Advertisement
ಜಿಲ್ಲಾ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಇಂಜಿನಿಯರ್ ಡೇ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ದಿಚುಂಚನಗಿರಿ ವಿ.ವಿ.ಕುಲಸಚಿವ ಡಾ|ಸುಬ್ರಾಯ, ವಿಶ್ವಕಂಡ ಬಹುಮುಖ ಪ್ರತಿಭೆ ಸರ್.ಎಂ.ವಿ. ಶಿಸ್ತು, ಪ್ರಾಮಾಣಿಕತೆ, ದಕ್ಷತೆ, ತಾಂತ್ರಿಕ ನೈಪುಣ್ಯತೆ, ದೂರದೃಷ್ಟಿ, ಮಾನವೀಯತೆ, ಇವೆಲ್ಲ ಓರ್ವ ವ್ಯಕ್ತಿಯಲ್ಲಿ ಮೇಳೈಸಿರುವುದು ಅಪರೂಪ. ಒಪೊ³ತ್ತಿನ ಊಟಮಾಡಿ, ಬೀದಿ ದೀಪದಡಿ ಓದಿ, ಸಂಕಷ್ಟಗಳನ್ನೆಲ್ಲಾ ಅನುಭವಿಸಿ ಮೂಡಿಬಂದ ಅವರದು ಸಾಧನೆಯ ಬದುಕು ನಿಷ್ಕಂಳಕ ವ್ಯಕ್ತಿತ್ವ ಎಂದರು.
ಔದ್ಯೋಗೀಕರಣಗೊಳ್ಳದಿದ್ದರೆ ದೇಶ ವಿನಾಶದತ್ತ ಸಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಸರ್.ಎಂ.ವಿ. ಮಹಾತ್ಮಾ ಗಾಂಧೀಜಿ ಅವರೊಂದಿಗೆ ಸುಮಧುರ ಬಾಂಧವ್ಯ ಹೊಂದಿದ್ದರು. ಅನೇಕ ಹೊಸ ಆವಿಷ್ಕಾರಗಳಿಗೆ ಕಾರಣರಾಗಿದ್ದರು. ಅಣೆಕಟ್ಟೆಗೆ ಸ್ವಯಂಚಾಲಿತ ಗೇಟ್ ಗಳನ್ನು ಅಳವಡಿಸಿದಷ್ಟೇ ಅಲ್ಲದೆ ಈ ತಂತ್ರಜ್ಞಾನಕ್ಕಾಗಿ ಪೇಟೆಂಟ್ ಪಡೆದಿದ್ದವರೆಂದು ಡಾ| ಸುಬ್ರಾಯ ವಿವರಿಸಿದರು. ಸಂಘದ ಅಧ್ಯಕ್ಷ ಎಂ.ಎಸ್.ಮಹೇಶ್ ಅಭಿನಂದನಾ ಭಾಷಣ ಮಾಡಿದರು.
ಇಂಜಿನಿಯರ್ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಾದ ವಿದ್ಯಾಶ್ರೀ, ಡಾ|ನಿಖೀಲ್ ಎನ್.ಕಶ್ಯಪ್ ಮತ್ತು ಚಿರಾಗ್ ಎಂ.ಅರಸು ಅವರನ್ನು ಪುರಸ್ಕರಿಸಿ ಮಾತನಾಡಿದ ನಗರಸಭಾ ಆಯುಕ್ತೆ ಎಂ.ವಿ.ತುಷಾರಮಣಿ, ಮಹಿಳೆಯರು ಸರ್.ಎಂ.ವಿ. ಅವರಿಗೆ ಕೃತಜ್ಞರಾಗಿರಬೇಕು. ನಿತ್ಯೋಪಯೋಗಿ ಉಪಕರಣಗಳ ಆವಿಷ್ಕಾರದಿಂದಲೇ ಮಹಿಳೆಯರಿಗೆ ಮನೆಕೆಲಸದ ಜೊತೆಗೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಅವರ ಮಾಂತ್ರಿಕತೆ ಶಕ್ತಿ ಸಾಮರ್ಥ್ಯಗಳು ಆದರ್ಶವಾಗಬೇಕು ಎಂದರು.
ಜಿಲ್ಲಾ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಹರೀಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಸರ್.ಎಂ.ವಿ. ಹೆಸರಿನಲ್ಲಿ ಯಾವುದೇ ರಸ್ತೆ, ವೃತ್ತ, ಬಡಾವಣೆಗಳಿಲ್ಲ. ಆಜಾದ್ ಪಾರ್ಕ್‌ನಿಂದ ಕೋಟೆಕೆರೆಯವರೆಗಿನ ರಸ್ತೆಗೆ ಅವರ ಹೆಸರಿಡಬೇಕೆಂದರು. ಸಿಡಿಎ ಆಯುಕ್ತ ಟಿ.ಆರ್.ಭೀಮಾನಿಧಿ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಎನ್.ಎಸ್.ನಾಗೇಂದ್ರ ಮತ್ತು ಜಿ.ರಮೇಶ್ ಕಾರ್ಯಕ್ರಮ ನಿರೂಪಿಸಿದರು.