Advertisement

ನಗರಕ್ಕೆ ಪ್ರೇರಣೆಯಾಗಲಿ ವಾಕಿಂಗ್‌ ,ಸೈಕ್ಲಿಂಗ್‌ ಫಂಡ್ಸ್ ಅಭಿಯಾನ

10:39 PM Jul 13, 2019 | Sriram |

ನಗರವನ್ನು ಉತ್ತಮಗೊಳಿಸುವಲ್ಲಿ ನಾವು ಅನೇಕ ವಿನ್ಯಾಸಗಳ, ಪರ್ಯಾಯ ಮಾರ್ಗಗಳ ಹೊಳಹುಗಳನ್ನು ಕೇಳಿದ್ದೇವೆ ಆದರೆ ನಗರವಾಸಿಗಳೆಲ್ಲಾ ಸೇರಿ ಒಂದು ಉತ್ತಮ ನಗರದ ಯೋಜನೆಗೆ ಸ್ವತಃ ತಾವೇ ವಿಶೇಷ ಮುತುವರ್ಜಿ ವಹಿಸಿ ಅಭಿಯಾನವನ್ನು ಕೈಗೊಂಡ ಬಗೆ ಕೇಳಿದ್ದೀರಾ..ಇಲ್ಲ ತಾನೆ. ಹೌದು, ಎಲ್ಲಾ ಸೌಕರ್ಯಗಳಿರುವ ಒಂದು ಉತ್ತಮ ನಗರಕ್ಕಾಗಿ ಆ ಕ್ಷೇತ್ರದ ಮೇಯರ್‌, ಶಾಸಕರು ಕ್ಷೇತ್ರದ ಆರ್ಥಿಕ ಪರಿಸ್ಥಿತಿಯ ಹೊರತಾಗಿ ಒಂದು ಅಭಿಯಾನದ ಮೂಲಕ ಮಾದರಿ ನಗರವನ್ನಾಗಿಸುವ ಕಾರ್ಯ ಯೋಜನೆ ಅನುಕರಣೀಯ.

Advertisement

ವಾಕಿಂಗ್‌ ಆ್ಯಂಡ್‌ ಸೈಕ್ಲಿಂಗ್‌ ಫ‌ಂಡ್ಸ್‌
ಅಮೆರಿಕಾದ ಚಿಕಾಗೋ ನಗರದ ಕ್ಷೇತ್ರದ ಸೌಕರ್ಯಗಳನ್ನು ಬಲಪಡಿಸುವಲ್ಲಿ ಮತ್ತು ಇನ್ನಷ್ಟು ಮೆರುಗನ್ನು ತಂದೊದಗಿಸುವಲ್ಲಿ ಯೋಜನೆಗಳ ವಿಸ್ತರಣೆಗೆ ಸೈಕ್ಲಿಂಗ್‌ ಅಥವಾ ಬೈಕಿಂಗ್‌ ಮೂಲಕ ಅನುದಾನವನ್ನು ಆಶ್ರಯಿಸಿ ಹೋಗುತ್ತಾರೆ. ಈ ಅಭಿಯಾನವನ್ನು ನಗರ ಕಾಳಜಿ ಹೊಂದಿರುವ ಜನರ ಒಟ್ಟುಗೂಡುವಿಕೆಯಾಗಿದೆ. ಕ್ಷೇತ್ರದಲ್ಲಿ ಧನಸಹಾಯಕ್ಕಾಗಿ ಸೈಕ್ಲಿಂಗ್‌ ಅಥವಾ ಬೈಕಿಂಗ್‌ ಮುಖೇನ ಕ್ಷೇತ್ರವಿಡೀ ಸಂಚರಿಸುತ್ತಾರೆ. ನಗರಕ್ಕೆ ಬೇಕಾಗಿರುವ ಬೀದಿದೀಪಗಳು, ಪಾದಚಾರಿ ರಸ್ತೆಗಳು, ರಸ್ತೆ ರಿಪೇರಿ ಕೆಲಸಗಳಿಗಾಗಿ ಇಲ್ಲಿನ ನಗಾರಾಭಿವೃದ್ಧಿ ಅಧಿಕಾರಿಗಳು ಮತ್ತು ಜನರು ಜತೆಗೂಡಿ ಒಂದು ಸುಂದರ ನಗರಕ್ಕಾಗಿ ಪ್ರಯತ್ನಿಸುತ್ತಿವೆ. ಇದಲ್ಲದೆ ನಗರದ ಜನರ ವಿಶ್ವಾಸವನ್ನು ತೆಗೆದುಕೊಂಡು ನಗರಕ್ಕಾಗಿ ಪೆಟ್ರೋಲ್‌, ಗ್ಯಾಸ್‌ ಮುಂತಾದವುಗಳಿಗೆ ತೆರಿಗೆಯನ್ನು ಹೆಚ್ಚಿಸಿ ವಾರ್ಷಿಕ 50 ಬಿಲಿಯನ್‌ವರೆಗೆ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಇದನ್ನು ಅಗತ್ಯ ಕ್ಷೇತ್ರಗಳಿಗೆ ಕೊಟ್ಟು ಆ ಕ್ಷೇತ್ರವನ್ನು ಸೌಕರ್ಯಪೂರ್ಣವಾಗಿ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ನಗರವನ್ನು ಶಾಸಕರು , ಮೇಯರ್‌ಗಳು ಜನರ ಜತೆಗೂಡಿ ಇಂತಹ ಕಾರ್ಯಗಳಿಗೆ ತೆರಿಗೆ ಹೆಚ್ಚಿಸಿದರೂ ವಿರೋಧವನ್ನು ವ್ಯಕ್ತಪಡಿಸದೆ ಕೈ ಜೋಡಿಸುವುದರಿಂದ ನಗರದ ಜನರು ಮುಕ್ತ ಮನಸ್ಸಿನಿಂದ ಪ್ರೋತ್ಸಾಹಿಸುತ್ತಾರೆ ಎನ್ನುವುದಕ್ಕೇ ಈ ಯೋಜನೆಯ ಫ‌‌ಲ ಕಂಡಿರುವ ಚಿಕಾಗೋ ನಗರದ ಉದಾಹರಣೆಯೇ ಸಾಕ್ಷಿ .

ಮಂಗಳೂರು ಪ್ರಭಾವಿತವಾಗಲಿ
ನಮ್ಮ ನಗರದ ಸ್ವತ್ಛತೆಗೆ ಶ್ರಮಿಸುವ ಸೇವಾ ಸಂಸ್ಥೆಗಳನ್ನು ನಾವು ಕಂಡಿದ್ದೇವೆ. ಇಂತಹ ಸಂಸ್ಥೆಗಳು ಮತ್ತು ಈ ರೀತಿಯ ನಗರವನ್ನು ಅತ್ಯುತ್ತಮವಾಗಿ ರೂಪಿಸುವ ಸಮಾನ ಮನಸ್ಕರನ್ನು ಸೇರಿಸಿ ಇಲ್ಲಿನ ನಗರಾಭಿವೃದ್ಧಿ ಆಡಳಿತದವರ ಸಹಕಾರ ಪಡೆದು ನಗರಾಭಿವೃದ್ಧಿಗೆ ಶ್ರಮಿಸುವ ಕಲ್ಪನೆಗೆ ಸಾಥ್‌ ನೀಡಿದರೆ ಮೊದಲಿಗೆ ಸ್ವಲ್ಪ ಕಷ್ಟವಾದರೂ ಕೊನೆಗೆ ಈ ಯೋಜನೆಯ ಮೂಲಕ ನಗರವನ್ನು ಅಭಿವೃದ್ಧಿಶೀಲವಾಗಿಮಾಡಬಹುದು.

– ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next