Advertisement

ಧಾರವಾಡ : ಗೋಡೆ ಕುಸಿದು ಗರ್ಭಿಣಿ,ಸಹೋದರಿ ಬಲಿ

12:39 PM Aug 23, 2018 | Team Udayavani |

 ಧಾರವಾಡ: ತಾಲೂಕಿನ ಅಳ್ನಾವರ ದಲ್ಲಿ ಗೋಡೆ ಕುಸಿದು ಮನೆಯಲ್ಲಿ ಮಲಗಿದ್ದ ತುಂಬು ಗರ್ಭಿಣಿ ಸೇರಿ ಇಬ್ಬರು ಸಹೋದರಿಯರು ದಾರುಣವಾಗಿ ಸಾವನ್ನಪ್ಪಿರುವ ಅವಘಡ ಬುಧವಾರ ತಡರಾತ್ರಿ ನಡೆದಿದೆ. 

Advertisement

ವರದಿಯಾದಂತೆ ಪ್ರಕಾಶ್‌ ಸರೋಜಿ ಎನ್ನುವವರ ಮಕ್ಕಳಾದ ಗರ್ಭಿಣಿ ಶಶಿಕಲಾ (20)ಮತ್ತು ಮುಕ್ತಾ  (18) ಮೃತ ಪಟ್ಟಿದ್ದಾರೆ. 

ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ,ಜಿಲ್ಲಾಸ್ಪತ್ರೆಗೆ ದಾಖಲಾದ ಬಳಿಕ ಮುಕ್ತಾ ಕೊನೆಯುಸಿರೆಳೆದಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next