Advertisement
ಕೆಲವೊಂದು ಅಭ್ಯಾಸಗಳೇ ಹಾಗೆ ಪ್ರಾಣಕ್ಕೆ ಅಪಾ ಯವೆಂದು ತಿಳಿದಿದ್ದರೂ ಬಿಡಲಾಗದ ಪರಿ ಸ್ಥಿತಿ. ಕೆಲವೊಂದು ಆಟ, ಚಟಗಳು ಈ ರೀತಿ ಮನುಷ್ಯರನ್ನು ದಾಸರನ್ನಾಗಿ ಮಾಡಿ ಕೊಂಡು ಅವರನ್ನು ಶಾಶ್ವತವಾಗಿ ಸಾವಿನ ಕೂಪಕ್ಕೆ ತಳ್ಳಿ ಬಿಡುತ್ತದೆ. ಅದರಲ್ಲಿ ತಂಬಾಕು ಸೇವನೆಯೂ ಒಂದು. ದೃಶ್ಯ, ಶ್ರವ್ಯ ಮಾಧ್ಯಮ ಗಳು ನಿರಂತರವಾಗಿ ತಂಬಾಕು ಸೇವನೆ ಪ್ರಾಣಕ್ಕೆ ಹಾನಿ ಎಂದು ಬಿಂಬಿಸಿದರೂ ಬುದ್ದಿ ವಂತ ರೆಲ್ಲರೂ ಅದನು ಸೇವಿಸುವುದನ್ನು ಮಾತ್ರ ಬಿಟ್ಟಿಲ್ಲ. ತಂಬಾಕು ಒಂದು ಅಮಲು ಪದಾ ರ್ಥ ವಾಗಿದ್ದು, ಸಿಗರೇಟ್, ಬೀಡಿಗಳಲ್ಲಿ ಇದರ ಬಳಕೆ ಅಧಿಕವಾಗಿರುತ್ತದೆ. ಸತತವಾದ ಇದರ ಸೇವ ನೆಯೂ ಮನುಷ್ಯನಿಗೆ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗುತ್ತದೆ.
Related Articles
ಪ್ರಪಂಚದಲ್ಲಿ 1.1 ಬಿಲಿಯನ್ ಜನರು ತಂಬಾಕನ್ನು ಸೇವಿ ಸುತ್ತಾರೆ. ಭಾರತದಲ್ಲಿ 267 ಮಿಲಿ ಯನ್ ಜನರು ಈ ಮಾದಕ ವಸ್ತುವಿನ ದಾಸರಾ ಗಿದ್ದಾರೆ. ಇದರಲ್ಲಿ ಶೇಕಡಾ 14ರಷ್ಟು ಮಹಿಳೆ ಯರೂ ಇದ್ದಾರೆ ಎಂಬುದು ಶೋಚ ನೀಯ ವಿಷಯ. ಇತ್ತೀಚೆಗೆ ಮಕ್ಕಳಲ್ಲಿ ತಂಬಾಕು ಸೇವನೆಯ ಚಟ ಹೆಚ್ಚುತ್ತಿರುವುದು ಗಂಭೀರ ವಾಗಿ ಪರಿಗಣಿಸಬೇಕಾದ ವಿಷಯ. 13ರಿಂದ 15ವರ್ಷದೊಳಗಿ ಮಕ್ಕಳಲ್ಲಿ 14.6 ಶೇಕಡಾ ಮಕ್ಕಳು ಈಗಾಗಲೇ ತಂಬಾಕು ಸೇವನೆ ಚಟ ವನ್ನಾಗಿ ಸಿಕೊಂಡಿದ್ದಾರೆ. ಪ್ರತಿನಿತ್ಯ ತಂಬಾಕು ಸೇವನೆ ಯಿಂದ ಮರಣವನ್ನಪ್ಪುವವರ ಸಂಖ್ಯೆ ಸಾವಿ ರವನ್ನು ದಾಟುತ್ತಿ ದೆ.
Advertisement
ಆಧುನಿಕತೆಯತ್ತ ಓಡುತ್ತಿರುವ ಸಮಾಜ. ಸಂಬಂಧ, ಪ್ರೀತಿ, ಸ್ನೇಹಗಳಿಗಿಂತ ಪ್ರತಿಷ್ಠೆ, ಹಣದ ಆಮಿಷಗಳು ಹೆಚ್ಚಾದಾಗ ಜನರು ತಪ್ಪು ದಾರಿ ಹಿಡಿಯುವುದು. ಒಂದು ವರ್ಗ ಹಣ ವಿಲ್ಲದೆ ಚಿಂತೆಯಲ್ಲಿ ಮಾದಕ ವಸ್ತುಗಳಿಗೆ ದಾಸರಾ ಗುತ್ತಿದ್ದಾರೆ. ಅದೇ ಸಮಯದಲ್ಲಿ ಹಣ, ಅಧಿಕ ಾರದ ಸುಲಭ ಸಂಪಾದನೆಗಾಗಿ ಇನ್ನೊಂದು ವರ್ಗ ಇದೇ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ತಂಬಾಕು ಉತ್ಪನ್ನಗಳ ಮೇಲೆ ಸರಕಾರ ತೆರಿಗೆಗಳನ್ನು ಅಧಿಕ ಮಾಡಿದರೂ ಇವುಗಳ ಮಾರಾಟದಲ್ಲಿ ಮಾತ್ರ ಯಾವುದೇ ಕುಸಿತ ಉಂಟಾಗಲಿಲ್ಲ.
ಜೀವನ ಎಂಬುದು ತುಂಬಾ ಅಮೂಲ್ಯ ವಾದುದು. ಅದನ್ನು ನಮ್ಮ ಕೈಯಾರೆ ಹಾಳು ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಬದುಕು ಅರ್ಥ ಕಳೆದುಕೊಳ್ಳವುದಕ್ಕಿಂತ ಮೊದಲು ಎಚ್ಚೆತ್ತು ಕೊಂಡು ತಂಬಾಕಿಗೆ ದಾಸರಾ ಗುವು ದನ್ನು ಬಿಟ್ಟು ಬಿಡೋಣ. ಉತ್ತಮ ಕೌನ್ಸೆಲಿಂಗ್, ಕುಟುಂಬದವರ ಪ್ರೀತಿ, ಸ್ನೇಹದ ಮೂಲಕ ತಂಬಾಕು ದಾಸರಾದವರಿಗೆ ಬದುಕಲು ಮತ್ತೂಂದು ಅವಕಾಶ ಕಲ್ಪಿಸಿಕೊಡೋಣ.
ಶ್ವಾಸಕೋಶದ ಆರೋಗ್ಯಕ್ಕೆ ತಂಬಾಕು ತ್ಯಜಿಸಿಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ರಹಿತ ದಿನವನ್ನು ಆಚರಿಸುವಾಗ ಒಂದೊಂದು ಹೊಸ ಯೋಜನೆಗಳನ್ನಿಟ್ಟುಕೊಂಡಿರುತ್ತದೆ. ಹೆಚ್ಚಾಗಿ ಇವುಗಳೆಲ್ಲಾ ತಂಬಾಕು ಸೇವನೆಯ ದುಷ್ಪರಿಣಾಮವನ್ನು ಜನರಿಗೆ ತಿಳಿಸುವಂತದ್ದೇ ಆಗಿರುತ್ತದೆ. ಈ ಸಲ ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ (tobbacco and laungs health) ವಿಶೇಷ ಸಂದೇ ಶ ದೊಂದಿಗೆ ಆಚರಿಸಲಾಗುತ್ತದೆ. ಇದರ ಮುಖ್ಯ ಅಂಶಗಳು ಹೀಗಿವೆ. -ತಂಬಾಕು ಸೇವನೆಯಿಂದ ಶ್ವಾಸಕೋಶಕ್ಕೆ ಉಂಟಾಗುವ ಕ್ಯಾನ್ಸರ್ ಹಾಗೂ ಇತರ ಮಾರಕ ರೋಗಗಳು ಕುರಿತು ಅರಿವು ಮೂಡಿಸುವುದು.
– ಮನುಷ್ಯರ ದೇಹದಲ್ಲಿ ಶ್ವಾಸಕೋಶ ನಿರ್ವಹಿಸುವ ಪಾತ್ರ ಹಾಗೂ ಅದರ ಪ್ರಾಮುಖ್ಯ. -ಸುಶ್ಮಿತಾಶೆಟ್ಟಿ ಸಿರಿಬಾಗಿಲು