Advertisement

ಬೆಳಗಾವಿ ಭಾರೀ ದುರಂತ : ಮನೆಯಲ್ಲಿದ್ದ 7 ಮಂದಿ ಪ್ರಾಣ ಬಿಟ್ಟರು : ಬದುಕುಳಿದ ಅಪ್ಪ-ಮಗ

08:46 AM Oct 07, 2021 | Team Udayavani |

ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿಯಲ್ಲಿ ಗೋಡೆ ಕುಸಿದ ದುರಂತದಲ್ಲಿ ಏಳು ಜನ ಸಾವಿಗೀಡಾಗಿದ್ದು, ಅಪ್ಪ- ಮಗ ಬದುಕುಳಿದಿದ್ದಾರೆ.

Advertisement

ಹೊಲದಲ್ಲಿ ಕೆಲಸ ಮುಗಿಸಿಕೊಂಡು ಬಂದಿದ್ದ ಮನೆ ಯಜಮಾನ ಭೀಮಪ್ಪ ಖನಗಾಂವಿ ಗ್ರಾಮದಲ್ಲಿ ತಿರುಗಾಡಲು ಹೋಗಿದ್ದರು. ದುರಂತ ಸಂಭವಿಸುವ ಕೆಲ ಹೊತ್ತು ಮುಂಚೆಯೇ ಭೀಮಪ್ಪ ಮನೆಯಿಂದ ತೆರಳಿದ್ದರು. ಅಷ್ಟೊತ್ತಿಗಾಗಲೇ ಈ ಗೋಡೆ ಕುಸಿದು ಬಿದ್ದಿದೆ. ಸಾವಿನಿಂದ ಬಚಾವ್ ಆಗಿದ್ದಾರೆ.

ಭೀಮಪ್ಪನ ಮಗ ದೇವರಾಜ ಬೆಳಗಾವಿಗೆ ಕಾಲೇಜಿಗೆ ಹೋಗಿದ್ದನು. ದುರಂತ ಸಂಭವಿಸಿದ ಬಳಿಕ ಮನೆಗೆ ಬಂದಿದ್ದಾನೆ.  ಅಪ್ಪ-ಮಗ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಈ ಕುಟುಂಬದಲ್ಲಿ ಈಗ ಇಬ್ಬರೇ ಬದುಕುಳಿದಿದ್ದಾರೆ.

ಆಟ ಆಡಲು ಹೋಗಿ ಪ್ರಾಣ ಬಿಟ್ಟ ಬಾಲಕಿ:  ಖನಗಾಂವಿ ಕುಟುಂಬದ ಪಕ್ಕದಲ್ಲಿಯೇ ವಿಠ್ಠಲ ಕೊಳೆಪ್ಪನವರ ಕುಟುಂಬ ಇದೆ. ಇವರ ಮಗಳು ಕಾಶವ್ವ(8) ಹಾಗೂ ಅರ್ಜುನ ಖನಗಾಂವಿಯ ಮಗಳು ಪೂಜಾ(8) ಕ್ಲಾಸ್‌ ಮೇಟ್. ಹೀಗಾಗಿ ಇವರಿಬ್ಬರೂ ಆಗಾಗ ಕೂಡಿ ಆಡುತ್ತಿದ್ದರು. ಬುಧವಾರ ಸಂಜೆ ಕಾಶವ್ವ ಇವರ ಮನೆಗೆ ಹೋಗಿದ್ದಾಳೆ. ಆಟ ಆಡಿ ಹೊರ ಬಂದು ಗೋಡೆ ನೋಡುತ್ತಿದ್ದಾಗ ಈ ದುರಂತ ಸಂಭವಿಸಿ ಬಾಲಕಿ ಕಾಶವ್ವ ಹಾಗೂ ಪೂಜಾ ಅಸುನೀಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next