Advertisement

 ‘ಮನೆ ಮನೆಗೆ ಕಾಂಗ್ರೆಸ್‌ ನಡಿಗೆ’

04:28 PM Oct 02, 2017 | Team Udayavani |

ನಿಡ್ಪಳ್ಳಿ: ಸರಕಾರದ ಸಾಧನೆ ಬಗ್ಗೆ ಜನರಿಗೆ ಅರಿವು ನೀಡಲು ‘ಮನೆ ಮನೆಗೆ ಕಾಂಗ್ರೆಸ್‌ ನಡಿಗೆ’ ಕಾರ್ಯಕ್ರಮದ ಅಂಗವಾಗಿ ನನ್ನ ಅನುದಾನದಲ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಗೆ ಬಂದಿದ್ದೇನೆ. ಪಕ್ಷ ಭೇದ ಮಾಡದೆ ಅಭಿವೃದ್ಧಿಗೆ ಆದ್ಯತೆ ನೀಡುವುದೇ ಗ್ರಾಮ ಭೇಟಿಯ ಉದ್ದೇಶ. ಪ್ರತಿ ದಿನ ಬೇರೆ ಬೇರೆ ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಪುತ್ತೂರು ಶಾಸಕಿ, ಸರಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು.

Advertisement

ಶಿಲಾನ್ಯಾಸ
ಪಾಣಾಜೆ ಗ್ರಾಮಕ್ಕೆ ಈಚೆಗೆ ಭೇಟಿ ನೀಡಿದ ಅವರು, ಸಂಜೆಯವರೆಗೂ  ಗ್ರಾಮದಲ್ಲಿದ್ದ ಅವರು, ಹಲವು ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದರು. ಗ್ರಾಮದ ಪಿಲಾವೂರು, ನೀರಮೂಲೆ, ಸೂರಂಬೈಲು, ಭರಣ್ಯ, ಸುಡ್ಕುಳಿ, ಆರ್ಲಪದವು ಶಾಲೆ ಬಳಿ, ನಡುಕಟ್ಟ, ಬೇರಿಕೆ, ಕೀಲಂಪಾಡಿ, ಕಲ್ಲಪದವು, ಬೊಳ್ಳಿಂಬಳ, ಗುರಿಕೇಲು, ಅಂಗಡಿಮಜಲು ಪ್ರದೇಶಗಳಿಗೆ ಭೇಟಿ ನೀಡಿ, ರಸ್ತೆ ಕಾಂಕ್ರೀಟೀಕರಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಕೆದಂಬಾಡಿ  ಭರಣ್ಯ ನಡುಕಟ್ಟ ಕೊಳವೆ ಬಾವಿ ಪೈಪ್‌ ಲೈನ್‌ ಉದ್ಘಾಟನೆ ಮತ್ತು ನೀರಿನ ಟ್ಯಾಂಕ್‌ ರಚನೆಗೆ ಶಂಕುಸ್ಥಾಪನೆ ಮಾಡಿ ಶುಭ ಹಾರೈಸಿದರು.

ಸಮಾಲೋಚನೆ
ಗ್ರಾಮದ ಅಲ್ಲಲ್ಲಿ ಶಾಸಕರನ್ನು ಪಕ್ಷದ ಮುಖಂಡರು ಸ್ವಾಗತಿಸಿದರು. ಅಭಿವೃದ್ಧಿ ಕೆಲಸಗಳ ಬಗ್ಗೆ ಸಮಾಲೋಚನೆ ನಡೆಸಿದರು. ಮನವಿಗಳನ್ನು ಸ್ವೀಕರಿಸಿದ ಶಾಸಕರು, ಸ್ಪಂದಿಸುವ ಭರವಸೆ ನೀಡಿದರು.

ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಹಾಜಿ ಬಡಗನ್ನೂರು, ಅಮಲ ರಾಮಚಂದ್ರ, ಕೆಡಿಪಿ ಸದಸ್ಯ ಕೃಷ್ಣಪ್ರಸಾದ ಆಳ್ವ, ಪುಷ್ಪ ರಾಜ್‌ ಶೆಟ್ಟಿ ಕೋಟೆ, ಯತೀಶ್‌ ರೈ ಪಡ್ಯಂಬೆಟ್ಟು, ಶಿವಾನಂದ ಮಣಿ ಯಾಣಿ ನಡುಕಟ್ಟ, ರೋಶನ್‌ ರೈ ಬನ್ನೂರು, ನಾಗರಾಜ್‌ ಘಾಟೆ, ಚಂದ್ರ ಶೇಖರ ರೈ, ಜಯರಾಮ ಭಟ್‌ ಘಾಟೆ, ಈಶ್ವರ ಭಟ್‌ ಕಡಂದೇಲು, ಪಾಣಾಜೆ ವಲಯ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಗ್ರಾ.ಪಂ. ಸದಸ್ಯರಾದ ಜಗನ್ಮೋಹನ ರೈ ಕೆದಂಬಾಡಿ, ಮೈಮುನಾತುಲ್‌ ಮೆಹ್ರಾ, ಎ.ಕೆ. ಮಹಮ್ಮದ್‌, ಗ್ರಾಮ ಪಂಚಾಯತ್‌ ಮಾಜಿ ಸದಸ್ಯರಾದ ಉಮ್ಮರ್‌ ಜನಪ್ರಿಯ, ಮಾಧವ ಮಣಿಯಾಣಿ, ಎಸ್‌.ಅಬೂಬಕ್ಕರ್‌ ಆರ್ಲಪದವು, ರಫೀಕ್‌ ಕಂಚಿಲ್ಕುಂಜ, ಜಯರಾಮ ಆಳ್ವ ಸೂರಂಬೈಲು, ಮಹಾಬಲೇಶ್ವರ ಭಟ್‌ ಗಿಳಿಯಾಲು, ಸದಾಶಿವ ರೈ ಸೂರಂಬೈಲು, ಅಬ್ದುಲ್‌ ರಹಿಮಾನ್‌, ಕೆ.ಎ. ಅಲಿ, ನಾರಾಯಣ ನಾಯಕ್‌ ಅಪಿನಿಮೂಲೆ, ಜಯಶ್ರೀ, ಮಂಜಪ್ಪ ಪೂಜಾರಿ, ಕೊರಗಪ್ಪ ಪೂಜಾರಿ, ಪ್ರವೀಣ ರೈ ಸೂರಂಬೈಲು, ಚನಿಯ ನಾಯ್ಕ, ನಾರಾಯಣ ನಾಯ್ಕ, ಮೋಹನ ನಾಯ್ಕ, ಅಬ್ದುಲ್‌ ಕಡಮಾಜೆ, ಮಹಮ್ಮದ್‌ ಕುಂಞ ಕಂಚಿಲ್ಕುಂಜ, ಅನಂತರಾಮ ರೈ ಕೆದಂಬಾಡಿ, ಹರಿಪ್ರಸಾದ್‌ ಕೊಂದಲಡ್ಕ, ರಾಮ ನಾಯ್ಕ ಕೋಟೆ, ಮಂಜುನಾಥ ನಾಯ್ಕ ಕೊಂದಲಡ್ಕ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next