Advertisement

ಹೆಸರು ನಮೂದಿಸಲು ಅಲೆದಾಟ

11:51 AM Jan 28, 2020 | Suhan S |

ಚಿಂಚೋಳಿ: ತಾಲೂಕಿನ ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರು ನೋಂದಣಿ ಮತ್ತು ಜಮೀನು ಪಹಣಿಗಳ ತಿದ್ದುಪಡಿ ಮಾಡಿಕೊಳ್ಳಲು ಸರ್ವರ್‌ ಸಮಸ್ಯೆ ಹೆಚ್ಚಾಗಿದೆ. ಇದರಿಂದ ರೈತರು ತೊಂದರೆ ಪಡುತ್ತಿದ್ದು, ಇದಕ್ಕಾಗಿ ದಿನವೀಡಿ ಕಾಯಬೇಕಾಗಿದೆ. ತಾಲೂಕಿನಲ್ಲಿ ಸರ್ಕಾರವು 24 ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿದೆ.

Advertisement

ಆದರೆ, ರೈತರು ಹೆಸರು ನೋಂದಾಯಿಸಲು ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ರೈತರು ಕಂದಾಯ, ಕೃಷಿ ಇಲಾಖೆ ಕಚೇರಿಗೆ ನಿತ್ಯ ಅಲೆದಾಡುವ ಪರಸ್ಥಿತಿ ಉಂಟಾಗಿದೆ. ರೈತರ ಪಹಣಿಯಲ್ಲಿ ಬೇರೆ ಬೆಳೆ ಇರುವುದರಿಂದ ನೋಂದಣಿ ಆಗುತ್ತಿಲ್ಲ. ಇನ್ನು ಕೆಲರೈತರ ಪಹಣಿಯಲ್ಲಿ ಯಾವುದೇ ಬೆಳೆ ನಮೂದಿಸಿಲ್ಲ ಮತ್ತು ಇನ್ನು ಕೆಲ ಪಹಣಿ ಕಾಲಂದಲ್ಲಿ ತೊಗರಿ ಎಂದು ನಮೂದಿಸಲಾಗಿದೆ. ಫುರ್ಟ್ಸ್ ಸಾಪ್ಟವೇರ್‌ನಲ್ಲಿಯೂ ತೊಗರಿ ಬೆಳೆ ಎಂದು ತೋರಿಸುತ್ತಿದೆ. ಆದರೆ ತೊಗರಿ ಮಾರಾಟ ಕೇಂದ್ರದಲ್ಲಿ ರೈತರ ಹೆಸರು ನೋಂದಣಿ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಬೆಳೆ ಸಮೀಕ್ಷೆ ಬೇರೆ ಬೆಳೆ ನಮೂದು ಮಾಡಿದ್ದಾರೆ. ಇದರಿಂದಾಗಿ ತೊಗರಿ ಖರೀದಿ ಕೇಂದ್ರದಲ್ಲಿ ನಿಮ್ಮ ಹೆಸರು ಅಪ್‌ಲೋಡ್‌ ಆಗುತ್ತಿಲ್ಲವೆಂದು ಹೇಳುತ್ತಿರುವುದರಿಂದ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟ ಮಾಡಿಕೊಳ್ಳುವ ರೈತರಿಗೆ ನಿರಾಶೆ ಮೂಡಿಸಿದೆ.

ಹೆಸರು ನೋಂದಣಿ ಮಾಡಿಕೊಳ್ಳಲು ಜ.31 ಕೊನೆಯ ದಿನವಾಗಿದೆ. ಸರ್ವರ್‌ ಸಮಸ್ಯೆಯಿಂದಾಗಿ ರೈತರು ಪಹಣಿಯಲ್ಲಿ ದೋಷ ಮತ್ತು ನೋಂದಣಿಮಾಡಿಕೊಳ್ಳುವುದಕ್ಕಾಗಿ ಅಲೆದಾಡಬೇಕಾಗಿದೆ. ತಾಲೂಕು ಕೃಷಿ ಮತ್ತು ಕಂದಾಯ ಇಲಾಖೆ ಅ ಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next