Advertisement

11.5 ಲಕ್ಷ ಬಾಡಿಗೆಕೊಡುವ ವಾಲ್ಟ್ ಡಿಸ್ನಿ ಇಂಡಿಯಾ

07:09 PM Oct 06, 2021 | Team Udayavani |

ಮುಂಬೈ: ವಾಲ್ಟ್  ಡಿಸ್ನಿ ಇಂಡಿಯಾ ಮುಂಬೈನಲ್ಲಿ ಪ್ರತಿ ತಿಂಗಳಿಗೆ 11.5 ಲಕ್ಷ ರೂ. ಬಾಡಿಗೆ ನೀಡಿ ಅಪಾರ್ಟ್‌ಮೆಂಟ್‌ ಒಂದನ್ನು ಪಡೆದುಕೊಂಡಿದೆ.

Advertisement

ಈ ಬಗ್ಗೆ ರಿಯಲ್‌ಎಸ್ಟೇಟ್‌ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ವರದಿ ಮಾಡುವ “ಝಾಪ್‌ಕೀ ಡಾಟ್‌ ಕಾಂ’ ವರದಿ ಮಾಡಿದೆ. ಸಂಸ್ಥೆಯ ಅಧ್ಯಕ್ಷ ಕೆ.ಮಾಧವನ್‌ ನಗರದ ಪಾಲಿಹಿಲ್‌ನ ಕ್ಯುಬೆಲಿಷ್ಕ್ ಎಂಬ ವೈಭವೋಪೇತ ಕಟ್ಟಡದಲ್ಲಿ 9ನೇ ಮಹಡಿಯಲ್ಲಿ ಈ ಅಪಾರ್ಟ್‌ಮೆಂಟ್‌ ಅನ್ನು ಪಡೆದುಕೊಂಡಿದ್ದಾರೆ.

ಅದು ಒಟ್ಟು 5,751 ಚದರ ಅಡಿ ಇದೆ. ಸೆ.1ರಿಂದ ಅನ್ವಯವಾಗುವಂತೆ 36 ತಿಂಗಳುಗಳಿಗೆ ಅದನ್ನು ಪಡೆದುಕೊಂಡಿದ್ದಾರೆ. ಮುಂಬೈನ ಪ್ರಸಿದ್ಧ ರೆಸ್ಟಾರೆಂಟ್‌ ಯೌಚಾದ ಮಾಲೀಕ ಕಿಶೋರ್‌ ಬಜಾಜ್‌ ಅವರಿಗೆ ಈ ಅಪಾರ್ಟ್‌ಮೆಂಟ್‌ ಸೇರಿದ್ದಾಗಿದೆ. ಒಟ್ಟು 1.38 ಕೋಟಿ ರೂ.ಮೊತ್ತವನ್ನು ಭದ್ರತಾ ಠೇವಣಿಯನ್ನಾಗಿ ಇರಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next