ರಾಮನಗರ: ತಮ್ಮ ರಾಜಕೀಯ ಜೀವನದಲ್ಲೆಂದು ಕಾಂಗ್ರೆಸ್ ಪಕ್ಷ ಇಷ್ಟು ಹೀನಾಯ ಸ್ಥಿತಿ ತಲುಪಿದ್ದನ್ನು ಕಂಡಿಲ್ಲ ಪಕ್ಷ ನಿರ್ನಾಮವಾಗುವ ಮುನ್ನ ಜೆಡಿಎಸ್‌ನೊಂದಿಗಿನ ಮೈತ್ರಿ ಬಗ್ಗೆ ಎಚ್ಚೆತ್ತುಕೊಳ್ಳಿ ಎಂದು ಹಿರಿಯ ಕಾಂಗ್ರೆಸ್ಸಿಗ, ಎಂಎಲ್ಸಿ ಸಿ.ಎಂ.ಲಿಂಗಪ್ಪ ತಮ್ಮ ಪಕ್ಷದ ನಾಯಕರಿಗೆ ಸಲಹೆ ನೀಡಿದರು.
ಮೈತ್ರಿಯಿಂದ ಪಕ್ಷಕ್ಕೆ ನಷ್ಟ ಹೇಗೆ?: ಲೋಕ ಸಭೆಗೆ ರಾಜ್ಯದಿಂದ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ಏಕೈಕ ಸಂಸದ ಡಿ.ಕೆ.ಸುರೇಶ್. ರಾಜ್ಯದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿ ದ್ದರು. 7 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾ ಗಿತ್ತು. 21 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 1 ಕ್ಷೇತ್ರ ದಲ್ಲಿ ಮಾತ್ರ ಗೆಲುವು ಕಂಡಿದೆ. ಇಂತಹ ಹೀನಾಯ ಸೋಲು ತಾವು ರಾಜಕೀಯ ಜೀವನದಲ್ಲಿ ಎಂದೂ ಕಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಉಡುಪಿ- ಚಿಕ್ಕಮಗ ಳೂರು ಕ್ಷೇತ್ರ ಮತ್ತು ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಅಭ್ಯ ರ್ಥಿಗಳೇ ಸಿಗದೆ, ಕಾಂಗ್ರೆಸ್ ಅಭ್ಯರ್ಥಿಯನ್ನು ತೆನೆ ಹೊತ್ತ ಮಹಿಳೆಯ ಗುರುತಿನ ಮೇಲೆ ಸ್ಪರ್ಧಿಸಬೇಕಾ ಯಿತು. ಕಾಂಗ್ರೆಸ್ ಚಿಹ್ನೆಯ ಮೇಲೆ ಸ್ಪರ್ಧೆ ನಡೆದಿದ್ದರೆ ಆ ಕ್ಷೇತ್ರವನ್ನು ಉಳಿಸಿಕೊಳ್ಳಬಹುದಿತ್ತು. ಬಿಜಾಪುರ ಕಾಂಗ್ರೆಸ್ ಕೋಟೆ, ಅದನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದರಿಂದ ಪಕ್ಷ ಗೆದ್ದೇಗೆಲ್ಲಬಹುದಾದ ಕ್ಷೇತ್ರವನ್ನು ಕಳೆದಕೊಂಡಂತಾಯ್ತು ಎಂದು ಮೈತ್ರಿಯಿಂದಾಗಿ ತಮ್ಮ ಪಕ್ಷಕ್ಕೆ ಆದ ನಷ್ಟವನ್ನು ವಿವರಿಸಿದರು.
ಜೆಡಿಎಸ್‌ಗೆ ಆರ್ಥಿಕ ಶಕ್ತಿ ತುಂಬಲು ಅವಕಾಶ: ರಾಜ್ಯ ದಲ್ಲಿ ಮೈತ್ರಿ ಪಕ್ಷಕ್ಕೆ (ಜೆಡಿಎಸ್) ಆರ್ಥಿಕವಾಗಿ ಶಕ್ತಿ ತುಂಬಲು ಅವಕಾಶ ಕೊಟ್ಟಿದ್ದು ಕಾಂಗ್ರೆಸ್. ಹೀಗಾಗಿ ಯೇ ಅವರು ಮೂರು ಕ್ಷೇತ್ರಗಳಲ್ಲಿ 150, 80 ಮತ್ತು 60 ಕೋಟಿ ರೂ ವೆಚ್ಚ ಮಾಡಲು ಸಾಧ್ಯವಾಯಿತು. ಆದರೆ ಅವರು ಆರ್ಥಿಕ ಶಕ್ತಿ ಬಂದಿದ್ದು ಯಾವ ರೀತಿ, ಇಷ್ಟು ಹಣ ಕ್ರೂಢೀಕರಿಸಲು ಸಾಧ್ಯವಾಗಿದ್ದು ಹೇಗೆ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ.
Advertisement
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಡಿ.ಕೆ.ಸುರೇಶ್ ಗೆದ್ದ ಹಿನ್ನೆಲೆಯಲ್ಲಿ ಮತದಾರರಿಗೆ ಕೃತ ಜ್ಞತೆ ಅರ್ಪಿಸಲು ಅವರು ಸುದ್ದಿಗೋಷ್ಠಿ ಕರೆದಿದ್ದರು.
Related Articles
Advertisement
ಅಧಿಕಾರ ಬಂದಾಗ ತಗ್ಗಿ ಬಗ್ಗಿ ನಡೆಯಬೇಕು. ಆದರೆ ಅಧಿಕಾರವನ್ನು ತಲೆಗೇರಿಸಿಕೊಂಡರೆ ಫಲಿ ತಾಂಶ ಹೀಗೆ ಬರುತ್ತೆ ಎಂದು ಪರೋಕ್ಷವಾಗಿ ಜೆಡಿ ಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಕಸ್ಮಾತ್ ಅಧಿಕಾರ ಪಡೆದವರು (ಜೆಡಿಎಸ್) ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮದ 7 ಕ್ಷೇತ್ರ ಪಡೆದುಕೊಂಡು 3 ಕ್ಷೇತ್ರಗಳಲ್ಲಿ ಕುಟುಂಬ ಸದಸ್ಯರಿಗೆ, 2 ಕ್ಷೇತ್ರದಲ್ಲಿ ಅನ್ಯ ಅಭ್ಯರ್ಥಿಗಳಿಗೆ ಇನ್ನು 2 ಕ್ಷೇತ್ರವನ್ನು ಅನ್ಯ ಪಕ್ಷದವರನ್ನು ನಿಲ್ಲಿಸಬೇಕಾಕಿಯಿತು ಎಂದು ಹೇಳಿದರು.
ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಇಂಗಿತ?: ಮೈತ್ರಿ ಮುರಿದು ಕೊಳ್ಳಿ ಎಂದು ತಮ್ಮ ಪಕ್ಷದ ನಾಯಕರಿಗೆ ಸಲಹೆ ನೀಡುತ್ತಿರುವ ಸಿ.ಎಂ. ಲಿಂಗಪ್ಪ , ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಾದರಿಯಾಗಬಹುದಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ವಿರೋಧಿಸುತ್ತಲೇ ಬಂದಿ ರುವ ತಾವು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ಯೋಚನೆ ಮಾಡಿದ್ದಾಗಿ, ಬಹುಶಃ ಇನ್ನು ನಾಲ್ಕು ವರ್ಷ ತಾವು ಈ ಸ್ಥಾನದಲ್ಲಿ ಮುಂದುವರಿಯುವುದು ಅನುಮಾನ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದರು.
ನಾಮಾವಶೇಷಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ: ರಾಜ್ಯದಲ್ಲಿ ಈ ಪರಿಯ ಹೀನಾಯ ಸ್ಥಿತಿಗೆ ಮೈತ್ರಿ ಕಾರಣ ಎಂಬುದು ಸ್ಪಷ್ಟವಾಗಿದೆ. ಮೈತ್ರಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಮಾವಶೇಷ ವಾಗಲಿದೆ. ಆದರೆ ಮೈತ್ರಿ ಮುರಿದುಕೊಳ್ಳಲು ತಮ್ಮ ಪಕ್ಷದಲ್ಲೇ ಕೆಲವರಿಗೆ ಇಷ್ಟವಿಲ್ಲ. ಕಾರಣ ಅಧಿಕಾರ (ಮಂತ್ರಿಗಿರಿ). ಪಕ್ಷದ ಕಾರ್ಯಕರ್ತರನ್ನು ಇವರು ಕಡೆಗಣಿಸುತ್ತಿದ್ದಾರೆ ಎಂದ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದರು. ಕಾಂಗ್ರೆಸ್ ನಾಯಕರು ಮೈತ್ರಿ ಮುರಿದುಕೊಳ್ಳುವುದೇ ಸರಿ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಕೆ.ಸುರೇಶ್‌ಗೆ 8 ಲಕ್ಷ ಮತಗಳನ್ನು ಗೆಲ್ಲಿಸಿದ ಮತದಾರರಿಗೆ ಲಿಂಗಪ್ಪ ಕೃತಜ್ಞತೆ ಸಲ್ಲಿಸಿದರು. ಗೆಲುವಿಗೆ ಸಹಕರಿಸಿದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಿಗೆ ಅಭಿನಂದನೆ ತಿಳಿಸಿದರು.
ಗೌಡರು ಮುತ್ಸದ್ದಿತನ ಮೆರೆಯಬೇಕಿತ್ತು:
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕಾಂಗ್ರೆಸ್ ಮುಖಂಡ ಕೆ.ಶೇಷಾದ್ರಿ ಮಾತನಾಡಿ ಅತ್ಯಂತ ಹಿರಿಯ ರಾಜಕರಣಿ ಎಚ್.ಡಿ.ದೇವೇಗೌಡರು ಮೈತ್ರಿ ಸರ್ಕಾರದ ಉಪಯೋಗ ಪಡೆದು ತಮ್ಮ ಮೊಮ್ಮಕ್ಕಳನ್ನು ರಾಜಕೀಯಕ್ಕೆ ಇಳಿಸುವ ಮುನ್ನ ಮುತ್ಸದ್ದಿಯಾಗಿ ಯೋಚಿಸಬೇಕಿತ್ತು. ರಾಷ್ಟ್ರದ ನಾಯಕರ ಪೈಕಿ ಒಬ್ಬರಾದ ಶರದ್ ಪವಾರ್ ತಮ್ಮ ಮೊಮ್ಮಗನಿಗೆ ಸ್ಥಾನವನ್ನು ಬಿಟ್ಟು ಕೊಟ್ಟು ಮಾದರಿಯಗಿದ್ಧಾರೆ ಎಂದರು. ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆರ್.ದೊಡ್ಡ ವೀರಯ್ಯ, ಜಯರಾಮಯ್ಯ, ಇಟ್ಟಮಡು ಗ್ರಾಪಂ ಮಾಜಿ ಅಧ್ಯಕ್ಷ ರಾಮನಹಳ್ಳಿ ನಾಗೇಶ್, ಬಿಡದಿ ಪುರಸಭೆ ಸದಸ್ಯ ಮಹೀಪತಿ, ನಗರಸಭೆ ಮಾಜಿ ಸದಸ್ಯ ದೊಡ್ಡಿ ಸುರೇಶ್, ಮುಖಂಡರಾದ ಗೋಪಾಲ್ರಾಜು, ಉಮಾಶಂಕರ್, ಆಂಜನಪ್ಪ, ಗಂಗಾಧರ್, ಮಹದೇವಯ್ಯ, ಮುಕುಂದ, ಉಮೇಶ್ ಮುಂತಾದವರು ಹಾಜರಿದ್ದರು.