Advertisement

ಮದುವೆ ಮನೆಯಲ್ಲಿ ಉಂಡು ಮಲಗಿದವರ ಮೇಲೆ ಕುಸಿದು ಬಿದ್ದ ಗೋಡೆ: 13 ಜನರಿಗೆ ಗಾಯ

06:55 PM Jul 26, 2022 | Team Udayavani |

ಹೊಳೆಹೊನ್ನೂರು : ಮದುವೆ ಮನೆಯಲ್ಲಿ ಉಂಡು ಮಲಗಿದ್ದ ನೆಂಟರ ಮೇಲೆ ತಡರಾತ್ರಿ ಮನೆ ಗೋಡೆ ಕುಸಿದು ಬಿದ್ದು13 ಜನ ಗಾಯಗೊಂಡ ನಡೆದ ಘಟನೆ ನಡೆದಿದೆ.

Advertisement

ಅರಹತೊಳಲಿನ ಗಣೇಶ್ ಎಂಬುವವರ ವಿವಾಹವಾಗಿ ನಾಲ್ಕೈದು ದಿನ ಕಳೆದಿದೆ. ಸೋಮವಾರ ಮನೆಯಲ್ಲಿ ನೆಂಟರು ಊಟ ಮಾಡಿ ಮಲಗಿದ ವೇಳೆ ತಡರಾತ್ರಿ ಮನೆಯ ಗೋಡೆ ಕುಸಿತವಾಗಿದೆ. ಮನೆಯ ಗೋಡೆ ಕುಸಿದ ಕಾರಣ ಮೇಲ್ಚಾವಣಿಯು ಕಳಚಿ ಬಿದ್ದಿದೆ.

ಮನೆಯಲ್ಲಿ ಮಲಗಿದ್ದ 13 ಜನ ನೆಂಟರಿಟ್ಟರ ಮೇಲೆ ಗೋಡೆ ಹಾಗೂ ಚಾವಣಿಯ ಅವಶೇಷಗಳು ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ.

ಮಧುಮಗ ಗಣೇಶ್ ಹಾಗೂ ಆತನ ಅಕ್ಕನ ಮಗನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ಹೊಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್‌ನಾಯ್ಕ್, ಭದ್ರಾವತಿ ತಹಸೀಲ್ದಾರ್ ಪ್ರದೀಪ್ ಮುಖಂಡರಾದ ರಾಜೇಶ್ ಪಾಟೀಲ್, ರಂಗನಾಥ್ ಇತರರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next