Advertisement

ಸ್ಪರ್ಶ್‌ ಆಸ್ಪತ್ರೆಯಿಂದ ಅಂಗಾಂಗ ದಾನ ಉತ್ತೇಜಿಸಲು ವಾಕಥಾನ್‌

04:32 PM Aug 16, 2022 | Team Udayavani |

ಬೆಂಗಳೂರು: ಜನರಲ್ಲಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸ್ಪರ್ಶ್‌ ಅಸ್ಪತ್ರೆ 5 ಸಾವಿರ ಮೀಟರ್‌ (5K) ವಾಕಥಾನ್‌ ಆಯೋಜಿಸಿದೆ. ರಾಜರಾಜೇಶ್ವರಿ ನಗರದ ಸ್ಪರ್ಶ್‌ ಆಸ್ಪತ್ರೆ ಬಳಿಕ ಜಾಗೃತಿ ನಡಿಗೆಗೆ ಹಸಿರು ನಿಶಾನೆ ನೀಡಲಾಯಿತು. ಉತ್ತಮ ಉದ್ದೇಶಕ್ಕಾಗಿ ನಡೆಯುವ ಈ ನಡಿಗೆಗೆ ಬೆಂಬಲ ಸೂಚಿಸಿ 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Advertisement

ವಾಕಥಾನ್‌ಗೆ ರಾಜರಾಜೇಶ್ವರಿ ನಗರದ ಶಾಸಕ ಹಾಗೂ ತೋಟಗಾರಿಕಾ ಸಚಿವ ಮುನಿರತ್ನ ಅವರು ಚಾಲನೆ ನೀಡಿದ್ದರು. ಭಾರತದಲ್ಲಿ ಪ್ರತಿ ವರ್ಷ ಅಂಗಾಂಗ ಕಸಿಗಾಗಿ ಕಾಯುತ್ತಿರುವ 5,00,00 ಲಕ್ಷ ಮಂದಿ ದಾನಿಗಳು ಸಿಗದೇ ನಿಧನರಾಗುತ್ತಿದ್ದಾರೆ. NOTTO (ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ) ಸೂಚಿಸುವ ವರದಿ ಪ್ರಕಾರ ವಾರ್ಷಿಕವಾಗಿ ಯಕೃತ್ತಿನ ಕಸಿ ಅಗತ್ಯವಿರುವ 30,000 ರೋಗಿಗಳ ಪೈಕಿ ಕೇವಲ 1500 ಮಂದಿ ಮಾತ್ರ ಈ ಜೀವ ಉಳಿಸುವ ವಿಧಾನದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಅಂತೆಯೇ, ಹೃದಯ ಮತ್ತು ಶ್ವಾಸಕೋಶದ ಕಸಿಗಾಗಿ ಕಾಯುತ್ತಿರುವವರ ಪರಿಸ್ಥಿತಿ ಗಂಭೀರವಾಗಿದೆ. ಭಾರತದಲ್ಲಿ ಅಂಗ ದಾನದ ಪ್ರಮಾಣವು ಪ್ರತಿ 10 ಲಕ್ಷ ಮಂದಿಗೆ 1 ಪ್ರತಿಶತಕ್ಕಿಂತ ಕಡಿಮೆಯಿದೆ ಮತ್ತು ಪ್ರತಿ 10 ಲಕ್ಷ ಮಂದಿಯಲ್ಲಿ ಒಬ್ಬರಿಗಿಂತ ಕಡಿಮೆ ವ್ಯಕ್ತಿಗಳು ತಮ್ಮ ಅಂಗಾಂಗಗಳನ್ನು ದಾನ ಮಾಡಲು ಬಯಸುತ್ತಾರೆ.

ಹೆಚ್ಚು ಜನಸಂಖ್ಯೆಯುಳ್ಳ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಒಂದಾಗಿರುವ ಭಾರತದಲ್ಲಿ ನಿಧನ ಹೊಂದಿದವರ ಅಂಗಾಂಗ ದಾನದ ಪ್ರಮಾಣ ಪ್ರತಿ 10 ಲಕ್ಷ ಮಂದಿಯಲ್ಲಿ ಒಬ್ಬರಿಗಿಂತ ಕಡಿಮೆಯಿದೆ. ಮೂಢನಂಬಿಕೆಗಳು, ಕಳಂಕ, ಕಸಿ ಸಂಯೋಜಕರ ಕೊರತೆ, ಮೆದುಳು ಸತ್ತ ರೋಗಿಗಳ ದಾಖಲಾತಿಯನ್ನು ಪ್ರಮಾಣೀಕರಿಸಲು ಮತ್ತು ನಿರ್ವಹಿಸಲು ಅಗತ್ಯವಾದ ಮೂಲಸೌಕರ್ಯಗಳ ಕೊರತೆ ಭಾರತದಲ್ಲಿ ಅಂಗಾಂಗ ದಾನ ಪ್ರಕ್ರಿಯೆಯಲ್ಲಿನ ಹಿನ್ನಡೆಗೆ ಕಾರಣವಾಗಿದೆ.

ಸ್ಪರ್ಶ್‌ನ ವಾಕಥಾನ್ ಅಂಗಾಂಗ ದಾನದ ಸುತ್ತಲಿನ ಮಿಥ್ಯೆಗಳನ್ನು ಪರಿಹರಿಸುವ ಪ್ರಯತ್ನವಾಗಿದೆ ಹಾಗೂ ಅಂಗಾಂಗ ದಾನಕ್ಕೆ ಇನ್ನಷ್ಟು ಮಂದಿ ಮುಂದೆ ಬರುವಂತೆ ಪ್ರೇರೇಪಿಸುತ್ತದೆ. ಅಲ್ಲದೆ, ಅಂಗಾಂಗ ಕಸಿಯಿಂದಾಗಿ ರೋಗಿಗಳು ಮತ್ತು ಅವರ ಕುಟುಂಬಗಳ ಜೀವನದ ಮೇಲೆ ಬೀರುವ ಸಕಾರಾತ್ಮಕ ಪರಿಣಾಮವನ್ನು ಒತ್ತಿ ಹೇಳುತ್ತದೆ.

ಮೆಚ್ಚುಗೆ ಮತ್ತು ಕೃತಜ್ಞತೆಯ ಸಂಕೇತವಾಗಿ, ಸ್ಪರ್ಶ್ ಆಸ್ಪತ್ರೆಯು ಕರ್ನಾಟಕದಾದ್ಯಂತದ ಎಲ್ಲಾ ದಾನಿಗಳ ಕುಟುಂಬಗಳಿಗೆ ದಾನಿಗಳ ಸವಲತ್ತು ಕಾರ್ಡ್‌ಗಳನ್ನು ಹಸ್ತಾಂತರಿಸಲಾಯಿತು. ದಾನಿಗಳ ಸವಲತ್ತು ಕಾರ್ಡ್ ಜೀವಮಾನದ ಮಾನ್ಯತೆ ಹೊಂದಿದ್ದು, ಸ್ಪರ್ಶ್ ಆಸ್ಪತ್ರೆಗಳ ಕರ್ನಾಟಕದ ಎಲ್ಲಾ ಘಟಕಗಳಲ್ಲಿ ನಾನಾ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

Advertisement

ಈ ಉಪಕ್ರಮದ ಕುರಿತು ಮಾತನಾಡಿದ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಅಧ್ಯಕ್ಷ ಡಾ.ಶರಣ ಶಿವರಾಜ್ ಪಾಟೀಲ್, ಅಂಗಾಂಗ ದಾನಕ್ಕೆ ಜೀವನವನ್ನು ಬದಲಾಯಿಸುವ ಶಕ್ತಿ ಇದೆ. ಒಬ್ಬ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರಕ್ಕೆ ಅನೇಕರ ಜೀವನದಲ್ಲಿ ಬದಲಾವಣೆ ಉಂಟುಮಾಡುವ ಅದ್ಭುತ ಸಾಮರ್ಥ್ಯವಿದೆ. ಪ್ರಸ್ತುತ ಬೇಡಿಕೆಯಿರುವ ಅಂಗಗಳ ಸಂಖ್ಯೆ ಮತ್ತು ಲಭ್ಯವಿರುವ ಅಂಗಗಳ ನಡುವೆ ಬೃಹತ್‌ ಅಂತರವಿದೆ. ಅಂಗಾಂಗ ದಾನದ ಬಗ್ಗೆ ಜನಜಾಗೃತಿ ಮೂಡಿಸಿ ದಾನಿಗಳಾಗಿ ಮುಂದೆ ಬರುವಂತೆ ಪ್ರೋತ್ಸಾಹಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು.

ನಮ್ಮ ದತ್ತಿ ನಿಧಿ ಘಟಕವಾಗಿರುವ ‘ಸ್ಪರ್ಶ್ ಫೌಂಡೇಶನ್’, ಅಶಕ್ತರಾಗಿರುವ ಮತ್ತು ಸಂಕೀರ್ಣ ವೈದ್ಯಕೀಯ ಪರಿಸ್ಥಿತಿ ಎದುರಿಸುತ್ತಿರುವ ವ್ಯಕ್ತಿಗಳಿಗೆ ಅಂಗಾಂಗ ಕಸಿ ನಡೆಸಲು ನೆರವಾಗುತ್ತದೆ. ಈ ಒಂದು ಕಾರ್ಯಕ್ರಮದ ಮೂಲಕ ನಾವು ಅಂಗಾಂಗ ದಾನಕ್ಕೆ ಸಂಬಂಧಿಸಿದ ಮೂಢನಂಬಿಕೆ ಮತ್ತು ಕಳಂಕವನ್ನು ಪರಿಹರಿಸಲು ಬಯಸುತ್ತೇವೆ. ಇಂದು ನಮಗೆ ಸಿಕ್ಕಿರುವ ಅಗಾಧವಾದ ಬೆಂಬಲದಿಂದ ನಮಗೆ ಸಂತಸವಾಗಿದೆ ಹಾಗೂ ಅಂಗಾಂಗ ದಾನವನ್ನು ಬೆಂಬಲಿಸಲು ಹಲವಾರು ಜನರು ಮುಂದಾಗುತ್ತಿರುವುದು ಉತ್ತೇಜನಕಾರಿ” ಎಂದು ಶರಣ್ ಅವರು ಹೇಳಿದರು.

ಇತ್ತೀಚೆಗಷ್ಟೇ, ಸ್ಪರ್ಶ್, ಅಂಗಾಂಗ ಕಸಿ ಮತ್ತು ಅಂಗಾಂಗ ವೈಫಲ್ಯದ ನಿರ್ವಹಣೆಯಲ್ಲಿ ಇರುವ ಅಂತರ ಕಡಿಮೆಗೊಳಿಸಲು ವಿನ್ಯಾಸಗೊಳಿಸಲಾದ ಬಹು ಅಂಗಾಂಗ ಕಸಿ ಕೇಂದ್ರವನ್ನು ಪ್ರಾರಂಭಿಸಿದೆ; SPARSH ನಲ್ಲಿನ 50 ಸದಸ್ಯರ ಬಹುಶಿಸ್ತೀಯ ತಂಡವು ಹೆಚ್ಚು ನುರಿತ ಮತ್ತು ಅನುಭವಿ ವೈದ್ಯರ ಗುಂಪನ್ನು ಒಳಗೊಂಡಿದೆ. ಸ್ಪರ್ಶ್‌ನ ಎಲ್ಲಾ ಘಟಕಗಳು ಹೃದಯ ವೈಫಲ್ಯ ಕ್ಲಿನಿಕ್, ಶ್ವಾಸಕೋಶದ ವೈಫಲ್ಯ ಕ್ಲಿನಿಕ್ ಮತ್ತು ಲಿವರ್ ವೈಫಲ್ಯ ಕ್ಲಿನಿಕ್ ಅನ್ನು ಹೊಂದಿವೆ. ಕಳೆದ ಹಲವಾರು ವರ್ಷಗಳಿಂದ, ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ ಮತ್ತು ಮೂಳೆ ಮಜ್ಜೆಯ ಕಸಿ ಕ್ಷೇತ್ರಗಳಲ್ಲಿ ಸ್ಪರ್ಶ್ ಕಳೆದ ಹಲವು ವರ್ಷಗಳಿಂದ ಪ್ರವರ್ತಕ ಕೆಲಸವನ್ನು ಕೈಗೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next