ಬ್ಯಾಂಬರ್ಗ್: ವಿಶ್ವದ ಅತಿ ದೊಡ್ಡ ಕಡಲ ಸಿಂಹ ಎಂಬ ಕೀರ್ತಿ ಪಡೆದುಕೊಂಡಿರುವ “ವ್ಯಾಲಿ’ ಇತ್ತೀಚೆಗೆ ನಾರ್ತಂಬರ್ಲ್ಯಾಂಡ್‌ನ ಕಡಲ ತೀರದ ಬಂಡೆಗಳ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂದಿದೆ.
ಹೀಗಾಗಿ ಸತ್ತೇ ಹೋಗಿದೆ ಎಂದು ಸುದ್ದಿಯಾಗಿದ್ದ ವ್ಯಾಲಿ ಇದೀಗ ಮತ್ತೆ ಸುದ್ದಿಯಲ್ಲಿದೆ.
ವ್ಯಾಲಿ ಈಗಾಗಲೇ ಉತ್ತರ ಅಟ್ಲಾಂಟಿಕ್ ಸಾಗರದ ಐರ್ಲ್ಯಾಂಡ್, ವೇಲ್ಸ್, ಕೋರ್ನ್ವಾಲ್, ಫ್ರಾನ್ಸ್ ಸೇರಿ ಅನೇಕ ಸ್ಥಳಗಳಲ್ಲಿ ಪತ್ತೆಯಾಗಿತ್ತು. ಈಗ ಪತ್ತೆಯಾಗಿರುವುದು ವ್ಯಾಲಿಯೇ ಎನ್ನುವುದಕ್ಕೆ ಯಾವುದೇ ಖಚಿತ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಿದ್ದರೂ, ಜನರಿಗೆ ಅದರತ್ತ ಸುಳಿಯದಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ವಾಕಿಂಗ್ ಹೋಗುತ್ತಿದ್ದಾಗ ನಟಿಗೆ ಹಲ್ಲೆ; ಮೊಬೈಲ್ ಕಿತ್ತುಕೊಂಡು ಪರಾರಿ
ಸಾಮಾನ್ಯವಾಗಿ ಕಡಲ ಸಿಂಹಗಳು ಬಂಡೆಗಳ ಮೇಲೆ ಅಥವಾ ಹಡಗು, ದೋಣಿಗಳ ಮೇಲೆ ವಿಶ್ರಾಂತಿ ಪಡೆಯುತ್ತವೆ. ಅದೇ ರೀತಿ 800 ಕೆಜಿ ತೂಕವಿರುವ ವ್ಯಾಲಿ ಕೂಡ ವಿಶ್ರಾಂತಿ ಪಡೆಯಲು ಹೋಗಿ ಎರಡು ಸಣ್ಣ ಹಡಗುಗಳನ್ನು ಮುಳುಗಿಸಿ, ಸಾಕಷ್ಟು ನಷ್ಟಕ್ಕೆ ಕಾರಣವಾಗಿತ್ತು.ಅದಕ್ಕಾಗಿ ತೇಲುವ ಸೋಫಾವೊಂದನ್ನು ಮಾಡಿಕೊಡಲಾಗಿತ್ತು.