನಮಠೇಶ್ವರ ಪಬ್ಲಿಕ್‌ ಶಾಲೆ ಶಿಕ್ಷಕಿ ರೇಖಾ ಬಾರಕೇರ ಅವರು ಪರಮಾನಂದರ ಇಡಿ ಕುಟುಂಬವನ್ನು ತಮ್ಮ ಮನೆಗೆ ಕರೆಸಿಕೊಂಡು ತಕ್ಷಣಕ್ಕೆ 10,000 ರೂ. ಆರ್ಥಿಕ ನೆರವು ನೀಡಿದರು. ಇದೇ ವೇಳೆ ಅಲ್ಲಿಗೆ ಬಂದ ತಾಲೂಕು ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಮಾಜಿ ಅಧ್ಯಕ್ಷ, ಮುಖಂಡ ಚಂದ್ರಶೇಖರ ಅಂಬಿಗೇರ, ಅಖೀಲಕರ್ನಾಟಕ ಅಂಬಿಗರ ಚೌಡಯ್ಯ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಸಂಗಪ್ಪ ಪ್ಯಾಟಿ ಅವರು ಸಹಿತ ತಮ್ಮ ಕೈಲಾದ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದರು.

ಇವರ ಜೊತೆ ಇಲ್ಲಿಗೆ ಬಂದಿದ್ದ ಬಳಗಾನುರ ಕ್ರಾಸ್‌ನ ಕುವೆಂಪು ವಿದ್ಯಾಪೀಠದ ಅಧ್ಯಕ್ಷ ಬಸವರಾಜ ನಾಯ್ಕೋಡಿ ಅವರು ಪರಮಾನಂದರ ಕುಟುಂಬ ಪಡುತ್ತಿರುವ ಸಂಕಷ್ಟವನ್ನು ಮಾಧ್ಯಮದವರ ಜೊತೆ ಹಂಚಿಕೊಂಡರು.
 
ಹಲವಾರು ಪ್ರಮುಖರನ್ನು ಸಂಪರ್ಕಿಸಿ ಪರಮಾನಂದನ ಪರಿಸ್ಥಿತಿ ವಿವರಿಸಲಾಗಿದೆ. ಸುದರ್ಶನ ಲೀವರ್‌ ಟ್ರಾನ್ಸ್‌ಪ್ಲಾಂಟ್‌ ಮಾಡಲು ಆತನ ತಾಯಿ ರೇಣುಕಾ ತನ್ನ ಲೀವರ್‌ ಕೊಡಲು ಮುಂದೆ ಬಂದಿದ್ದಾರೆ. ಒಂದು ತಿಂಗಳಲ್ಲಿ ಆಪರೇಷನ್‌ ಮಾಡದಿದ್ದರೆ ಬಾಲಕನ ಜೀವಕ್ಕೆ ಅಪಾಯ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ದಾನಿಗಳು ನೆರವು ನೀಡಲು ಮುಂದಾದಲ್ಲಿ ಮಾತ್ರ ಬಾಲಕ ಸುದರ್ಶನನ್ನು ಬದುಕಿಸಿಕೊಳ್ಳಬಹುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next