Advertisement

ಸರ್ವ ಶೇಷ್ಠ ಇಂಜಿನಿಯರ್‌ ವಿಶ್ವೇಶ್ವರಯ್ಯ

05:01 PM Sep 16, 2017 | |

ನಾರಾಯಣಪುರ: ಭಾರತ ರತ್ನ ಪುರಸ್ಕೃತ ಸರ್‌.ಎಂ. ವಿಶ್ವೇಶ್ವರಯ್ಯನವರು ದೇಶ ಕಂಡ ಸರ್ವ ಶೇಷ್ಠ ಇಂಜಿನಿಯರ್‌ ಎಂದು ಮುಖ್ಯ ಇಂಜಿನಿಯರ್‌ ಎಚ್‌.ಕೆ. ಕೃಷ್ಣೆಗೌಡ ಬಣ್ಣಿಸಿದರು.

Advertisement

ಇಲ್ಲಿನ ಮನೊರಂಜನಾ ಕೇಂದ್ರದ ಡೇಟಾ ಸೆಂಟರನಲ್ಲಿ ಶುಕ್ರವಾರ ಕೃಷ್ಣಾ ಭಾಗ್ಯ ಜಲ ನಿಗಮದ ವಲಯ ಕಚೇರಿ ವತಿಯಿಂದ ನಡೆದ ಇಂಜಿನಿಯರ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾನ್‌ ವ್ಯಕ್ತಿತ್ವವನ್ನು ಹೊಂದಿದ್ದ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸುತ್ತಿರುವುದು ಎಲ್ಲಾ ಇಂಜಿನಿಯರಗಳು ಹೆಮ್ಮೆ ಪಡುವಂತ ವಿಷಯವಾಗಿದೆ ಎಂದು ಹೇಳಿದ ಅವರು, ವಿಶ್ವೇಶ್ವರಯ್ಯನವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಫಲದಿಂದ ಅವರ ಅವಧಿಯಲ್ಲಿ ಕೈಗೊಳ್ಳಲಾದ ಹತ್ತು ಹಲವು ಯೋಜನೆಗಳು ಯಶಸ್ವಿಯಾಗುವುದರ ಜತೆಗೆ ಪ್ರಸ್ತುತವೂ ಜನಾನುರಾಗಿ ಉಳಿಯಲು ಸಾಧ್ಯವಾಗಿದೆ.

ಸ್ವಾತಂತ್ರ್ಯ ಪೂರ್ವ ಮೈಸೂರು ರಾಜ್ಯದ ದಿವಾನರಾದ ಸಂದರ್ಭದಲ್ಲಿ ಅವರ ನಡೆಸಿದಂತ ಆಡಳಿತ ಹಾಗೂ ಕಾರ್ಯವೈಖರಿ ಅತ್ಯಂತ ಸ್ಮರಣೀಯವಾದದ್ದು, ಇದರಿಂದಲೇ ಇಡೀ ದೇಶದಲ್ಲೇ ರಾಜ್ಯವನ್ನು ಮಾದರಿ ರಾಜ್ಯವಾಗಿ ರೂಪಿಸಿರುವ ಕೀರ್ತಿ ಸರ್‌.ಎಂ.ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ವಲಯದ ಅಡಿಯಲ್ಲಿ ಬರುವ ಹಿರಿಯ ಇಂಜಿನಿಯರಗಳು ಸರ್‌.ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಹೂವು ಮಾಲೆ ಹಾಕಿ ಗೌರವ ನಮನ ಸಲ್ಲಿಸಿದರು.

Advertisement

ಈ ವೇಳೆ ಅಧೀಕ್ಷಕ ಅಭಿಯಂತ ವೀರಣ್ಣ ನಗರೂರ, ಕಾರ್ಯನಿರ್ವಾಹ ಅಭಿಯಂತರಗಳಾದ ಸುರೇಂದ್ರಬಾಬು, ಗಂಗಾಧರ ಬಡಿಗೇರ, ಶ್ರೀನಾಥ, ಆರ್‌.ಎಲ್‌. ಹಳ್ಳೂರ, ಟಿ.ಎನ್‌. ರಾಮಚಂದ್ರ, ಭಜಂತ್ರಿ, ಬಿಜ್ಜೊರ, ಪ್ರಕಾಶ ಪಾತ್ರದ ಸೇರಿದಂತೆ ಕೃಭಾಜನಿನಿ ವಲಯ, ವೃತ್ತ, ವಿಭಾಗ, ಉಪವಿಭಾಗ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next