Advertisement

“ಆಡಳಿತ ವೈಫಲ್ಯ: ಬಿಜೆಪಿಗೆ ಸೋಲಿನ ಆಘಾತ’

09:53 PM Apr 08, 2019 | Team Udayavani |

ಬಂಟ್ವಾಳ: ಅಭಿವೃದ್ದಿ ಕುರಿತು ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಆಡಳಿತ ವೈಫಲ್ಯವೇ ಈ ಬಾರಿ ಬಿಜೆಪಿಗೆ ಸೋಲಿನ ಆಘಾತವನ್ನು ಕೊಡಲಿದೆ ಎಂದು ಹಿರಿಯ ನ್ಯಾಯವಾದಿ, ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್‌ ರೈ ಆರೋಪ ಮಾಡಿದರು.

Advertisement

ಅವರು ಎ. 6ರಂದು ಬಂಟ್ವಾಳ ಪುರಸಭಾ ವ್ಯಾಪ್ತಿಯ ಶಾಂತಿಯಂ ಗಡಿ ಪರಿಸರದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಪರ ಮತಯಾಚನೆ ಪಾದಯಾತ್ರೆ ಕೈಗೊಂಡು ಮಾತನಾಡಿ, ನಳಿನ್‌ ಎರಡು ಅವಧಿ ಸಂಸದರಾದರೂ ಮಂಗಳೂರು ನಗರವನ್ನು ಅಭಿವೃದ್ಧಿ ಮಾಡಿಸುವಲ್ಲಿ ಸಂಪೂರ್ಣ ಸೋಲು ಕಂಡಿದ್ದಾರೆ.

ಮಿಥುನ್‌ ರೈ ಒಬ್ಬ ಸಮರ್ಥ, ಯುವ ಹಾಗೂ ಸೃಜನಶೀಲ ವ್ಯಕ್ತಿತ್ವ ಹೊಂದಿರುವ ಅಭ್ಯರ್ಥಿ. ಜನರ ಒಲವು ಕಾಂಗ್ರೆಸ್‌ ಪರವಾಗಿದೆ ಎಂದವರು ಭರವಸೆ ವ್ಯಕ್ತ ಮಾಡಿದರು. ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ.

ಬೆಲೆ ಏರಿಕೆಯಿಂದಾಗಿ ಬಡವರು, ಸಾಮಾನ್ಯ ವರ್ಗದವರ ದೈನಂದಿನ ಖರ್ಚು ನಿರ್ವಹಣೆಗಾಗಿ ಸಾಕಷ್ಟು ಕಷ್ಟವಾಗುತ್ತಿದೆ. ಈ ದೇಶವನ್ನು ಉಸಿರುಗಟ್ಟಿದ ವಾತಾವರಣದಿಂದ ಮುಕ್ತಗೊಳಿಸಲು ಜನತೆ ಮೋದಿ ಯವರನ್ನು ತಿರಸ್ಕರಿಸಲಿದ್ದಾರೆ ಎಂದರು.

ಶಾಂತಿಯಂಗಡಿ, ಪರ್ಲಿಯಾ, ಮಧ್ವ, ತಾಳಿಪಡು³, ಕೊಡಂಗೆ, ಕೈಕಂಬ ಪರಿಸರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ಅಶ್ವನಿ ಕುಮಾರ್‌ ರೈ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಯಾಚನೆ ನಡೆಸಿದರು.

Advertisement

ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಮಾಜಿ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಮಾಜಿ ಉಪಾಧ್ಯಕ್ಷ ಮಹಮ್ಮದ್‌ ನಂದರಬೆಟ್ಟು, ಯುವ ಕಾಂಗ್ರೆಸಿನ ಚಿತ್ತರಂಜನ್‌ ಶೆಟ್ಟಿ ಬೊಂಡಾಲ, ಸದಸ್ಯರಾದ ಮಹಮ್ಮದ್‌ ಶರೀಫ್‌ ಶಾಂತಿಯಂಗಡಿ, ಲುಕ್ಮಾನ್‌ ಕೈಕಂಬ, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್‌ ಕುಕ್ಕಾಜೆ, ಹಂಝ ಮಂಚಿ, ಪ್ರಮುಖರಾದ ಅಮೀರ್‌ ತುಂಬೆ, ಸ್ಟೀವನ್‌ ಡಿ’ಸೋಜಾ, ಗೋಪಾಲಕೃಷ್ಣ ತುಂಬೆ, ಮಹಮ್ಮದಾಲಿ ಶಾಂತಿ ಯಂಗಡಿ, ಅಶ್ರಫ್‌ ಕೈಕಂಬ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next