Advertisement

ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ

02:45 PM Jun 10, 2019 | Team Udayavani |

ರಾಣಿಬೆನ್ನೂರ: ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಾಪುರಿ ಸ್ವಾಮೀಜಿ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಒದಗಿಸಬೇಕೆಂದು ಒತ್ತಾಯಿಸಿ ಬೆಂಗಳೂರಿಗೆ ಪಾದಯಾತ್ರೆ ಮೂಲಕ ವಿವಿಧ ಮಠಾಧಿಧೀಶರು, ಸಮಾಜದ ಮುಖಂಡರು ರವಿವಾರ ತೆರಳಿದರು.

Advertisement

ಈ ವೇಳೆ ಶ್ರೀಮಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಉದ್ಯೋಗ, ಶಿಕ್ಷಣ, ರಾಜಕೀಯ ಹಾಗೂ ಆರ್ಥಿಕವಾಗಿ ನಾಯಕ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶೇ. 7.5 ರಷ್ಟು ಮೀಸಲಾತಿ ಒದಗಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಶೇ.7 ರಷ್ಟು ಮೀಸಲಾತಿಗೆ ನೀಡಲು ಸಮ್ಮತಿಸಿದ್ದು, ಈಗಿರುವ ಶೇ. 3 ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಲು ಮುಂದಾಗದೆ ಕಾಲಹರಣ ಮಾಡುತ್ತ ಸಮುದಾಯದ ತಾಳ್ಮೆ ಕೆಣಕುತ್ತಿದೆ ಎಂದು ದೂರಿದರು.

ಪಾದಯಾತ್ರೆ ಬೆಂಗಳೂರಿಗೆ ತಲುಪಿದ ಬಳಿಕ ವಿಧಾನಸೌಧ ಆವರಣದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆ ಎದುರು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಿ.ಶ್ರೀರಾಮುಲು, ಸಂಸದ ದೇವೇಂದ್ರಪ್ಪ, ಕಂಪ್ಲಿ ಶಾಸಕ ಗಣೇಶ್‌, ಚಳ್ಳಕೆರೆ ಟಿ.ರಘುಮೂರ್ತಿ, ಜಗಳೂರಿನ ರಾಮಚಂದ್ರಪ್ಪ ಎಸ್‌., ಹರಿಹರದ ಎಸ್‌.ರಾಮಪ್ಪ, ಮಾಜಿ ಶಾಸಕ ಎಚ್.ಎಸ್‌. ಶಿವಶಂಕರ್‌, ಎಐಸಿಸಿ ಸಲಹಾ ಸಮಿತಿ ಸದಸ್ಯ ಟಿ.ಈಶ್ವರ್‌, ಜಿಲ್ಲಾ ಎಸ್‌ಟಿ ಘಟಕದ ಅಧ್ಯಕ್ಷ ರಮೇಶ ಅನವಟ್ಟಿ, ತಾಲೂಕು ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ಚಂದ್ರಪ್ಪ ಬೇಡರ್‌, ಸಮಾಜದ ಮುಖಂಡರಾದ ನಾಗಪ್ಪ ಸಣ್ಣಮನಿ, ಭೀಮಪ್ಪ ಗೋಣೆಪ್ಪನವರ, ರವೀಂದ್ರಗೌಡ ಪಾಟೀಲ, ಹರ್ತಿಕೋಟೆ ವೀರೇಂದ್ರಸಿಂಹ, ಶಶಿ ಬಸೇನಾಯ್ಕರ, ಸಣ್ಣತಮ್ಮಪ್ಪ ಬಾರ್ಕಿ, ನಾಗರಾಜ ಹಳ್ಳೆಳ್ಳಪ್ಪನವರ, ಹನುಮಂತಪ್ಪ ಬ್ಯಾಲದಹಳ್ಳಿ, ರಾಜೇಂದ್ರ ಬಸೇನಾಯ್ಕರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next