Advertisement
ಕಾಂಗ್ರೆಸ್ ಅಭ್ಯರ್ಥಿ ಡಾ| ಎ.ಬಿ. ಮಾಲಕರೆಡ್ಡಿ, ಬಿಜೆಪಿ ಅಭ್ಯರ್ಥಿ ಡಾ| ವೆಂಕಟರೆಡ್ಡಿ ಮುದ್ನಾಳ ಹಾಗೂ ಜೆಡಿಎಸ್ ಅಭ್ಯರ್ಥಿ ಎ.ಸಿ. ಕಾಡ್ಲೂರ ಈಗಾಗಲೇ ವಡಗೇರಾ, ಹಯ್ನಾಳ, ದೋರಹಳ್ಳಿ ಜಿಪಂ ವ್ಯಾಪ್ತಿಯಲ್ಲಿ ಪ್ರತಿದಿನ 8 ಗಂಟೆ ಹಳ್ಳಿಗಳಲ್ಲಿ ಪ್ರಚಾರ ಪ್ರಚಾರ ಮಾಡುತ್ತಿದ್ದಾರೆ.
ಮತ ಹಾಕುವಂತೆ ಬೇಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಯಾದಗಿರಿ ಮತಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಿ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಅವರು ಆರನೇ ಬಾರಿಗೆ ಶಾಸಕರಾಗಬೇಕೆಂಬ ಹಂಬಲದೊಂದಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ತಮ್ಮ ಕಾರ್ಯಕರ್ತರೊಂದಿಗೆ 83ರ ಇಳಿ ವಯಸ್ಸಿನಲ್ಲಿಯೂ ಪ್ರಚಾರ ಕೈಗೊಂಡಿದ್ದಾರೆ. ಇನ್ನೊಂದೆಡೆ ಭಾರತೀಯ ಜನತಾ ಪಕ್ಷ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಅವರ ಬದಲು ಅವರ ಸಹೋದರ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಟಿಕೆಟ್ ನೀಡಲಾಗಿದೆ.
Related Articles
Advertisement
ಇನ್ನೂ ಸುರಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಬಿಜೆಪಿ ಅಭ್ಯರ್ಥಿ ರಾಜುಗೌಡ, ಜೆಡಿಎಸ್ ಅಭ್ಯರ್ಥಿ ರಾಜಾ ಕೃಷ್ಣಪ್ಪ ನಾಯಕ, ಶಹಾಪುರ ಮತಕ್ಷೇತ್ರದಲ್ಲಿ ಹಾಲಿ ಶಾಸಕ ಗುರು ಪಾಟೀಲ, ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಜೆಡಿಎಸ್ ಅಭ್ಯರ್ಥಿ ಅಮೀನ್‌ರೆಡ್ಡಿ ಯಾಳಗಿ, ಗುರುಮಠಕಲ್ ಮತಕ್ಷೇತ್ರದಲ್ಲಿ ಹಾಲಿ ಶಾಸಕ ಬಾಬುರಾವ್ ಚಿಂಚನಸೂರ, ಬಿಜೆಪಿ ಅಭ್ಯರ್ಥಿ ಸಾಯಿಬಣ್ಣ ಬೋರಬಂಡಾ, ಜೆಡಿಎಸ್ ಅಭ್ಯರ್ಥಿ ನಾಗಣ್ಣಗೌಡ ಕಂದಕೂರ ಅವರು ನಾಮಪತ್ರ ಸಲ್ಲಿಸುವ ಮುಂಚೆಯೇ ಪ್ರಚಾರಕ್ಕೆ ಧಮುಕಿದ್ದು, ಮತದಾರರು ಯಾರಿಗೆ ಆರ್ಶೀವಾದ ಮಾಡಲಿದ್ದಾರೆ ಎಂಬುದು ಮೇ. 12ರ ಚುನಾವಣೆ ನಿರ್ಧರಿಸಲಿದೆಖಾಸಗಿ ವಾಹನ ಮಾಲೀಕರಿಗೆ ಲಾಭ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕೆಲವರಿಗೆ ಮುಳುವಾಗಿದ್ದರೆ, ಇನ್ನು ಖಾಸಗಿ ವಾಹನ ಮಾಲೀಕರಿಗೆ ಚುನಾವಣೆ ಬಂಪರ್ ಲಾಭ ತಂದುಕೊಡುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಖಾಸಗಿ ವಾಹನಗಳನ್ನು ಪಡೆದು ಗ್ರಾಮ ಗ್ರಾಮಗಳಿಗೆ ಪ್ರಚಾರಕ್ಕೆ ಕರೆದೊಯ್ಯುತ್ತಿದ್ದಾರೆ. ಈಗಾಗಲೇ ಒಂದು ತಿಂಗಳು ಬುಕ್ ಮಾಡಿಕೊಳ್ಳಲಾಗಿದೆ. ಈಗಾಗಲೇ ಚುನಾವಣೆ ರಂಗೇರಿದ್ದು, ಅಭ್ಯರ್ಥಿಗಳು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಆ ನಿಟ್ಟಿನಲ್ಲಿ ಮತ ಬ್ಯಾಂಕ್ ಭದ್ರಪಡಿಸಲು ಎಲ್ಲ ರಾಜಕೀಯ ತಂತ್ರ ರೂಪಿಸಿವೆ. ರಾಜಕೀಯ ತಂತ್ರದಲ್ಲಿ ಯಾರು ಯಶಸ್ವಿಯಾಗಿದ್ದಾರೆ ಎಂಬುದು ಚುನಾವಣೆ ಫಲಿತಾಂಶ ನಿರ್ಧರಿಸಲಿದೆ. ರಾಜೇಶ ಪಾಟೀಲ್ ಯಡ್ಡಳ್ಳಿ