Advertisement
ಚಿಕ್ಕಬಳ್ಳಾಪುರದಿಂದ ಮಂಗಳೂರು ಕಡೆಗೆ ಹಿಂದೂಸ್ಥಾನ್ ಕಂಪೆನಿಗೆ ಸೇರಿದ ಸೋಪು, ಸೋಪಿನ ಹುಡಿ ಮೊದಲಾದವುಗಳನ್ನು ತರುತ್ತಿದ್ದ ಲಾರಿಯನ್ನು ನಸುಕಿನ ಜಾವ 2.30ರ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ ಬಿಳಿ ಇಂಡಿಕಾ ಕಾರಿನಲ್ಲಿ ಬಂದ ತಂಡ ಅಡ್ಡಗಟ್ಟಿತ್ತು. ಬಳಿಕ ಚಾಲಕ ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಅಂಬರೀಷ್ ಬಾಯಿಗೆ ಬಟ್ಟೆ ತುರುಕಿ, ಹಲ್ಲೆ ನಡೆಸಿ, ಕಟ್ಟಿ ಹಾಕಿ ಅವರಲ್ಲಿದ್ದ 5,200 ರೂ. ಮತ್ತು 2 ಸಾ. ರೂ. ಮೌಲ್ಯದ ಮೊಬೈಲ್‌ಫೋನನ್ನು ದೋಚಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇದೇ ರೀತಿ ಲಾರಿಯೊಂದರ ಚಾಲಕನನ್ನು ಕಟ್ಟಿ ಹಾಕಿ ಉಪ್ಪಿನಂಗಡಿಯ ಪಂಜಾಲದಲ್ಲಿ ದರೋಡೆ ಮಾಡಲಾಗಿತ್ತು. ಆ ಪ್ರಕರಣದ ಆರೋಪಿಗಳು ಸೆರೆ ಸಿಕ್ಕಿರಲಿಲ್ಲ.
Related Articles
ನಾವು ಲಾರಿಯಲ್ಲಿರುವ ಬಾಕ್ಸ್‌ಗಳನ್ನು ಖಾಲಿ ಮಾಡುತ್ತಿದ್ದೇವೆ. ಬಾಕ್ಸ್‌ನೊಳಗೆ ಶಂಕಾಸ್ಪದ ವಸ್ತುಗಳಿರುವ ಬಗ್ಗೆ ಈಗ ಹೇಳಲು ಸಾಧ್ಯವಿಲ್ಲ. ತನಿಖೆ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಲಾರಿಯಿಂದ ಕೆಲವು ಬಾಕ್ಸ್ ಕಳವುಲಾರಿಯಲ್ಲಿದ್ದ ಮೂರು ಬಾಕ್ಸ್‌ಗಳನ್ನು ದರೋಡೆಕೋರರು ಒಡೆದು ನೋಡಿದ್ದಾರೆ. ಅದನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿಯೇ ಬಿಟ್ಟು ಹೋಗಿದ್ದು, ಅದರಲ್ಲಿ ಅವರು ಏನನ್ನು ಹುಡುಕಾಡಿದ್ದಾರೆ ಎಂಬ ಕುತೂಹಲ ಮೂಡಿದೆ. ಕೆಲವು ಬಾಕ್ಸ್‌ಗಳನ್ನು ಜತೆಯಲ್ಲಿ ಕೊಂಡೊಯ್ದಿದ್ದಾರೆ ಎಂದೂ ತಿಳಿದು ಬಂದಿದೆ. ಘಟನೆ ಸಂಭವಿಸುವ ಹೊತ್ತಿಗೆ ಅನತಿ ದೂರಲ್ಲಿ ಜೀಪೊಂದು ಸಂಚರಿಸುತ್ತಿತ್ತೆಂದು ತಿಳಿಸಲಾಗಿದ್ದು, ಇದು ದರೋಡೆಕೋರರ ಬೆಂಗಾವಲು ಕೆಲಸ ಮಾಡುತ್ತಿರಬೇಕೆಂದು ಊಹಿಸಲಾಗಿದೆ.