Advertisement
ವಾರ್ಡಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಕಡತಗಳ ಸಮಸ್ಯೆ, ಪೆಂಡಿಂಗ್ ವರ್ಕ್ ಸೇರಿ ಯಾವುದೇ ಸಮಸ್ಯೆಯಿದ್ದರೂ ಪೌರಾಯುಕ್ತರು ನೇರವಾಗಿಯೇ ನೌಕರರಿಗೆ ವಾಕಿ-ಟಾಕಿಯಲ್ಲಿ ಮಾಹಿತಿ ಪಡೆಯಬಹುದು. ಸಮಸ್ಯೆ ಇತ್ಯರ್ಥಕ್ಕೆ ಇದೊಂದು ಸುಲಲಿತ ಮಾರ್ಗವಾಗಿದೆ. ನಗರಸಭೆ ಆಡಳಿತ ಯಂತ್ರ ಚುರುಕುಗೊಳಿಸಲು, ಜನರಿಗೆ ಸಕಾಲಕ್ಕೆ ಸಮಸ್ಯೆ ನಿವಾರಣೆಗೆ ಮುಂದಾಗಲು ಪೌರಾಯುಕ್ತ ಮಂಜುನಾಥ ಅವರು ಹೊಸದೊಂದು ಪ್ರಯತ್ನಕ್ಕೆ ಮುಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.
Related Articles
Advertisement
ಕೊಪ್ಪಳ ನಗರಸಭೆಯ ಪ್ರಮುಖ 40 ನೌಕರರಿಗೆ ವಾಕಿ-ಟಾಕಿ ವಿತರಣೆ ಮಾಡಲಾಗಿದೆ. ಇಲ್ಲಿ ಪೌರಾಯುಕ್ತರು ಕಚೇರಿಯಲ್ಲಿಯೇ ಕುಳಿತು ಯಾವುದೇ ಕಡತದ ವಿಷಯಕ್ಕೆ ಸಂಬಂ ಧಿಸಿದಂತೆ ವಾಕಿಯಲ್ಲಿ ನೇರವಾಗಿ ತಮ್ಮ ಸಿಬ್ಬಂದಿಯಿಂದ ಮಾಹಿತಿ ಪಡೆಯಲು ನೆರವಾಗಲಿದೆ. ಇನ್ನೂ ಕುಡಿಯುವ ನೀರಿನ μಲ್ಟರ್ ಇರುವ ಸ್ಥಳದಲ್ಲಿ, ಕಾತರಕಿ ಬಳಿಯ ಜಾಕ್‌ವೆಲ್ ಪಾಯಿಂಟ್‌ನಲ್ಲಿ, ಕಸ ವಿಲೇವಾರಿ ಘಟಕ, ಮುನಿರಾಬಾದ್ ಪಾಯಿಂಟ್‌ನಲ್ಲಿ ವಾಕಿ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾದರೆ ತಕ್ಷಣವೇ ವಾಕಿ ಮೂಲಕ ಅಲ್ಲಿನ ಸಿಬ್ಬಂದಿಗೆ ಮಾಹಿತಿ ತಿಳಿಸಿ, ಯಾವ ಸಮಸ್ಯೆ ಇದೆ. ಅದಕ್ಕೆ ಪರಿಹಾರವೇನು ಎನ್ನುವುದನ್ನು ಕಂಡುಕೊಳ್ಳಲು ಈ ವಾಕಿ ನೆರವಾಗಲಿದೆ.
ನಗರದ ಯಾವುದೇ ವಾರ್ಡ್‌ನಲ್ಲಿ ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಚರಂಡಿ ಸ್ವತ್ಛಗೊಳಿಸುವುದು, ಕಸದ ಸಮಸ್ಯೆಯ ಕುರಿತು ಆ ವಾರ್ಡಿನ ಜನತೆ ನಗರಸಭೆ ಅಧಿ ಕಾರಿಗಳ ಗಮನಕ್ಕೆ ತಂದರೆ ತಕ್ಷಣವೇ ಆಯಾ ವಾರ್ಡಿನ ಮೇಲುಸ್ತುವಾರಿಗೆ ವಾಕಿ ಮೂಲಕ ಸಮಸ್ಯೆ ಗಮನಕ್ಕೆ ತಂದು ತಕ್ಷಣವೇ ಪರಿಹಾರ ಮಾಡಲಿದ್ದಾರೆ. ಈ ವಾಕಿ-ಟಾಕಿಯು ಕನಿಷ್ಠ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಪರ್ಕ ಸಾ ಧಿಸಲಿದೆ. ಇಲ್ಲಿ ಯಾವುದೇ ಅಧಿಕಾರಿಗಳು ಸುಳ್ಳು ಹೇಳುವಂತಿಲ್ಲ. ಕಾರಣವನ್ನೂ ಹೇಳುವಂತಿಲ್ಲ.
ದತ್ತು ಕಮ್ಮಾರ